»   » ಡಬ್ಬಿಂಗ್, ರೀಮೇಕ್ ಎರಡೂ ಬೇಡ: ಕ್ರೇಜಿ ಸ್ಟಾರ್

ಡಬ್ಬಿಂಗ್, ರೀಮೇಕ್ ಎರಡೂ ಬೇಡ: ಕ್ರೇಜಿ ಸ್ಟಾರ್

Posted By:
Subscribe to Filmibeat Kannada
ಡಬ್ಬಿಂಗ್ ಕನ್ನಡಕ್ಕೆ ಬೇಕೆ ಬೇಡವೇ ಎಂಬ ಸಮಸ್ಯೆಯನ್ನು ಕನ್ನಡ ಚಿತ್ರರಂಗ ತೀವ್ರವಾಗಿ ಅನುಭವಿಸುತ್ತಿರುವ ಈ ಹೊತ್ತಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಕ್ರೇಜಿಸ್ಟಾರ್ ಚಿತ್ರದ ಮುಹೂರ್ತದ ವೇಳೆ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ-ಮಾನ ಹೊಂದಿರುವ ರವಿಚಂದ್ರನ್ ನೇರ ಮಾತುಗಳಿಗೆ ಹೆಸರಾದವರು.

ಕ್ರೇಜಿಸ್ಟಾರ್ ಮುಹೂರ್ತದ ವೇಳೆ, ರವಿಚಂದ್ರನ್ ಹೇಳಿದ ಮಾತುಗಳು ಹೀಗಿವೆ..."ಡಬ್ಬಿಂಗ್ ಬರುವುದು ಬೇಡ, ಜೊತೆಗೆ ರೀಮೇಕ್ ಮಾಡುವುದನ್ನೂ ಕೂಡ ನಿಲ್ಸಿ. ಕನ್ನಡ ಚಿತ್ರರಂಗವೇನೂ ಕೈಲಾಗದ ಸ್ಥಿತಿಯಲ್ಲಿಲ್ಲ. ಡಬ್ಬಿಂಗ್ ಬಂದ್ರೆ ಇಡೀ ಕನ್ನಡ ಪರಿಸರ ನಾಶವಾಗುತ್ತೆ. ವೈಯಕ್ತಿಕವಾಗಿ ನನಗೇನೂ ನಷ್ಟವಿಲ್ಲ. ಅದನ್ನು ಎದುರಿಸೋ ಶಕ್ತಿ ನನಗಿದೆ. ಅದಕ್ಕಿಂತ ಒಳ್ಳೆ ಸಿನಿಮಾ ಮಾಡಿ ತೋರಿಸ್ತೀನಿ".

ಟಿವಿ ಚಾನಲ್ ಗಳು ದುಡ್ಡಿಗೋಸ್ಕರ ಯಾವ್ಯಾವುದೋ ಭಾಷೆಯ ಕಾರ್ಯಕ್ರಮಗಳನ್ನು ತಂದು ಡಬ್ ಮಾಡಿ ಪ್ರಸಾರ ಮಾಡುತ್ತಿವೆ. ಅಷ್ಟೇ ಅಲ್ಲ, ಸಿನಿಮಾ ಸೆಟಲೈಟ್ ಹಕ್ಕು ಖರೀದಿಸುವುದನ್ನು ಮೊದಲು ನಿಲ್ಲಿಸಲಿ. ಸಿನಿಮಾ ಗೆದ್ದ ಮೇಲೆ ತಗೊಳ್ಳಿ. ನನ್ನ ಸಿನಿಮಾ ಕೂಡ ಗೆದ್ರೆ ಮಾತ್ರ ಸೆಟಲೈಟ್ ಖರೀದಿಸಲಿ.

ಅದು ಬಿಟ್ಟು, ಟಿವಿಗಳು ಸಿಕ್ಕ ಸಿಕ್ಕ ಸಿನಿಮಾ ಖರೀದಿಸುವುದರಿಂದ ಸಿನಿಮಾ ಅನುಭವ, ಪ್ರೀತಿ ಇಲ್ಲದವರೂ ಸಿನಿಮಾ ಮಾಡುತ್ತಿದ್ದಾರೆ. ನಿಜವಾಗಿಯೂ ಸಿನಿಮಾ ಪ್ರೀತಿಸುವ ನಿರ್ಮಾಪಕರು ನಮ್ಮಲ್ಲಿ ಎಷ್ಟಿದ್ದಾರೆ? ಎಂಬುದು ಕ್ರೇಜಿಸ್ಟಾರ್ ಪ್ರಶ್ನೆ. ಡಬ್ಬಿಂಗ್ ಹಾಗೂ ರೀಮೇಕ್ ಎರಡೂ ಸಂಸ್ಕೃತಿ ಕನ್ನಡ ಚಿತ್ರರಂಗದಿಂದ ದೂರವಾಗಬೇಕೆಂಬುದು ರವಿಮಾಮನ ಕಳಕಳಿ.

ಆದರೆ, ಪ್ರೇಮಲೋಕದಂತ ಸ್ವಮೇಕ್ ಮಾಡಿ ಗೆದ್ದ ರವಿಚಂದ್ರನ್, ಅಣ್ಣಯ್ಯದಂತ ರೀಮೇಕ್ ಚಿತ್ರಗಳಲ್ಲೂ ನಟಿಸಿ ಗೆದ್ದಿದ್ದಾರೆ. ಇತ್ತೀಚಿಗಂತೂ ರವಿಚಂದ್ರನ್ ಸಾಕಷ್ಟು ರೀಮೇಕ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗ್ಯಾಕೆ ಈ ವರಸೆ ತಿಳಿಯುತ್ತಿಲ್ಲ!

ಚಿತ್ರರಂಗದಲ್ಲಿ ಒಬ್ಬೊಬ್ಬರು ಒಂದೊಂದು ಅಭಿಪ್ರಾಯಕ್ಕೆ ಬದ್ಧರಾಗಿ ನಿಲ್ಲುವುದನ್ನು ಮೊದಲು ನಿಲ್ಲಿಸಲಿ. ಎಲ್ಲರೂ ಒಗ್ಗಟ್ಟಾಗಿ ಎಲ್ಲರಿಗೂ ಅನುಕೂಲವಾಗುವಂತಿದ್ದು, ಜೊತೆಗೆ ಪ್ರೇಕ್ಷಕರಿಗೂ ಅನ್ಯಾಯವಾಗದಂತೆ ಕನ್ನಡ ಚಿತ್ರರಂಗ ಒಂದಾಗಿ ನಿಲ್ಲುವುದು ಎಂದು ಎಂಬುದು ಸದ್ಯದ ಬಹುದೊಡ್ಡ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)

English summary
Crazy Star Ravichandran spoke about Dubbing Issue, at his upcoming movie 'Crazy Star' launching time. He told to stop remake also. He did not want to come Dubbing Culture and also to stop remake practice of Kannada Film Industry.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada