»   »  2 ವಾರ ಕಳೆದ್ರು ಸಂಜನಾ ನಗ್ನ ವಿಡಿಯೋ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ

2 ವಾರ ಕಳೆದ್ರು ಸಂಜನಾ ನಗ್ನ ವಿಡಿಯೋ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ

Posted By:
Subscribe to Filmibeat Kannada

'ದಂಡುಪಾಳ್ಯ-2' ಚಿತ್ರದಲ್ಲಿ ನಟಿ ಸಂಜನಾ ಅವರ ನಗ್ನ ವಿಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಶ್ರೀನಿವಾಸು ರಾಜು ಅವರು ವಾಣಿಜ್ಯ ಮಂಡಳಿಗೆ ಇಂದು ವಿವರಣೆ ನೀಡಿದ್ದಾರೆ. ಈ ವಿಡಿಯೋವನ್ನ ಯಾರು ಲೀಕ್ ಮಾಡಿದ್ದಾರೋ ಗೊತ್ತಿಲ್ಲ. ನಾವು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ವಿವಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಂದು ಸಭೆ ನಡೆಯಿತು. ಈ ಸಭೆಯಲ್ಲಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಹಾಗೂ ಚಿತ್ರದ ನಿರ್ದೇಶಕ ಭಾಗಿಯಾಗಿದ್ದರು. ಸುಮಾರು 45 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಹಲವು ವಿಷ್ಯಗಳನ್ನ ಪ್ರಸ್ತಾಪಿಸಿದರೂ, ವಿಡಿಯೋ ಹೇಗೆ ಲೀಕ್ ಆಯಿತು ಎಂಬುದರ ಬಗ್ಗೆ ನಿಖರತೆ ಸಿಗಲಿಲ್ಲ.


ಬೆತ್ತಲೆ ವಿಡಿಯೋ ವಿವಾದ ಹಿನ್ನೆಲೆ ಶ್ರೀನಿವಾಸ್ ರಾಜು ವಿರುದ್ಧ ಕ್ರಮ: ಕೆಎಫ್‌ಸಿಸಿ


Director Srinivasa Raju Clarify about Sanjjanaa Leaked Video

ಇನ್ನು ಸಭೆಯ ನಂತರ ಮಾತನಾಡಿದ 'ದಂಡುಪಾಳ್ಯ-2' ಚಿತ್ರದ ನಿರ್ದೇಶಕ ಶ್ರೀನಿವಾಸು ರಾಜು '' ಕಥೆಗೆ ಪೂರಕವಾಗಿದೆ ಎಂಬ ಕಾರಣಕ್ಕಾಗಿ ಈ ದೃಶ್ಯವನ್ನ ಚಿತ್ರೀಕರಿಸಲಾಯಿತು. ಆದ್ರೆ, ಸೆನ್ಸಾರ್ ಅಧಿಕಾರಿಗಳು ಈ ದೃಶ್ಯವನ್ನ ತೆಗೆದು ಹಾಕಿದರು. ನಂತರ ನಾವು ಬಳಕೆ ಮಾಡಲಿಲ್ಲ. ಹೇಗೆ ಲೀಕ್ ಆಗಿದೆ ಎಂಬುದು ನಮಗೂ ಗೊತ್ತಿಲ್ಲ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇವೆ'' ಎಂದರು.


ದಂಡುಪಾಳ್ಯ ವಿವಾದದ ರಹಸ್ಯವನ್ನು 'ಬೆತ್ತಲು' ಮಾಡಿದ ಸಂಜನಾ


ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದೆ. ಇದುವರೆಗೂ ಯಾರೊಬ್ಬರು ಕೂಡ ಪೊಲೀಸರಿಗೆ ದೂರು ನೀಡಿಲ್ಲ. ಸಂಜನಾ ಅವರು ವೈಯಕ್ತಿಕವಾಗಿ ದೂರು ನೀಡಿಲ್ಲ, ಚಿತ್ರತಂಡವೂ ದೂರು ನೀಡಿಲ್ಲ. ಹೀಗಾಗಿ, ಇದು ಪ್ರಚಾರದ ತಂತ್ರವೇ ಹೊರತು ಬೇರೆನೂ ಇಲ್ಲ ಎಂಬ ಅನುಮಾನ ಕಾಡುತ್ತಿದೆ.


ಸಂಜನಾ ಬೆತ್ತಲೆ ವಿಡಿಯೋ ವಿವಾದಕ್ಕೆ ಹೊಸ ಟ್ವಿಸ್ಟ್!

English summary
Dandupalya 2 Director Srinivasu Raju Gives Clarification about Sanjjanaa Leaked Video in Front of Film Chamber President Sa ra govindu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada