For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಜೊತೆ ತಪ್ಪಿದ ದರ್ಶನ್ ಭಾರಿ ಫೈಟ್

  |
  <ul id="pagination-digg"><li class="previous"><a href="/news/darshan-sangolli-rayanna-movie-release-15th-august-2012-067392.html">« Previous</a>
  ಬರೋಬ್ಬರಿ ಮೂವತ್ತು ಕೋಟಿ ಬಿಗ್ ಬಜೆಟ್ ನಿರ್ಮಾಣದ 'ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ಆತುರದಲ್ಲಿ ತೆರೆಗೆ ತರಲು ಸ್ವತಃ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರಿಗೆ ಇಷ್ಟವಿಲ್ಲ. ಕಾರಣ, ಚಿತ್ರದ ಹಾಕಿರುವ ಭಾರಿ ಬಂಡವಾಳ. ಹಾಕಿದ ಹಣ ವಾಪಸ್ ಪಡೆದುಕೊಳ್ಳುವ ಅಭಿಲಾಷೆ ಸಹಜವೇ. ಹೀಗಾಗಿ 'ಸಂಗೊಳ್ಳಿ ರಾಯಣ್ಣ' ಚಿತ್ರದ ಬಿಡುಗಡೆ ದಿನಾಂಕವಿನ್ನೂ ಪಕ್ಕಾ ಆಗಿಲ್ಲ. ಅಷ್ಟೇ ಅಲ್ಲ, ಬಿಡುಗಡೆ ದಿನ ಸ್ವಲ್ಪ ದೂರವೇ ಇದೆ ಎನ್ನಲಾಗುತ್ತಿದೆ.

  ಜೊತೆಗೆ ಸ್ವತಃ ದರ್ಶನ್ ಕೂಡ ಈ ವಿಷಯದಲ್ಲಿ ಚಿತ್ರದ ನಿರ್ಮಾಪಕರಿಗೆ ಸಾಥ್ ನೀಡಿದ್ದಾರೆ. 'ಚಿಂಗಾರಿ' ಚಿತ್ರದ ನಂತರ ನನ್ನ ಇನ್ನೊಂದು ಸಿನಿಮಾ ಬರಬೇಕಿತ್ತು. ಆದರೆ ಗ್ಯಾಪ್ ಜಾಸ್ತಿ ಇಡುವುದು ಅನಿವಾರ್ಯವಾಗಿದೆ. ಬರಲಿರುವ 'ಸಂಗೊಳ್ಳಿ ರಾಯಣ್ಣ' ಸಾಧಾರಣವಾದ ಚಿತ್ರವಲ್ಲ, ಎರಡು ಮೂರು ಚಿತ್ರಗಳಿಗಾಗುವಷ್ಟು ಬಂಡವಾಳವನ್ನು ನಿರ್ಮಾಪಕರು ಇದೊಂದೇ ಚಿತ್ರಕ್ಕೆ ಹಾಕಿದ್ದಾರೆ.

  ಅವರು ಹಾಕಿದ ಹಣ ವಾಪಸ್ ಬರಬೇಕೆಂದರೆ 'ಸಂಗೊಳ್ಳಿ ರಾಯಣ್ಣ'ನ ಚಿತ್ರದ ಮೊದಲು ಅಥವಾ ನಂತರ ನನ್ನ ಇನ್ನೊಂದು ಚಿತ್ರ ತೆರೆಗೆ ಬರಬಾರದು. ಆ ಕಾಳಜಿ ನನಗೆ ಇರಲೇಬೇಕಾದದ್ದು, ಇದೆ. ನನ್ನನ್ನು ನಂಬಿ ಸಿನಿಮಾ ಮಾಡುವ ನಿರ್ಮಾಪಕರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು" ಎಂದು ಮಾಧ್ಯಮದ ಪ್ರಶ್ನೆಯೊಂದಕ್ಕೆ ದರ್ಶನ್ ಕಳಕಳಿಯಿಂದ ಉತ್ತರಿಸಿದ್ದಾರೆ.

  ಮುಂದುವರಿದ ದರ್ಶನ್, "ಸದ್ಯಕ್ಕೆ ನನಗಿರುವ ಬೇಡಿಕೆಗೆ ಇನ್ನು ನಾಲ್ಕೈದು ವರ್ಷಗಳಿಗೆ ಆಗುವಷ್ಟು ಸಿನಿಮಾಗಳಿಗೆ ಸಹಿ ಮಾಡಬಹುದು. ಆದರೆ ಹಾಗೆ ಮಾಡಿದರೆ ನಿರ್ಮಾಪಕರಿಗೆ ಭಾರಿ ತೊಂದರೆಯಾಗುತ್ತದೆ. ನನ್ನನ್ನು ನಂಬಿ ನಿರ್ಮಾಪಕರು ಎಂಟು ಹತ್ತು ಕೋಟಿಯನ್ನು ತಮ್ಮ ಚಿತ್ರಗಳಿಗೆ ಸುರಿದಿರುತ್ತಾರೆ. ನಂತರ ಬಿಡುಗಡೆ ಒಂದಾದಮೇಲೆ ಇನ್ನೊಂದು ಎಂದಾದಾಗ ಹಣ ಹಾಕಿದ ನಿರ್ಮಾಪಕರ ಗತಿ ಏನಾಗಬೇಕು?" ಎಂದು ಆನಂದ್ ಅಪ್ಪುಗೋಳ್ ಪರ ನಿಂತಿದ್ದಾರೆ.

  ಚಿತ್ರತಂಡಕ್ಕೆ ಆಗಸ್ಟ್ 15ಕ್ಕೆ ಬಿಡುಗಡೆಯಾಗಿಲ್ಲ ಎಂಬ ಚಿಂತೆಯಾದರೆ, ಗಾಂಧಿನಗರದ ಕೆಲವರಿಗೆ ಚಿಂತೆ ಆಗಿದ್ದು ಬೇರೇಯದೇ ಸಂಗತಿಗೆ. ಅಂದು ಬಿಡುಗಡೆಯಾದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಚಿತ್ರ 'ಏಕ್ ಥಾ ಟೈಗರ್', ಕರ್ನಾಟಕದ ಬಾಕ್ಸ್ ಆಫೀಸನ್ನು ಕೂಡ ಕೊಳ್ಳೆ ಹೊಡೆದಿದೆ. ಹೀಗಿರುವಾಗ, ಆ ಚಿತ್ರಕ್ಕೆ ಪಕ್ಕಾ ಸ್ಪರ್ಧೆ ನೀಡಲು ದರ್ಶನ್ 'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಮಾತ್ರ ಸಾಧ್ಯವಿತ್ತು.

  ಹೀಗಿರುವಾಗ ಅನಾವಶ್ಯಕವಾಗಿ ರಜಾದಿನದ ಭಾರಿ ಕಲೆಕ್ಷನ್ ಬಾಲಿವುಡ್ ಚಿತ್ರ 'ಏಕ್ ಥಾ ಟೈಗರ್' ಪಾಲಾಯ್ತಲ್ಲಾ ಎಂಬುದು ಕೆಲವರ ಚಿಂತೆ, ಅದು ಹಲವರ ಪ್ರಕಾರ ನಿಜವೂ ಹೌದು. ರಾಷ್ಟ್ರೀಯ ರಜಾ ಇದ್ದುದರಿಂದ ಆ ದಿನ 'ಸಂಗೊಳ್ಳಿ ರಾಯಣ್ಣ' ಚಿತ್ರ ಬಿಡಗಡೆಯಾಗಿದ್ದರೆ ಸಂಗೊಳ್ಳಿ ರಾಯಣ್ಣರ ಜನ್ಮ ದಿನವೂ ಅಂದೇ ಆಗಿದ್ದರಿಂದ ಸಹಜವಾಗಿ ಸೆಂಟಿಮೆಂಟ್ ಕೂಡ ಸೇರಿಕೊಂಡು ಅನಿರೀಕ್ಷಿತ ದಾಖಲೆ ನಿರ್ಮಿಸಬಹುದಾಗಿತ್ತು. ಅಂತಹ ಅವಕಾಶ ಕೈತಪ್ಪಿದೆ ಎಂಬುದು ಹಲವರ ವಾದ. ಲೇಟ್ ಆದರೂ ಲೇಟೆಸ್ಟ್ ಆಗಿರುತ್ತದೆ ಎಂದಿದೆ ಚಿತ್ರತಂಡ, ಕಾಯಲೇಬೇಕು...(ಒನ್ ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/darshan-sangolli-rayanna-movie-release-15th-august-2012-067392.html">« Previous</a>
  English summary
  Challenging Star Darshan upcoming movie 'Sangolli Rayanna' had to come on 15th August 2012. but, its post production work not completed yet. So the movie couldn't release as the team wish. If this movie could release, it would be the competitor for released Salman Khan's movie Ek Tha Tiger. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X