»   » ಆಕ್ಷನ್ ಹೀರೋ ಆದ 'ಶಾರ್ಪ್ ಶೂಟರ್' ದಿಗಂತ್

ಆಕ್ಷನ್ ಹೀರೋ ಆದ 'ಶಾರ್ಪ್ ಶೂಟರ್' ದಿಗಂತ್

Posted By:
Subscribe to Filmibeat Kannada

ಇದುವರೆಗೂ ನೀವು ದೂದ್ ಪೇಡ ದಿಗಂತ್ ರನ್ನ ಸಾಫ್ಟ್ ಮತ್ತು ಸ್ವೀಟ್ ಪಾತ್ರಗಳಲ್ಲಿ ಮಾತ್ರ ನೋಡಿದ್ದೀರಾ. ಚಾಕಲೇಟ್ ಬಾಯ್ ಆಗಿ ಇಷ್ಟು ದಿನ ಬರೀ ಹುಡುಗಿಯರ ಜೊತೆ ಮರ ಸುತ್ತುತ್ತಿದ್ದ ದಿಗಂತ್ 'ಶಾರ್ಪ್ ಶೂಟರ್' ಚಿತ್ರದಲ್ಲಿ ಆಕ್ಷನ್ ಹೀರೋ ಆಗಿದ್ದಾರೆ.

'ಶಾರ್ಪ್ ಶೂಟರ್' ಸಿನಿಮಾಗಾಗಿ ಜಿಮ್ ನಲ್ಲಿ ಬೆವರಿಳಿಸಿ ದಿಗಂತ್ ಸಿಕ್ಸ್ ಪ್ಯಾಕ್ ಆಬ್ ಬಿಲ್ಡ್ ಮಾಡಿದ್ದಾರೆ. ಜೊತೆಗೆ ವಿಲನ್ ಗಳನ್ನ ಮಣ್ಣು ಮುಕ್ಕಿಸಿದ್ದಾರೆ. ದಿಗಂತ್ ರವರ ಆಕ್ಷನ್ ಕಂಡು ಖುದ್ದು ಫೈಟ್ ಮಾಸ್ಟರ್ ಥ್ರಿಲ್ಲರ್ ಮಂಜು ಕಣ್ಣು ಬಾಯಿ ಬಿಟ್ಟಿದ್ದಾರೆ.

Diganth turns Action Hero in 'Sharp Shooter'

ಕಾಲೇಜು ದಿನಗಳಲ್ಲಿ ದಿಗಂತ್ ಕ್ರೀಡಾಪಟು ಆಗಿದ್ರಿಂದ ಅವರಿಗೆ ಸ್ಟಂಟ್ ಮಾಡುವುದು ಕಷ್ಟವಾಗ್ಲಿಲ್ಲವಂತೆ. [ದೂದ್ ಪೇಡಾ ದಿಗಂತ್ ಮದುವೆ ಆಗ್ತಾರಂತೆ..!]

'ಶಾರ್ಪ್ ಶೂಟರ್' ಹೆಸರಿಗೆ ತಕ್ಕಂತೆ ಸಿನಿಮಾದಲ್ಲಿ ದಿಗಂತ್ ಗನ್ ಹಿಡಿದು ಕೇಡಿಗಳನ್ನ ಶೂಟ್ ಮಾಡಿದ್ದಾರೆ. ಮಾಸ್ ಮಾದ ಮತ್ತು ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ.

ದಿಗಂತ್ ಆಕ್ಷನ್ ನೋಡಿ, ಇನ್ಮೇಲೆ ''ದಿಗ್ಗಿ ಆಕ್ಷನ್ ಹೀರೋ ಅಂತ ಬ್ರ್ಯಾಂಡ್ ಆದರೆ ಅಚ್ಚರಿ ಇಲ್ಲ' ಅಂತಾರೆ ನಿರ್ದೇಶಕ ಗೌಸ್ ಪೀರ್. [ಡಿಸೆಂಬರ್ 11 ರಂದು ದಿಗಂತ್ 'ಶಾರ್ಪ್ ಶೂಟರ್' ರಿಲೀಸ್]

'ಶಾರ್ಪ್ ಶೂಟರ್' ಸಿನಿಮಾದಲ್ಲಿ ದಿಗಂತ್ ಸಾಹಸವನ್ನ ನೀವು ನೋಡೋಕೆ ಇನ್ನೆರಡೇ ದಿನ ಬಾಕಿ. ಯಾಕಂದ್ರೆ, ಇದೇ ಶುಕ್ರವಾರ 'ಶಾರ್ಪ್ ಶೂಟರ್' ನಿಮ್ಮ ಮುಂದೆ ಬರಲಿದೆ.

English summary
Kannada Actor Diganth has changed his image from Chocolate Boy to Action Hero in Kannada Movie 'Sharp Shooter'. The movie is releasing on December 11th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada