»   » ಯೋಗರಾಜ್ ಭಟ್ರಿಗೆ ಮತ್ತೆ ಲವ್ ಆಯ್ತಂತೆ..!

ಯೋಗರಾಜ್ ಭಟ್ರಿಗೆ ಮತ್ತೆ ಲವ್ ಆಯ್ತಂತೆ..!

Posted By:
Subscribe to Filmibeat Kannada

ಲವ್ ಸ್ಟೋರಿಗಳಿಗೆ ಅದ್ಭುತ ಸ್ಪರ್ಶ ನೀಡುವ 'ಮುಂಗಾರು ಮಳೆ' ನಿರ್ದೇಶಕ ಯೋಗರಾಜ್ ಭಟ್ ಅವರು ಮತ್ತೆ ತಮ್ಮ ಹಳೇ ಟ್ರ್ಯಾಕ್ ಗೆ ಮರಳಿದ್ದಾರೆ. ಇದೀಗ ಲವ್ ಸ್ಟೋರಿ ಸ್ಕ್ರಿಪ್ಟ್ ಗಳನ್ನು ಹೊತ್ತು ಮತ್ತೆ ವಾಪಸಾಗಿದ್ದಾರೆ.

'ಮುಂಗಾರು ಮಳೆ' 'ಗಾಳಿಪಟ' ದಂತಹ ರೊಮ್ಯಾಂಟಿಕ್ ಲವ್ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ ಭಟ್ರು ಇದನ್ನು ಮೀರಿ 'ಡ್ರಾಮಾ' ಹಾಗೂ 'ವಾಸ್ತು ಪ್ರಕಾರ' ದಂತಹ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿದ್ದರು.

Director Yogaraj Bhatru in Love again

ಸದ್ಯಕ್ಕೆ ದುನಿಯಾ ವಿಜಿ ಹಾಗೂ ಪ್ರಿಯಾಮಣಿ ಕಾಣಿಸಿಕೊಂಡಿರುವ 'ದನ ಕಾಯೋನು' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, 'ಗಾಳಿಪಟ' ಚಿತ್ರದ ನಂತರ ಮತ್ತೆ ಲವ್ ಮೂಡ್ ಗೆ ಬಂದಿದ್ದೇನೆ ಎನ್ನುತ್ತಾರೆ ಯೋಗರಾಜ ಭಟ್ರು.[ಯೋಗರಾಜ್ ಭಟ್- ದುನಿಯಾ ಸೂರಿ ನಡುವೆ ಮತ್ತೆ ಫೈಟ್]

'ಪ್ರೀತಿಯ ಕಥೆಗಳು ಕ್ಲೀಶೆಯಾಗಿರುವುದರಿಂದ ಬೇರೆ ಬೇರೆಯದ್ದನ್ನು ಪ್ರಯತ್ನಿಸಿದ್ದಾಗಿ ತಿಳಿಸುವ ಯೋಗರಾಜ ಭಟ್ಟರು 'ಯಾವುದೋ ಒಂದು ಐಡಿಯಾ ತಲೆಯಲ್ಲಿ ಹೊಳೆದು ಮತ್ತೆ ಪ್ರೇಮ ಕಥೆಯನ್ನು ಬರೆಯಲು ಪ್ರಾರಂಭಿಸಿದೆ. ಸದ್ಯಕ್ಕೆ 'ದನಕಾಯೋನು' ಮುಗಿದಿರುವುದರಿಂದ ಹೊಸ ಸ್ಕ್ರಿಪ್ಟ್ ಮೇಲೆ ಕೆಲಸ ಆರಂಭಿಸಬಹುದು ಎಂದು ತಿರ್ಮಾನಿಸಿದ್ದೇನೆ' ಎನ್ನುತ್ತಾರೆ ನಿರ್ದೇಶಕ ಯೋಗರಾಜ ಭಟ್ರು.

Director Yogaraj Bhatru in Love again

ಇನ್ನು ವಿಶೇಷವಾಗಿ ಈ ಲವ್ ಸಿನಿಮಾದ ಮೂಲಕ ಆಕಾಶ್ ನಾಗಪಾಲ್ ಎಂಬ ಯುವ ನಟನನ್ನು ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಪರಿಚಯಿಸಲಿದ್ದಾರಂತೆ ನಮ್ಮ ಭಟ್ರು. ಕಲಾ ನಿರ್ದೇಶಕ ಶಶಿಧರ್ ಅಡಪ ಅವರ ಸೂಚನೆಯ ಮೇರೆಗೆ ಆಕಾಶ್ ಅವರನ್ನು ನಾಯಕ ನಟನಾಗಿ ತೊಡಗಿಸಿಕೊಳ್ಳಲಿದ್ದಾರಂತೆ. ಜೊತೆಗೆ ಇಬ್ಬರು ನಾಯಕ ನಟಿಯರು ಇರಲಿದ್ದಾರೆ ಎಂದು ಭಟ್ಟರು ತಿಳಿಸಿದ್ದಾರೆ.[ಯಾವುದೇ ಕಟ್ಸ್ ಇಲ್ಲದೆ ಸೆನ್ಸಾರ್ ಪಾಸ್ ಆದ ಭಟ್ರ 'ಪರಪಂಚ']

ಒಟ್ನಲ್ಲಿ ಮಳೆ ಆಯ್ತು, ಗಾಳಿಪಟ ಆಯ್ತು, ಇನ್ಯಾವ ಹೊಸ ಲವ್ ಸ್ಟೋರಿಯನ್ನು ಭಟ್ರು ತೆರೆ ಮೇಲೆ ತರ್ತಾರೆ ಅಂತ ಕಾದು ನೋಡೋಣ.

English summary
The director is back to doing what he does best, creating magic with a love story. A master storyteller, when it comes to love stories (Mungaru Male, Gaalipata), director Yogaraj Bhat had taken a break, experimenting with various kinds of entertainers and genres (Manasare, Drama, Vaastu Prakaara).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada