»   » 'ಡೈರೆಕ್ಟರ್ಸ್ ಸ್ಪೆಷಲ್' ರಿಲೀಸ್ ಗೆ ಮುಹೂರ್ತ ಫಿಕ್ಸ್

'ಡೈರೆಕ್ಟರ್ಸ್ ಸ್ಪೆಷಲ್' ರಿಲೀಸ್ ಗೆ ಮುಹೂರ್ತ ಫಿಕ್ಸ್

Posted By:
Subscribe to Filmibeat Kannada
Director Guruprasad
ಮಠ ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೆ ಸೆನ್ಸಾರ್ ನಲ್ಲಿ ಪಾಸಾಗಿರುವ ಈ ಚಿತ್ರ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇದೇ ಮೇ 31ಕ್ಕೆ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ.

"ಸಂಬಂಧಗಳ ಸುತ್ತ" ಎಂಬುದು ಈ ಚಿತ್ರದ ಟ್ಯಾಗ್ ಲೈನ್. ನಗ್ಸೋದೇ ನಮ್ಮ್ ಬ್ಯುಸಿನೆಸ್ಸು...ಎನ್ನುವ ಜಾಹೀರಾತು ಡೈರೆಕ್ಟರ್ಸ್ ಸ್ಪೆಷಲ್ ಪೋಸ್ಟರ್ ನಲ್ಲಿ ಹಾಕಲಾಗಿದೆ. ಹಾಗಾಗಿ ಇದೊಂದು ಪಕ್ಕಾ ಕಾಮಿಡಿ ಚಿತ್ರ ಎಂದು ಪ್ರೇಕ್ಷಕರು ಭಾವಿಸಬಹುದು.

ನಟಿ ಪೂಜಾಗಾಂಧಿ ಅವರ ಸ್ಪೆಷಲ್ ಡಾನ್ಸ್ ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಸತತ ಮೂರು ವರ್ಷಗಳ ಸುದೀರ್ಘ ಸಮಯವನ್ನು ಈ ಚಿತ್ರಕ್ಕಾಗಿ ಗುರುಪ್ರಸಾದ್ ಧಾರೆ ಎರೆದಿದ್ದಾರೆ. ಅವರು ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಕೊಂಡಿದ್ದೇ ಚಿತ್ರ ವಿಳಂಬವಾಗಲು ಕಾರಣ.

ಸಂಭಾಷಣೆ ರಚನೆ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಗಳಲ್ಲಿ ಗುರು ತೊಡಗಿಕೊಂಡಿದ್ದರು. ಆಗಾಗ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ತಮ್ಮದೇ ಆದಂತಹ ಪ್ರೇಕ್ಷಕ ಬಳಗವನ್ನು ಹೊಂದಿರುವ ಗುರು ಅವರಿಗೆ ಪ್ರತಿಸ್ಪರ್ಧೆ ಒಡ್ಡುವ ಚಿತ್ರಗಳು ತೀರಾ ವಿರಳ.ಮಠದ್ದು ಹಳೆಯ ಕಥೆ, ಕುಡುಕರದ್ದು ನೆನ್ನೆಯ ಕಥೆ, ಗುರುಪ್ರಸಾದ್‌ರ ಇವತ್ತಿನ ಕಥೆಗೆ ಗಾಂಧಿನಗರವೇ ವಸ್ತು. (ಒನ್ಇಂಡಿಯಾ ಕನ್ನಡ)

English summary
Matha and Eddelu Manjunatha fame Guruprasad's 'Directors Special' film slated for release on 31st May. The film got U/A certificate from censor board. The film has has a story of a filmy background.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada