For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದ ರಿಲೀಸ್ ಮುಂದೂಡಿಕೆ?

  |

  ನಿರ್ದೇಶಕ ಎ.ಪಿ.ಅರ್ಜುನ್ ಹಾಗೂ ಧ್ರುವ ಸರ್ಜಾ ಜೋಡಿ ಈಗಾಗಲೇ 'ಅದ್ಧೂರಿ' ಸಿನಿಮಾ ಗೆದ್ದಿದೆ. ಈಗ ಮತ್ತೆ 'ಮಾರ್ಟಿನ್' ಸಿನಿಮಾ ಮೂಲಕ ಈ ಜೋಡಿ ಒಂದಾಗಿದೆ. ಈಗಾಗಲೇ ಸಿನಿಮಾದಲ್ಲಿನ ಧ್ರುವ ಸರ್ಜಾ ಲುಕ್ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟು ಹಾಕಿದೆ.

  Recommended Video

  ಧ್ರುವ ಸರ್ಜಾ 'ಮಾರ್ಟಿನ್' ಚಿತ್ರದ ರಿಲೀಸ್ ಮುಂದೂಡಿಕೆ ? | Dhruva Sarja | Martin | Filmibeat Kannada

  ಧ್ರುವ ಸರ್ಜಾ ಮೊದಲ ಸಿನಿಮಾ 'ಅದ್ದೂರಿ'ಯನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದರು. ಆ ಸಿನಿಮಾದಿಂದಲೇ ಧ್ರುವ ಸರ್ಜಾ ಸ್ಯಾಂಡಲ್​ವುಡ್​ನಲ್ಲಿ ಆ್ಯಕ್ಷನ್ ಪ್ರಿನ್ಸ್ ಆಗಿ ಮೆರೆಯುತ್ತಿದ್ದಾರೆ. ಈಗ ಮತ್ತೆ ಜಾದು ಮಾಡಲು ಇದೇ ಜೋಡಿ ಬರ್ತಿದೆ.

  'ಕಾಳಿ ಟೈಟಲ್ ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದೆ'- ಅಂಬಿ ಬರ್ತ್‌ಡೇ ದಿನವೇ ಲಾಂಚ್!'ಕಾಳಿ ಟೈಟಲ್ ನನ್ನ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದೆ'- ಅಂಬಿ ಬರ್ತ್‌ಡೇ ದಿನವೇ ಲಾಂಚ್!

  ಇಷ್ಟು ದಿನ 'ಮಾರ್ಟಿನ್' ಸಿನಿಮಾದ ಬಗ್ಗೆ ಯಾವುದೇ ಹೆಚ್ಚಿನ ಅಪ್ಡೇಟ್ ಬಂದಿರಲಿಲ್ಲ. ಧ್ರುವ ಅಭಿಮಾನಿಗಳು 'ಮಾರ್ಟಿನ್' ಅಪ್ಡೇಟ್‌ಗಾಗಿ ಕಾಯ್ತಿದ್ದಾರೆ. ಸದ್ಯ ಚಿತ್ರತಂಡ ಸಿಹಿ ಸುದ್ದಿ ಕೊಟ್ಟಿದೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದೆ. ಇನ್ನೂ ಆ್ಯಕ್ಷನ್ ದೃಶ್ಯಗಳು ಮಾತ್ರವೇ ಬಾಕಿ ಇದೆ. ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ.

  ಆ್ಯಕ್ಷನ್ ಮಾತ್ರ ಬಾಕಿ!

  ಆ್ಯಕ್ಷನ್ ಮಾತ್ರ ಬಾಕಿ!

  ಸದ್ಯ 'ಮಾರ್ಟಿನ್' ಬಹುತೇಕ ಶೂಟಿಂಗ್ ಮುಗಿದಿದ್ದು, ಆಕ್ಷನ್​ ಸೀನ್​ಗಳು ಮಾತ್ರ ಬಾಕಿ ಇದೆಯಂತೆ. ಸ್ಟಂಟ್ ಮಾಸ್ಟರ್ ರವಿ ವರ್ಮಾ ಈ ಆಕ್ಷನ್​ ಸೀನ್​ಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ರವಿ ವರ್ಮಾ ಮಾತ್ರ ಅಲ್ಲ, ದಕ್ಷಿಣ ಭಾರತೀಯ ಹೆಸರಾಂತ ಸ್ಟಂಟ್ ಮಾಸ್ಟರ್‌ಗಳಾದ ರಾಮ- ಲಕ್ಷ್ಮಣ ಕೂಡ ಈ ಚಿತ್ರತಂಡಕ್ಕೆ ಸಾಥ್​ ಕೊಡುತ್ತಿದ್ದಾರೆ. ಕೆಲವು ಆ್ಯಕ್ಷನ್‌ಗಳನ್ನು ಇವರೂ ಕೂಡ ಕಂಪೋಸ್ ಮಾಡುತ್ತಿದ್ದಾರೆ. ಹಾಗಾಗಿ ಈ ಚಿತ್ರದಲ್ಲಿ ಧ್ರುವ ಸರ್ಜಾ ಆಕ್ಷನ್ ಮೇಲೆ ನಿರೀಕ್ಷೆ ಹೆಚ್ಚಿದೆ.

  ಆಗಸ್ಟ್ 5 ರಿಂದ ಶೂಟಿಂಗ್ ಶುರು!

  ಆಗಸ್ಟ್ 5 ರಿಂದ ಶೂಟಿಂಗ್ ಶುರು!

  ಆ್ಯಕ್ಷನ್ ಸೀಕ್ವೆಲ್‌ಗಾಗಿ ನಟ ಧ್ರುವ ಸರ್ಜಾ ಭರ್ಜರಿ ತಯಾರಿ ನಡೆಸಿದ್ದಾರೆ. ಇದೇ ಆಗಸ್ಟ್ 5ರಿಂದ ಸಿನಿಮಾದ ಆ್ಯಕ್ಷನ್ ಚಿತ್ರೀಕರಣ ಶುರುವಾಗಲಿದೆ. ಆದಷ್ಟು ಬೇಗ ಚಿತ್ರವನ್ನು ಪೂರ್ಣ ಮಾಡುವ ತವಕದಲ್ಲಿದೆ ಚಿತ್ರತಂಡ. ಇನ್ನು ಈ ಚಿತ್ರದಲ್ಲಿ ನಟ ಧ್ರುವ ಸರ್ಜಾ ಮಸ್ತ್ ಆ್ಯಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ನೋ ಡೌಟ್. ಇನ್ನು ನಿರ್ದೇಶಕ ಅರ್ಜುನ್‌ಗೂ ಕೂಡ ಇದು ಹೊಸ ರೀತಿಯ ಸಿನಿಮಾ ಆಗಿರಲಿದೆ.

  'ಮಾರ್ಟಿನ್' ರಿಲೀಸ್ ಮುಂದೂಡಿಕೆ?

  'ಮಾರ್ಟಿನ್' ರಿಲೀಸ್ ಮುಂದೂಡಿಕೆ?

  ಇನ್ನು ಈಗ ಆ್ಯಕ್ಷನ್ ಚಿತ್ರೀಕರಣವನ್ನು ಸಿನಿಮಾ ತಂಡ ಹಮ್ಮಿಕೊಂಡಿದೆ. ಹಾಗಾಗಿ ಸಿನಿಮಾವನ್ನು ಅಂದುಕೊಂಡ ದಿನ ರಿಲೀಸ್ ಮಾಡಲು ಸಾಧ್ಯ ಆಗುವುದಿಲ್ಲ. ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಈಗಾಗಲೇ 'ಮಾರ್ಟಿನ್' ತಂಡ ಪ್ರಕಟ ಮಾಡಿದೆ. ಆದರೆ ಚಿತ್ರದ ಶೂಟಿಂಗ್ ಇನ್ನು ಬಾಕಿ ಇರುವುದರಿಂದ ಸಿನಿಮಾವನ್ನು ಸೆಪ್ಟೆಂಬರ್‌ನಲ್ಲಿ ರಿಲೀಸ್ ಮಾಡುವುದು ಕಷ್ಟ ಸಾಧ್ಯ. ಹಾಗಾಗಿ ಸಿನಿಮಾದ ರಿಲೀಸ್ ದಿನವನ್ನು ಬದಲು ಮಾಡುವ ಸಾಧ್ಯತೆ ಇದೆ. ಧ್ರುವನಿಗೆ ನಾಯಕಿಯಾಗಿ ವೈಭವಿ ನಟಿಸುತ್ತಿದ್ದು, ಬಾಲಿವುಡ್ ನಟ ನಿಕಿತ್, ಅನ್ವೇಶಿ ಜೈನ್ ಸಹ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಧ್ರುವ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಧ್ರುವ, ಪ್ರೇಮ್ ಸಿನಿಮಾ!

  ಧ್ರುವ, ಪ್ರೇಮ್ ಸಿನಿಮಾ!

  ಇನ್ನು ಈ ಸಿನಿಮಾದ ನಂತರ ಧ್ರುವ ಸರ್ಜಾ ಮುಂದಿನ ಸಿನಿಮಾ ನಿರ್ದೇಶಕ ಜೋಗಿ ಪ್ರೇಮ್ ​ ಜೊತೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ಸಿನಿಮಾದಲ್ಲಿ ಭೂಗತ ಲೋಕದ ದೊರೆ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್‌ನಲ್ಲಿ ಶೀಘ್ರದಲ್ಲಿಯೇ ಆರಂಭ ಆಗಲಿದೆ. ಅದಕ್ಕೆ ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ.

  English summary
  Dhruva Sarja Starrer Martin Film Release Date Likely To Be Postpone, know more,
  Tuesday, August 2, 2022, 11:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X