ಸುದೀಪ್ ಹೇಳಿದ್ದ ಮಾತು ಧನಂಜಯ್ ಜೀವನದಲ್ಲಿ ನಿಜ ಆಯ್ತು
Recommended Video
ಅದೊಂದು ಸಮಯದಲ್ಲಿ ಧನಂಜಯ್ ಹೆಚ್ಚು ಸಿನಿಮಾಗಳು ಮಾಡಿದ್ರು. ಯಾವುದು ಕೈಹಿಡಿಯಲಿಲ್ಲ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರ ಮಾಡಿದ್ರೂ ಡೈರೆಕ್ಟರ್ ಸ್ಪೆಷಲ್ ಪಾತ್ರವನ್ನ ಜನ ನಿರೀಕ್ಷೆ ಮಾಡುತ್ತಿದ್ದರು.
ಆದರೂ ಪ್ರಯತ್ನ ನಿಲ್ಲಿಸದ ಧನಂಜಯ್ ಟಗರು ಸಿನಿಮಾದಲ್ಲಿ ನೆಗಿಟೀವ್ ಪಾತ್ರ ಮಾಡಲು ತೀರ್ಮಾನಿಸಿದರು. ಡಾಲಿ ಎಂಬ ಕ್ರೂರ ವ್ಯಕ್ತಿಯ ಪಾತ್ರ ಅದಾಗಿತ್ತು. ಡಾಲಿಯ ಫಸ್ಟ್ ಲುಕ್ ರಿಲೀಸ್ ಆದ್ಮೇಲೆ ಧನಂಜಯ್ ಅವರ ಅದೃಷ್ಟ ಬದಲಾಯಿತು.
ಈಗ ಡಾಲಿ ಧನಂಜಯ್ ಎಂದೇ ಖ್ಯಾತಿ ಪಡೆದುಕೊಂಡಿರುವ ನಟಭಯಂಕರ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾದಲ್ಲಿ ಐಪಿಎಸ್ ಆಫೀಸರ್ ಪಾತ್ರ ಮಾಡ್ತಿದ್ದಾರೆ. ಹೀರೋಗೆ ಟಕ್ಕರ್ ಕೊಡುವಂತಹ ಖಡಕ್ ಅಧಿಕಾರಿಯಾಗಿ ಮಿಂಚಲಿದ್ದಾರೆ.

ಈ ಚಿತ್ರದ ಮುಹೂರ್ತ ಸಮಾರಂಭ ನಿನ್ನೆಯಷ್ಟೆ ಬೆಂಗಳೂರಿನ ಗುಟ್ಟಳ್ಳಿಯಲ್ಲಿರುವ ಬಂಡಿಮಹಾಕಾಳಮ್ಮ ದೇವಾಸ್ಥಾನದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಡಾಲಿ ಧನಂಜಯ್, ಈ ಹಿಂದೆ ಸುದೀಪ್ ಅವರ ಹೇಳಿದ್ದ ಮಾತನ್ನ ನೆನಪಿಸಿಕೊಂಡು ಅಂದು 'ನೀವು ಹೇಳಿದ ಮಾತು ನಿಜ ಆಯ್ತು' ಎಂದರು.
ನಂದಿಬೆಟ್ಟದ ಬಳಿ ಶೂಟಿಂಗ್ ಒಂದರಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲಿ ''ಎಲ್ಲಿಯವರೆಗೂ ನಿನ್ನನ್ನು ಮನಸ್ಸಿನಲ್ಲಿಟ್ಟುಕೊಂಡು ಪಾತ್ರಗಳು ಮಾಡುವುದಿಲ್ಲವೋ ಅಲ್ಲಿವರೆಗೂ ನೀನೊಂದು ಆಯ್ಕೆ ಮಾತ್ರ ಆಗಿರುತ್ತೀಯಾ ಎಂದಿದ್ದರು. ಅದು ಹಾಗೆ ಆಗ್ತಿತ್ತು. ಡಾಲಿ ಆದ್ಮೇಲೆ ಈಗ ನನ್ನನ್ನು ಇಟ್ಕೊಂಡು ಪಾತ್ರಗಳು ಬರೆಯೋದಕ್ಕೆ ಶುರು ಮಾಡಿದ್ದಾರೆ. ಅದು ಈಗ ಆಗ್ತಿದೆ'' ಎಂದು ಖುಷಿ ಹಂಚಿಕೊಂಡರು.

ದುನಿಯಾ ಸೂರಿ ನಿರ್ದೇಶನದ 'ಪಾಪ್ ಮಂಕಿ ಟೈಗರ್' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿರುವ ಧನಂಜಯ್ ಈಗ ಸಲಗ ತಂಡ ಸೇರಿದ್ದಾರೆ. ಇದರ ಜೊತೆಯಲ್ಲಿ ಮತ್ತಷ್ಟು ಪ್ರಾಜೆಕ್ಟ್ ಗಳು ಕೈಯಲಿದ್ದು ಒಂದೊಂದೆ ಬಿಡುಗಡೆಯಾಗಲಿದೆ.


Click it and Unblock the Notifications











