»   » ಬ್ರಹ್ಮಾಂಡ ಗುರೂಜಿ ಬಗ್ಗೆ ರವಿಚಂದ್ರನ್ ಕಾಮೆಂಟ್

ಬ್ರಹ್ಮಾಂಡ ಗುರೂಜಿ ಬಗ್ಗೆ ರವಿಚಂದ್ರನ್ ಕಾಮೆಂಟ್

Posted By:
Subscribe to Filmibeat Kannada
"ಈ ಹೊತ್ತಿಗೂ ಕೆಲವೇ ಜನರನ್ನು ನಾನು ಹೋಗೋ ಬಾರೋ ಎಂದು ಸಲುಗೆಯಿಂದ ಕರೆಯುತ್ತೇನೆ. ಅದರಲ್ಲಿ ಒಬ್ಬರು ಅರ್ಜುನ್ ಸರ್ಜಾ. ಇನ್ನೊಬ್ಬರು...ಹೇಳಿದರೆ ನೀವು ಆಶ್ಚರ್ಯ ಪಡ್ತೀರಾ. ಬ್ರಹ್ಮಾಂಡ ಗುರುಗಳು..." ಹೀಗೆಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳುತ್ತಿದ್ದಂತೆ ಪತ್ರಿಕಾಗೋಷ್ಠಿಯಲ್ಲಿ ಒಮ್ಮೆಲೆ ನಗೆಬಾಂಬ್ ಸಿಡಿದಂತಾಯಿತು.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಆತ್ಮೀಯ ಗೆಳೆಯ ಅರ್ಜುನ್ ಸರ್ಜಾ ಅವರ 'ಅಭಿಮನ್ಯು' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದರು. 'ಅಭಿಮನ್ಯು' ಹಾಗೂ 'ಚಕ್ರವ್ಯೂಹ' ಎಂಬೆರಡು ಚಿತ್ರಗಳು ನನ್ನದೇ. ಈಗ 'ಅಭಿಮನ್ಯು' ಹೆಸರಿನಲ್ಲಿ ಅರ್ಜುನ್ ಚಿತ್ರ ಮಾಡುತಿದ್ದಾರೆ. ಅವರ ಅಭಿಮನ್ಯು ಚಕ್ರವ್ಯೂಹ ಭೇದಿಸಿಕೊಂಡು ಬರಲಿ ಎಂದು ಹಾರೈಸಿದರು.

"ನಾನು ಹಾಗೂ ಅರ್ಜುನ್ ಸರ್ಜಾ ಒಟ್ಟಿಗೆ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು. ಅವರ ತಂದೆ ಶಕ್ತಿ ಪ್ರಸಾದ್ ನಮಗೆ ತುಂಬಾ ಆತ್ಮೀಯರು ಅದಕ್ಕಿಂತಲೂ ಹೆಚ್ಚಾಗಿ ವೆಲ್ ವಿಶರ್. ನಾವು ಈವಾಗ ಏನು ಸಿಕ್ಸ್ ಪ್ಯಾಕ್ ನೋಡುತ್ತಿದ್ದೇವೋ ಅರ್ಜುನ್ ಸರ್ಜಾ ಆ ಕಾಲಕ್ಕೆ ಸಿಕ್ಸ್ ಪ್ಯಾಕ್ ಮಾಡಿ ತೋರಿಸಿದವನು" ಎಂದರು.

"ಅರ್ಜುನ್ ಸರ್ಜಾ ಅವರಲ್ಲಿ ಡೆಡಿಕೇಷನ್ ಎಂಬುದು ಮೈಯಲ್ಲಿ ಸೇರಿಕೊಂಡುಬಿಟ್ಟಿದೆ. ನಾನು ಒಂದು ಸಲ ಸಡನ್ ಆಗಿ ಚೆನ್ನೈಗೆ ಹೋಗಬೇಕಾಗಿತ್ತು. ಜೊತೆಯಲಿ ಅರ್ಜುನ್ ಇದ್ದಾಗ. ಬಾರೋ ಹಂಗೆ ಚೆನ್ನೈಗೆ ಹೋಗೋಣ ಎಂದು ಕರೆದುಕೊಂಡು ಹೋದೆ...

ಬಟ್ಟೆ ಇಲ್ಲ ಎಂದಿದ್ದ. ನಾನು ಕೊಡುಸ್ತೀನಿ ಬಾರೋ ಎಂದೆ. ಅಪ್ಪನಿಗೆ ಹೇಳಿಲ್ಲ ಎಂದ. ನಾನೂ ಹೇಳ್ತೀನಿ ಬಾರೋ ಎಂದೆ. ಆಗ ಅವರ ತಂದೆಯವರಿಗೆ ಹೇಳಿದಾಗ. ನಿನ್ನ ಜೊತೆ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಪ್ಪ" ಎಂದಿದ್ದರು.

ಚೆನ್ನೈಗೆ ಹೋಗಿ ಬಂದ ಮೇಲೆ ಅವನು ಅಲ್ಲೇ ಸೆಟ್ಲ್ ಆಗ್ಬಿಟ್ಟ ಎಂದು ನೆನಪಿನ ಪುಟಗಳನ್ನು ರವಿಚಂದ್ರನ್ ತಿರುವಿ ಹಾಕಿದರು. ಪತ್ರಿಕಾಗೋಷ್ಠಿ ಬಳಿಕ ಬ್ರಹ್ಮಾಂಡ ಗುರುಗಳ ಬಗ್ಗೆ ಅವರು ಹೇಳಿದ್ದೇನೆಂದರೆ. ಆವಾಗ ನನ್ನ ಚಿತ್ರದಲ್ಲಿ ಆಕ್ಟ್ ಮಾಡಿದ್ದ. ಆಗಲೂ ನಾನು ಹೋಗೋ ಬಾರೋ ಎಂದು ಕರೆಯುತ್ತಿದ್ದೆ.

ಆಗ ಅವರು ಹಾಗೆಲ್ಲಾ ಕರೆದರೆ ನಾನು ಬರೋದೇ ಇಲ್ಲ ಎಂದು ತಪ್ಪಿಸಿಕೊಂಡು ಓಡಿಹೋಗುತ್ತಿದ್ದ. ಅವನನ್ನು ಸಮಾಧಾನ ಮಾಡಬೇಕೆಂದರೆ ಸಾಕಾಗಿ ಹೋಗುತ್ತಿತ್ತು. ಮೊನ್ನೆ ಬಿಗ್ ಬಾಸ್ ನೋಡುತ್ತಿದ್ದೆ. ವೇಲಾಯುಧ ತನಗೆ ಹೇಗೆ ಸಿಕ್ಕಿತು ಎಂದು ಹೇಳುತ್ತಿದ್ದ. (ಬಿಗ್ ಬಾಸ್ ಕುರಿತ ಸಮಗ್ರ ಸುದ್ದಿಗಳು)

ಆದರೆ ಇವನ ಬಾಯಲ್ಲಿ ಮಾತ್ರ ಎಲ್ಲ ಕೆಟ್ಟ ಕೆಟ್ಟ ಮಾತುಗಳೇ ಬರುತ್ತವೆ. ಇದನ್ಯಾಕೆ ವೇಲಾಯುಧ ಕೊಟ್ಟ ದೇವರು ಸರಿಮಾಡಲಿಲ್ಲ ಎಂದು ಹಾಸ್ಯಚಟಾಕಿ ಸಿಡಿಸಿದರು. ಇಂತಹವರೆಲ್ಲಾ ಸ್ವಾಮಿಗಳಾಗಿ ಬಿಟ್ಟರೆ ಇನ್ನೇನಾಗುತ್ತದೆ ಎಂಬ ವ್ಯಂಗ್ಯ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. (ಒನ್ಇಂಡಿಯಾ ಕನ್ನಡ)

English summary
Crazy Star Ravichandran recently commented on Brahmanda Guruji Narendra Babu Sharma. The actor addressing in Arjun Sarja's new film 'Abhimanyu' press Meet says he called both Arjun and Sharma are in peculiar way.
Please Wait while comments are loading...