»   » ಸ್ಯಾಂಡಲ್ ವುಡ್ ಗೆ 'ಢುಂಢಿ' ಯೋಗೇಶ್ ಮಾಸ್ಟರ್

ಸ್ಯಾಂಡಲ್ ವುಡ್ ಗೆ 'ಢುಂಢಿ' ಯೋಗೇಶ್ ಮಾಸ್ಟರ್

Posted By:
Subscribe to Filmibeat Kannada

ಕೋಟ್ಯಂತರ ಮಂದಿ ಆರಾಧಿಸುವ ಗಣೇಶನನ್ನು ವಿಚಿತ್ರವಾಗಿ ಬಿಂಬಿಸಿ ವಿವಾದಕ್ಕೆ ಒಳಗಾದ 'ಢುಂಢಿ' ಕಾದಂಬರಿ ಕರ್ತೃ ಯೋಗೇಶ್ ಮಾಸ್ಟರ್ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಮೂಲಕ ಚಿತ್ರರಂಗಕ್ಕೆ ಅಡಿಯಿಟಿದ್ದಾರೆ.

ಆಸ್ಕರ್, ವಿಸ್ ಮಲ್ಲಿಗೆ ಚಿತ್ರಗಳನ್ನು ನಿದೇಶಿಸಿದ್ದ ಆಸ್ಕರ್ ಕೃಷ್ಣ ಈಗ ಮೂರು ವೆರೈಟಿ ಪ್ರೀತಿಯನ್ನು ಹೇಳ ಹೊರಟಿದ್ದಾರೆ. ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮೂರು ಯುವ ಜೋಡಿಗಳ ಮೂರು ಡಿಫೆರೆಂಟ್ ಲವ್ ಸ್ಟೋರಿ ಹೊಂದಿರುವ ಈ ಚಿತ್ರದ ಹೆಸರು "ಪ್ರೀತಿ ಪ್ಯಾರ್ & ಲವ್". ['ಢುಂಢಿ' ಲೇಖಕ ಯೋಗೇಶ್ ಮಾಸ್ಟರ್ ಯಾರು?]


ಆಸ್ಕರ್ ಕೃಷ್ಣ ಈ ಚಿತ್ರದ ನಿದೇಶನದ ಜೊತೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಲಾಲಿ ಸ್ವಾಮಿ ಸಹ ನಿರ್ಮಾಪಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಯೋಗೇಶ್ ಮಾಸ್ಟರ್ ಹಾಗೂ ಕೃಷ್ಣ ರಚಿಸಿದ್ದಾರೆ.

ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ದಾರವಾಡ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಮೂರು ಜನ ನಾಯಕ ಹಾಗೂ ಮೂರು ನಾಯಕಿಯರ ಆಯ್ಕೆ ನಡೆಯುತ್ತಿದೆ.


ರಾಜೇಂದ್ರ ಕಾರಂತ್, ಸುಚೇಂದ್ರ ಪ್ರಸಾದ್, ನೀನಾಸಂ ಯಶವಂತ್, ನೀನಾಸಂ ಮಹಂತೇಶ್ ತಾರಬಳಗದಲ್ಲಿದ್ದು, ಚಿತ್ರಕ್ಕೆ ಸೂರ್ಯಕಾಂತ್ ಹೊನ್ನಾಳ್ಳಿ ಛಾಯಗ್ರಹಣ, ಹರೀಶ್ ಜಿ. ಸಂಕಲನ, ಸೂಪರ್ ಜೋನ್ಸ್ ಸಾಹಸ, ಮನು ನೃತ್ಯ ನಿರ್ದೇಶನವಿದೆ. (ಫಿಲ್ಮಿಬೀಟ್ ಕನ್ನಡ)
English summary
Author of the controversial Kannada novel 'Dhundi', Yogesh Master, enters Sandalwood as dialogue, story and script writer. Preeti, Pyar & Love is Kannada feature film produced and directed by Oscar Krishna from the home banner Vishmaya Visuals.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada