For Quick Alerts
  ALLOW NOTIFICATIONS  
  For Daily Alerts

  Head Bush Trailer: ಲಾಂಗ್ ಹಿಡ್ದು ಜಯರಾಜ್ ಬರೆದ ಬೆಂಗಳೂರು ಭೂಗತಲೋಕದ ರಕ್ತಸಿಕ್ತ ಅಧ್ಯಾಯ!

  |

  ಬಹುನಿರೀಕ್ಷಿತ 'ಹೆಡ್‌ಬುಷ್' ಚಿತ್ರದ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಡಾನ್ ಜಯರಾಜ್ ಅವತಾರದಲ್ಲಿ ಡಾಲಿ ಧನಂಜಯ ಅಬ್ಬರಿಸಿದ್ದು, ಅಭಿಮಾನಿಗಳಿಗೆ ಟ್ರೈಲರ್ ಸಖತ್ ಕಿಕ್ ಕೊಡ್ತಿದೆ. ವಿಷ್ಯುವಲ್ಸ್, ಬಿಜಿಎಂ ಬೊಂಬಾಟ್ ಆಗಿದೆ. 70- 80ರ ದಶಕದ ಬೆಂಗಳೂರು ಭೂಗತಲೋಕದ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡಲಾಗಿದೆ. ಶೂನ್ಯ ನಿರ್ದೇಶನದ ಈ ಚಿತ್ರವನ್ನು ರಾಮ್ಕೋ ಸೋಮಣ್ಣ ಜೊತೆಗೆ ಧನಂಜಯ ನಿರ್ಮಿಸಿದ್ದಾರೆ.

  ದಶಕಗಳ ಹಿಂದೆ ಬೆಂಗಳೂರಿನಲ್ಲಿ ಜಯರಾಜ್ ಮತ್ತವನ ಗ್ಯಾಂಗ್ ಹಾವಳಿ ಹೇಗಿತ್ತು ಎನ್ನುವುದರ ಸಣ್ಣ ಝಲಕ್‌ ಅನ್ನು ಟ್ರೈಲರ್‌ನಲ್ಲಿ ಕೊಟ್ಟಿಕೊಟ್ಟಿದ್ದಾರೆ. ಕೆಂಪೇಗೌಡರು ಕಟ್ಟಿದ ನಗರದಲ್ಲಿ ರೌಡಿಸಂ ಹುಟ್ಟಿಕೊಂಡಿದ್ದು, ಜಯರಾಜ್ ನಂಬರ್ ವನ್ ಡಾನ್ ಆಗಿ ಬೆಳೆದಿದ್ದು ಹೀಗೆ ಸಾಗುತ್ತೆ. ಗಂಗಾ ಅಂಡ್ ಟೀಂ ಅವನಿಗೆ ಸಾಥ್ ಕೊಡುತ್ತಾ ಹೋಗಿದ್ದು, ಕೆಲ ರಾಜಕಾರಣಿಗಳು ಅವನನ್ನು ಬೆಳೆಸಿದ್ದು ಹೀಗೆ ಎಲ್ಲದರ ಇಣುಕು ನೋಟ ಎರಡೂವರೆ ನಿಮಿಷದ ಟ್ರೈಲರ್‌ನಲ್ಲಿದೆ. ಜಯರಾಜ್ ಪಾತ್ರದಲ್ಲಿ ಧನಂಜಯ ಮೊದಲ ನೋಟದಲ್ಲೇ ಗಮನ ಸೆಳೆದಿದ್ದಾರೆ. ಕೊತ್ವಾಲನಾಗಿ ವಶಿಷ್ಠ ಸಿಂಹ ಝಲಕ್ ಕೂಡ ಇದೆ.

  ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ಅಂಡರ್​ವರ್ಲ್ಡ್' ಪುಸ್ತಕ ಆಧರಿಸಿ 'ಹೆಡ್‌ಬುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಷ್ಟು ದಿನ ಬೆಂಗಳೂರು ಭೂಗತಲೋಕದ ಬಗ್ಗೆ ಅವರಿವರು ಹೇಳಿದ್ದನ್ನು ಕೇಳಿದ್ದವರಿಗೆ ಅದನ್ನು ದೃಶ್ಯರೂಪದಲ್ಲಿ ನೋಡುವ ಅವಕಾಶ ಸಿಗಲಿದೆ. ಟ್ರೈಲರ್ ನೋಡ್ತಿದ್ರೆ, ಸಿನಿಮಾ ಪ್ರೇಕ್ಷಕರ ಮನಗೆಲ್ಲುವ ಸುಳಿವು ಸಿಕ್ತಿದೆ.

  ಜಯರಾಜ್ ಆಗಿ ಡಾಲಿ ಆರ್ಭಟ

  ಜಯರಾಜ್ ಆಗಿ ಡಾಲಿ ಆರ್ಭಟ

  ಡಾನ್ ಜಯರಾಜ್ ಪಾತ್ರದಲ್ಲಿ ಧನಂಜಯ ನಿಜಕ್ಕೂ ಮೋಡಿ ಮಾಡಿದ್ದಾರೆ. ಬಾಡಿ ಲಾಂಗ್ವೇಜ್, ಲುಕ್ಕು, ಖದರ್ ಎಲ್ಲದರನ್ನು ಜಯರಾಜ್‌ನ ನೆನಪಿಸುವಂತೆ ಕಾಣ್ತಿದೆ. ಇನ್ನು ಪರ್ಫಾರ್ಮೆನ್ಸ್ ವಿಚಾರಕ್ಕೆ ಬಂದರೆ ಧನು ನಟರಾಕ್ಷಸನೇ ಸರಿ. ಸದಾ ಸಿಗರೇಟ್ ಹಿಡಿದು ಚಿಟಿಕೆ ಹೊಡೆಯುತ್ತಾ, ಎದುರಾಳಿಯ ರುಂಡ ಚೆಂಡಾಡುವ ಪರಿ, ಕಣ್ಣಲ್ಲೇ ಬೆಂಕಿ ಉಗುಳುತ್ತಾ ಡೈಲಾಗ್ ಹೇಳುವ ರೀತಿ ಮಜಾ ಕೊಡುತ್ತೆ. ಇಡೀ ಬೆಂಗಳೂರು ನಂದು ಎಂದು ಪಕ್ಕಾ ಗ್ಯಾಂಗ್‌ಸ್ಟರ್ ಜಯರಾಜ್ ಆಗಿ ಧನಂಜಯ ಖದರ್ ತೋರಿಸಿದ್ದಾರೆ.

  ಕೊತ್ವಾಲ, ಗಂಗಾ ಖದರ್ ಸೂಪರ್

  ಕೊತ್ವಾಲ, ಗಂಗಾ ಖದರ್ ಸೂಪರ್

  ಜಯರಾಜ್ ಪಾತ್ರದ ಸುತ್ತಾ 'ಹೆಡ್‌ಬುಷ್' ಸಿನಿಮಾ ಕಥೆ ಸುತ್ತುತ್ತೆ. ಆದರೂ ಚಿತ್ರದಲ್ಲಿ ಜಯರಾಜ್ ಬಂಟ ಗಂಗಾ ಆಗಿ ಲೂಸ್ ಮಾದ ಯೋಗಿ ಮಿಂಚಿದ್ದಾರೆ. ಇನ್ನು ಜಯರಾಜ್ ರೀತಿಯಲ್ಲೇ ಬೆಂಗಳೂರು ಭೂಗತಲೋಕದಲ್ಲಿ ಮೆರೆದ ಕೊತ್ವಾಲ್ ರಾಮಚಂದ್ರ ಪಾತ್ರದಲ್ಲಿ ವಸಿಷ್ಠ ಸಿನಿಮಾ ಅಬ್ಬರಿಸಿದ್ದಾರೆ. ಜಯರಾಜ್ ಇಲ್ಲದ ಸಮಸ್ಯೆದಲ್ಲಿ ಬೆಂಗಳೂರು ಭೂಗತಲೋಕದಲ್ಲಿ ನಂಬರ್ ವನ್ ಆಗಲು ಕೊತ್ವಾಲ ಹೇಗೆಲ್ಲಾ ಪ್ರಯತ್ನ ಪಟ್ಟ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗ್ತಿದೆ.

  ಮೇಕಿಂಗ್, ಬಿಜಿಎಂ ಸಿಂಪ್ಲಿ ಸೂಪರ್

  ಮೇಕಿಂಗ್, ಬಿಜಿಎಂ ಸಿಂಪ್ಲಿ ಸೂಪರ್

  'ಹೆಡ್‌ಬುಷ್' ಸಿನಿಮಾ ಮೇಕಿಂಗ್ ಸೊಗಸಾಗಿದೆ. 70-80ರ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ಅದು ಟ್ರೈಲರ್‌ನಲ್ಲಿ ಗೊತ್ತಾಗುತ್ತೆ. ಕಲಾಸಿಪಾಳ್ಯದ ಸುತ್ತಾಮುತ್ತಲಿನ ಪೇಟೆಗಳಲ್ಲಿ ಅವತ್ತಿನ ಕಾಲಕ್ಕೆ ಜಯರಾಜ ಆರ್ಭಟ ಹೇಗಿತ್ತು ಎನ್ನುವುದರ ಝಲಕ್ ನೋಡಬಹುದು. ಜಯರಾಜ್ ಉಪಟಳ ತಾಳಲಾರದೇ ಕೊನೆಗೆ ಪ್ರಧಾನಿಗಳೇ ಆತನನ್ನು ಮಟ್ಟ ಹಾಕುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವಂತಹ ಸನ್ನಿವೇಶವನ್ನು ತೋರಿಸಲಾಗಿದೆ. ಇನ್ನು ಡಾನ್ ಜಯರಾಜ್ ಕೋರ್ಟ್ ಹಾಲ್‌ ಒಳಗೆ ಲಾಂಗ್ ಹಿಡಿದು ಬರುವ ಸನ್ನಿವೇಶದ ಜೊತೆಗೆ ಟ್ರೈಲರ್ ಮುಗಿಯುತ್ತೆ. ಚರಣ್ ರಾಜ್ ಹಂಟಿಂಗ್ ಬಿಜಿಎಂ ಟ್ರೈಲರ್ ಹೈಲೆಟ್.

  ಅಕ್ಟೋಬರ್ 21ಕ್ಕೆ 'ಹೆಡ್‌ಬುಷ್' ತೆರೆಗೆ

  ಅಕ್ಟೋಬರ್ 21ಕ್ಕೆ 'ಹೆಡ್‌ಬುಷ್' ತೆರೆಗೆ

  ಡೈನಾಮಿಕ್ ಸ್ಟಾರ್ ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದಾವಣಗೆರೆಯಲ್ಲಿ 'ಹೆಡ್‌ಬುಷ್' ಚಿತ್ರದ ಪ್ರೀ ರಿಲೀಸ್ ಈವೆಂಟ್ ನೆರವೇರಿದೆ. ಹಲವು ದಿನಗಳಿಂದ ನಟ ಧನಂಜಯ ಬೆಲ್‌ಬಾಟಂ ಗೆಟಪ್‌ನಲ್ಲಿ ಊರೂರು ಸುತ್ತಿ ಸಿನಿಮಾ ಪ್ರಮೋಷನ್ ಮಾಡಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದ್ದು, ಇದೇ ಶುಕ್ರವಾರ ಮೊದಲ ಭಾಗವನ್ನು ತೆರೆಮೇಲೆ ನೋಡಬಹುದು.

  English summary
  Daali Dhananjaya Starrer Head Bush Movie Trailer released. Know More.
  Monday, October 17, 2022, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X