»   » ಖಾವಿ ತೊಟ್ಟು ಗುಟ್ಟಾಗಿ ಆಶ್ರಮ ಸೇರಿದ ರವಿಶಂಕರ್

ಖಾವಿ ತೊಟ್ಟು ಗುಟ್ಟಾಗಿ ಆಶ್ರಮ ಸೇರಿದ ರವಿಶಂಕರ್

Posted By:
Subscribe to Filmibeat Kannada
ರವಿಶಂಕರ್ ಸಾಕಷ್ಟು ಕಲರ್ ಫುಲ್ ಆಗಿ ಮಿಂಚುತ್ತಿದ್ದಾರೆ. ಬಹಳಷ್ಟು ವಿಧದ ಬಟ್ಟೆ, ಅದರಲ್ಲೂ ಕಾವಿಬಟ್ಟೆಯನ್ನೂ ಧರಿಸಿ ಮೆರೆಯುವ ಸದಾವಕಾಶ ಅವರ ಮಡಿಲಿಗೆ ಬಿದ್ದಿದೆ. ಇದೊಂದು ಪೌರಾಣಿಕ ಸಿನಿಮಾ ಅಲ್ಲವಾದರೂ ರವಿಶಂಕರ್ ಕೃಷ್ಣ, ರಾಮ ಹೀಗೆ ಸಾಕಷ್ಟು ಮಹಾಪುರುಷರ ಅವತಾರ ಎತ್ತಿದ್ದಾರೆ. ಇದೆಲ್ಲಾ ಯಾವ ರವಿಶಂಕರ್ ಅವರ ಸುದ್ದಿಯೆಂದು ತಲೆ ಕೆರೆದುಕೊಳ್ಳಬೇಕಾಗಿಲ್ಲ. ಇದು ನಟ, ಪಯಣ ಖ್ಯಾತಿಯ ರವಿಶಂಕರ್ ಲೇಟೆಸ್ಟ್ ನ್ಯೂಸ್.

ಹೌದು, ಇದೀಗ ರವಿಶಂಕರ್ "ದೇವ್ರಾಣೆ ನಾನ್ ದೇವ್ರಲ್ಲ" ಎಂಬ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ತಬಲಾ ನಾಣಿ ಹಾಗೂ ಸಾಧುಕೋಕಿಲಾ ಅವರ ಜೊತೆಯಾಗಿದ್ದಾರೆ. ಈ ಮೂವರ ಸುತ್ತಲೇ ಚಿತ್ರದ ಕಥೆ ಸುತ್ತುತ್ತದೆ ಎಂದಿದೆ ಚಿತ್ರತಂಡ. ಶಂಕರ್ ನಿರ್ದೇಶನದ ಈ ಚಿತ್ರ ಭೂತ ಅಥವಾ ವರ್ತಮಾನದ ಯಾವುದೇ ಸ್ವಾಮಿಯ ಕುರಿತಾಗಿಲ್ಲವಂತೆ. ಭವಿಷ್ಯದ ಬಗ್ಗೆ ಅವರಿಗೆ ಗೊತ್ತಿಲ್ಲವಂತೆ.

ಅಂದಹಾಗೆ, "ದೇವ್ರಾಣೆ ನಾನ್ ದೇವ್ರಲ್ಲ" ಚಿತ್ರದಲ್ಲಿ ರವಿಶಂಕರ್ ಅವರದು ಚಿಟ್ಟೆ ಸ್ವಾಮಿ ಎಂಬ ಹೆಸರಿನ ಡೋಂಗಿ ಸ್ವಾಮಿಯ ಪಾತ್ರವಂತೆ. ಅವರ ಶಿಷ್ಯನಾಗಿ ತಬಲಾ ನಾಣಿ 'ಚೊಂಬು ಸ್ವಾಮಿ'ಯ ಪಾತ್ರ. ಸಾಧುಕೋಕಿಲಾ ಅವರದು ಚೊಂಬು ಸ್ವಾಮಿಯನ್ನು ಬೆನ್ನುಬಿದ್ದು ಕಾಡುವ ಪಾತ್ರ. ಈ ಮೂವರ ಸುತ್ತಲೇ ಗಿರಕಿಹೊಡೆಯುವ ಸಿನಿಮಾ ಇದಂತೆ. ಇದೊಂದು ಪಕ್ಕಾ ಕಾಲ್ಪನಿಕ ಕಥೆ ಎಂದಿದ್ದಾರೆ ನಿರ್ದೇಶಕ ಶಂಕರ್, ರವಿಶಂಕರ್ ಅಲ್ಲ. (ಒನ್ ಇಂಡಿಯಾ ಕನ್ನಡ)

English summary
Devrane Nan Devralla movie shooting is going on. Actor Ravishankar is in Lead Role. Tabla Nani and Sadhukokila are in important role in this movie. Shankar Directed this.
Please Wait while comments are loading...