Don't Miss!
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Technology
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ರಂಗನಾಯಕ' ಟ್ರೈಲರ್ ನೋಡಿ 'ಹಳೆ ಗುರು' ಬಗ್ಗೆ ಡಾಲಿ ಹೇಳಿದ್ದೇನು?
Recommended Video
'ಎದ್ದೇಳು ಮಂಜುನಾಥ' ಮತ್ತು 'ಮಠ' ಚಿತ್ರಗಳ ಬಳಿಕ ನಟ ಜಗ್ಗೇಶ್ ಹಾಗೂ ನಿರ್ದೇಶಕ ಗುರು ಪ್ರಸಾದ್ ಮತ್ತೊಮ್ಮೆ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಆ ಚಿತ್ರಕ್ಕೆ 'ರಂಗನಾಯಕ' ಎಂದು ಹೆಸರಿಟ್ಟಿದ್ದು, ಸದ್ಯ ಟೀಸರ್ ಬಿಡುಗಡೆಯಾಗಿದೆ.
ಬಹಳ ವಿಭಿನ್ನವಾಗಿ ಮೂಡಿ ಬಂದಿರುವ ರಂಗನಾಯಕ ಟೀಸರ್ ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ಹಲವರು ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
''ನನ್ನ
ಸಿನಿಮಾದಲ್ಲಿ
ಹಾರ್
ಜನ
ಹೀರೋಗಳು
ಇರೋಲ್ಲ''
-
ಗುರುಪ್ರಸಾದ್
ಈ ಜೋಡಿಯ ಬಗ್ಗೆ ಮತ್ತು ನಿರ್ದೇಶಕ ಗುರುಪ್ರಸಾದ್ ಬಗ್ಗೆ ಧನಂಜಯ್ ಅವರು ಕೂಡ ಟ್ವೀಟ್ ಮಾಡಿದ್ದು, ತಮ್ಮ ಹಳೆಯ ಗುರುಗಳಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹಾಗಿದ್ರೆ, ಧನಂಜಯ್ ಏನು ಟ್ವೀಟ್ ಮಾಡಿದ್ರು? ಮುಂದೆ ಓದಿ....

ಹೀ ಈಸ್ ಬ್ಯಾಕ್: ಧನಂಜಯ್
''ರಂಗನಾಯಕನ ಹಿಂದಿರುವ ಸೂತ್ರಧಾರಿ ಮಜವಾಗಿ ಆಟ ಕಟ್ಟುವುದರಲ್ಲಿ ಎತ್ತಿದ ಕೈ. ಹೀ ಈಸ್ ಬ್ಯಾಕ್. ಟೀಸರ್ ಎಂಜಾಯ್ ಮಾಡಿದೆ. ನನಗೆ ನಂಬಿಕೆ ಇದೆ, ಈ ಸಿನಿಮಾ ಒಳ್ಳೆಯ ಮನರಂಜನೆ ನೀಡಲಿದೆ. ಇಡೀ ತಂಡಕ್ಕೆ ಶುಭವಾಗಲಿ'' ಎಂದು ಧನಂಜಯ್ ಟ್ವೀಟ್ ಮಾಡಿದ್ದಾರೆ.
'ಡಾಲಿ'
ಧನಂಜಯ್
ಬಗ್ಗೆ
ಕೇಳಿದ್ರೆ
ಗುರುಪ್ರಸಾದ್
ಹೀಗೆ
ಹೇಳಿದ್ದಾರೆ
!

ಕಹಿ ಘಟನೆ ಮರೆತ ಧನಂಜಯ್
ಧನಂಜಯ್ ನಟನೆಯ ಮೊದಲ ಸಿನಿಮಾ ಡೈರೆಕ್ಟರ್ ಸ್ಪೆಷಲ್. ಇದನ್ನ ನಿರ್ದೇಶನ ಮಾಡಿದ್ದು ಗುರುಪ್ರಸಾದ್. ಬಳಿಕ ಈ ಜೋಡಿ 'ಎರಡನೇ ಸಲ' ಸಿನಿಮಾ ಮಾಡಿದ್ದರು. ಆಮೇಲೆ ಅದೇನ್ ಆಯ್ತೋ ಇಬ್ಬರ ನಡುವೆ ಮನಸ್ತಾಪ ಮೂಡಿ ಹಾವು-ಮುಂಗಸಿಯಂತೆ ಕಿತ್ತಾಡಿಕೊಂಡರು. ಒಬ್ಬರ ಮುಖ ಇನ್ನೊಬ್ಬರು ನೋಡಬಾರದೆನ್ನುವಷ್ಟು ದ್ವೇಷ ಹುಟ್ಟಿಕೊಂಡಿತ್ತು. ಆದರೆ, ಹಳೆ ದ್ವೇಷ ಈಗ ಮರೆತಿದ್ದಾರೆ. ಹಳೆಯ ಗುರುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಲ್ಡಪ್
ಬೇಡ,
ನಿರ್ದೇಶಕರಿಗೆ
ಮೂಗುದಾರ
ಹಾಕಬೇಡಿ:
ನಾಯಕರಿಗೆ
ಜಗ್ಗೇಶ್
ಮನವಿ

ನನ್ನ ಫೇವರಿಟ್ ಜೋಡಿ
''ನನ್ನ ಫೇವರಿಟ್ ಡೈರೆಕ್ಟರ್-ಆಕ್ಟರ್ ಕಾಂಬಿನೇಷನ್ನಲ್ಲಿ ಇದೂ ಒಂದು. ಮೊದಲೆರಡು ಸಿನಿಮಾಗಳ ತರ ಗುರು ಸರ್ ಈ ಸಲನೂ ಜಗ್ಗೇಶ್ ಸರ್ ಅವ್ರಿಂದ ನವರಸಗಳನ್ನ ಹಿಂಡಿ ತೆರೆ ಮೇಲೆ ತಂದು ಎಂಟರ್ಟೈನ್ ಮಾಡ್ತಾರೆ ಅನ್ನೋದ್ರಲ್ಲಿ ಡೌಟೇ ಇಲ್ಲ.. ನಿಮ್ಮಿಂದ ರಂಗ ರಂಗೇರ್ಲಿ, ALL THE BEST.'' ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ನೋಡಲೇಬೇಕಾದ ಕಾಂಬಿನೇಷನ್
ರಂಗನಾಯಕ ಟ್ರೈಲರ್ ಮೆಚ್ಚಿಕೊಂಡ ನಿರ್ದೇಶಕ ಪವನ್ ಒಡೆಯರ್ ಅವರು ''ಇದು ನೋಡಲೇಬೇಕಾದ ಕಾಂಬಿನೇಷನ್'' ಎಂದು ಟ್ವೀಟ್ ಮಾಡಿದ್ದಾರೆ. ''ಜಗ್ಗೇಶ್, ಗುರುಪ್ರಸಾದ್, ಅನೂಪ್ ಸೀಳಿನ್, ವಿಖ್ಯಾತ್ ಆರ್ ಅವರ ಹೊಸ ರೀತಿಯ ಯೋಚನೆ ರಂಗನಾಯಕ'' ಪವನ್ ಒಡೆಯರ್ ಹೇಳಿದ್ದಾರೆ.