For Quick Alerts
  ALLOW NOTIFICATIONS  
  For Daily Alerts

  'ಹೊಯ್ಸಳ' ಉತ್ಸವಕ್ಕೆ ಮುಹೂರ್ತ ಫಿಕ್ಸ್: ರಾಮನವಮಿಗೆ ಡಾಲಿ ಖಾಕಿ ಖದರ್

  |

  ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಧನಂಜಯ್‌ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆರೇಳು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. ಧನು ಸಿನಿಮಾಗಳಿಗೆ ಅವರ ಸಿನಿಮಾಗಳ ಜೊತೆಗೆ ಕ್ಲ್ಯಾಶ್ ಆಗುವುದು ಬೇಡ ಎನ್ನುವ ಕಾರಣಕ್ಕೆ ಬಹಳ ಮೊದಲೇ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗ್ತಿದೆ. ಡಾಲಿ ಖಾಕಿ ತೊಟ್ಟಿರುವ 'ಹೊಯ್ಸಳ' ಸಿನಿಮಾ ರಿಲೀಸ್‌ಗೂ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ ವರ್ಷ ಮಾರ್ಚ್ 30ಕ್ಕೆ ತೆರೆಮೇಲೆ ಗುರುದೇವ್ 'ಹೊಯ್ಸಳ'ನ ಪೊಲೀಸ್‌ಗಿರಿ ಶುರುವಾಗಲಿದೆ.

  'ರತ್ನನ್ ಪ್ರಪಂಚ' ನಂತರ ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಇದು ಧನಂಜಯ್ 2ನೇ ಸಿನಿಮಾ. ವಿಜಯ್. ಎನ್ ನಿರ್ದೇಶನದ ಈ ಆಕ್ಷನ್‌ ಎಂಟರ್‌ಟೈನರ್‌ ಚಿತ್ರದಲ್ಲಿ ಧನು ಜೋಡಿಯಾಗಿ ಅಮೃತಾ ಅಯ್ಯಂಗಾರ್ ಬಣ್ಣ ಹಚ್ಚಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೀತಿದೆ. ಕೆಲ ದಿನಗಳ ಹಿಂದೆ ಸಿನಿಮಾ ಸೆಟ್‌ಗೆ ನಟಿ ರಮ್ಯಾ ಭೇಟಿ ನೀಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಚಿತ್ರದಲ್ಲಿ ನಿರ್ದಯಿ ಪೊಲೀಸ್ ಆಫೀಸರ್‌ ರೋಲ್‌ನಲ್ಲಿ ಧನಂಜಯ್ ಅಬ್ಬರಿಸಿದ್ದಾರೆ.

  ಡಾರ್ಲಿಂಗ್ ದರ್ಶನ್ ಭೇಟಿ ಮಾಡಿ ಬಂದ ಮೇಲೆ ಹೆಂಗೆಂಗೋ ಆಡ್ತಿದ್ದಾರೆ ನಿರೂಪಕಿ ಹೇಮಲತಾ!ಡಾರ್ಲಿಂಗ್ ದರ್ಶನ್ ಭೇಟಿ ಮಾಡಿ ಬಂದ ಮೇಲೆ ಹೆಂಗೆಂಗೋ ಆಡ್ತಿದ್ದಾರೆ ನಿರೂಪಕಿ ಹೇಮಲತಾ!

  'ಸಲಗ' ಚಿತ್ರದಲ್ಲೂ ಧನಂಜಯ್ ಖಾಕಿ ತೊಟ್ಟಿದ್ದರು. ಆದರೆ ಆ ಪಾತ್ರಕ್ಕಿಂತ ಇದು ಬಹಳ ಭಿನ್ನವಾಗಿ ಇರಲಿದೆಯಂತೆ. 'ಹೊಯ್ಸಳ' ಧನು ನಟನೆಯ 25ನೇ ಸಿನಿಮಾ ಆಗಿರುವುರಿಂದ ನಿರೀಕ್ಷೆ ದುಪಟ್ಟಾಗಿದೆ. ಪಾತ್ರಕ್ಕೆ ತೂಕ ಇಳಿಸಿಕೊಂಡು ಧನಂಜಯ್ ಬಣ್ಣ ಹಚ್ಚಿದ್ದಾರೆ. ಬೆಳಗಾವಿ, ಅಥಣಿ ಸುತ್ತಾ ಮುತ್ತಾ ಈ ಸಿನಿಮಾ ಕಥೆ ನಡೆಯಲಿದೆ. ಸಮಾಜದ ಒಂದು ಸಮಸ್ಯೆಯನ್ನು ಈ ಚಿತ್ರದಲ್ಲಿ ಚರ್ಚಿಸಲಾಗ್ತಿದೆ. ಅಚ್ಯುತ್‌ ಕುಮಾರ್‌, ರಾಘು ಶಿವಮೊಗ್ಗ, ನಾಗಭೂಷಣ್‌, ಗುಳ್ಟು ನವೀನ್‌ ಚಿತ್ರದ ತಾರಾಗಣದಲ್ಲಿದ್ದಾರೆ.

  ಬೆಂಗಳೂರನ್ನು ಬೈಯ್ಯಬೇಡಿ: ಕವಿರಾಜ್ ನೆನಪಿಸಿದ ನಗರದ ಋಣಬೆಂಗಳೂರನ್ನು ಬೈಯ್ಯಬೇಡಿ: ಕವಿರಾಜ್ ನೆನಪಿಸಿದ ನಗರದ ಋಣ

  'ಹೊಯ್ಸಳ' ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಮ್ಯೂಸಿಕ್ ಚಿತ್ರಕ್ಕಿದೆ. ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗೀತಾ' ಸಿನಿಮಾ ಕಟ್ಟಿಕೊಟ್ಟು ನಿರ್ದೇಶಕ ವಿಜಯ್ ಗೆದ್ದಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದಿದ್ದರೂ ಪ್ರೇಕ್ಷಕರ ಮನಗೆದ್ದಿತ್ತು. ಹಾಗಾಗಿ ವಿಜಯ್ ನಿರ್ದೇಶನದ 'ಹೊಯ್ಸಳ' ಸಿನಿಮಾ ಬಗ್ಗೆ ಕೂಡ ಕುತೂಹಲ ಮೂಡಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.

  Dhananjaya Starrer Hoysala to release on March 30, 2023

  ಒಂದು ದಿನ ಮುಂಚೆಯೇ ಲಕ್ಕಿಮ್ಯಾನ್ ಪ್ರದರ್ಶನ; ಪ್ರೀಮಿಯರ್ ಶೋಗಳ ಟಿಕೆಟ್ ದರ ಎಲ್ಲೆಲ್ಲಿ ಎಷ್ಟೆಷ್ಟು?ಒಂದು ದಿನ ಮುಂಚೆಯೇ ಲಕ್ಕಿಮ್ಯಾನ್ ಪ್ರದರ್ಶನ; ಪ್ರೀಮಿಯರ್ ಶೋಗಳ ಟಿಕೆಟ್ ದರ ಎಲ್ಲೆಲ್ಲಿ ಎಷ್ಟೆಷ್ಟು?

  ಡಾಲಿ ಧನಂಜಯ್ ನಟನೆಯ 'ಮಾನ್ಸೂನ್ ರಾಗ' ಸಿನಿಮಾ ಸೆಪ್ಟೆಂಬರ್ 16ಕ್ಕೆ ರಿಲೀಸ್‌ ಆಗ್ತಿದೆ. ದಸರಾ ಸಂಭ್ರಮದಲ್ಲಿ ಸೆಪ್ಟೆಂಬರ್ 30ಕ್ಕೆ ಬರ್ತಿರೋ 'ತೋತಾಪುರಿ' ಚಿತ್ರದಲ್ಲೂ ಧನು ಒಂದೊಳ್ಳೆ ಪಾತ್ರ ಮಾಡಿದ್ದಾರೆ. ಇನ್ನು 'ಜಮಾಲಿ ಗುಡ್ಡ', 'ಹೆಡ್‌ಬುಷ್' ಸಿನಿಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಮಾರ್ಚ್‌ 30ಕ್ಕೆ ಅಂದರೆ ಗುರುವಾರವೇ 'ಹೊಯ್ಸಳ' ಸಿನಿಮಾ ತೆರೆಗೆ ಬರ್ತಿದ್ದು, ಲಾಂಗ್‌ ವೀಕೆಂಡ್‌ ಟಾರ್ಗೆಟ್ ಮಾಡಿರುವುದು ಗೊತ್ತಾಗುತ್ತಿದೆ. ಬಹಳ ಮೊದಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿ ಬೇರೆ ಸಿನಿಮಾಗಳ ಜೊತೆಗೆ ಕ್ಲ್ಯಾಶ್ ಆಗದಂತೆ ನೋಡಿಕೊಳ್ಳುವ ಪ್ರಯತ್ನ ನಡೀತಿದೆ.

  English summary
  Dhananjaya Starrer 'Hoysala' to release on March 30, 2023. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X