For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ ಧನಂಜಯ್ ಬ್ರೇಕ್: ಆದರೆ ಅಭಿಮಾನಿಗಳಿಗೆ ಡಬಲ್ ಟ್ರೀಟ್!

  |

  ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ನಟ ಡಾಲಿ ಧನಂಜಯ್ ದರ್ಬಾರ್ ಜೋರಾಗಿದೆ. 'ಟಗರು' ಚಿತ್ರದಲ್ಲಿ ಡಾಲಿಯಾಗಿ ಗೆದ್ದ ಧನು ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಲ್ಲೂ ಅಬ್ಬರಿಸ್ತಿದ್ದಾರೆ. ನಟ ರಾಕ್ಷಸನ ಹುಟ್ಟುಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಇರೋದು. ಈ ಬಾರಿ ಧನು ಹುಟ್ಟುಹಬ್ಬಕ್ಕೆ ಭರ್ಜರಿ ಸರ್‌ಪ್ರೈಸ್‌ಗಳು ಕಾಯ್ತಿದೆ.

  'ಡೈರೆಕ್ಟರ್ಸ್ ಸ್ಪೆಷಲ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಧನಂಜಯ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ದೊಡ್ಡ ಬ್ರೇಕ್‌ ಸಿಕ್ಕಿರಲಿಲ್ಲ. ಆದರೆ ಡಾಲಿಯಾಗಿ ಅಬ್ಬರಿಸಿದ ಮೇಲೆ ಅವರ ನಸೀಬೇ ಬದಲಾಗಿ ಬಿಡ್ತು. ಈಗ ಪರಭಾಷಾ ಸ್ಟಾರ್ ಫಿಲ್ಮ್ ಮೇಕರ್ಸ್ ಕೂಡ ಕರೆದು ಅವಕಾಶ ಕೊಡುತ್ತಿದ್ದಾರೆ. ಇನ್ನು ಕನ್ನಡದಲ್ಲಿ ಹೀರೊ ಆಗಿ ಮಾತ್ರವಲ್ಲದೇ ನಟನೆಗೆ ಅವಕಾಶ ಇರುವ ಒಳ್ಳೆ ಒಳ್ಳೆ ಪಾತ್ರಗಳಲ್ಲಿ ನಟಿಸುತ್ತಾ ಮುನ್ನುಗ್ಗುತ್ತಿದ್ದಾರೆ. ಇತ್ತೀಚೆಗೆ ಶಿವಣ್ಣನ ಜೊತೆಗೆ 'ಬೈರಾಗಿ' ಸಿನಿಮಾದಲ್ಲಿ ಒಂದೊಳ್ಳೆ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಸದ್ಯ ಓಟಿಟಿಯಲ್ಲಿ ಈ ಸಿನಿಮಾ ಸದ್ದು ಮಾಡ್ತಿದೆ.

  Dhananjaya | 'ಪುಷ್ಪ 2'ನಲ್ಲಿ ನನ್ನ ಪಾತ್ರ ಹೇಗಿರುತ್ತೆ ಅಂತ ಇನ್ನು ಗೊತ್ತಿಲ್ಲ -ಧನಂಜಯ್Dhananjaya | 'ಪುಷ್ಪ 2'ನಲ್ಲಿ ನನ್ನ ಪಾತ್ರ ಹೇಗಿರುತ್ತೆ ಅಂತ ಇನ್ನು ಗೊತ್ತಿಲ್ಲ -ಧನಂಜಯ್

  ಹೀರೊ ಆಗಿ ಮಾತ್ರವಲ್ಲದೇ 'ಬಡವ ರಾಸ್ಕಲ್' ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಧನಂಜಯ್ ಸಕ್ಸಸ್ ಕಂಡರು. ಸದ್ಯ ಆರೇಳು ಸಿನಿಮಾಗಳಲ್ಲಿ ಧನು ಕೆಲಸ ಮಾಡುತ್ತಿದ್ದಾರೆ. 'ಹೆಡ್‌ ಬುಷ್' ಚಿತ್ರದಲ್ಲಿ ಎಂ. ಪಿ ಜಯರಾಜ್ ಆಗಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳಿನ 'ಪಾಯುಂ ಓಲಿ ನೀ ಎನಕ್ಕು' ಅನ್ನುವ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಶೀಘ್ರದಲ್ಲೇ 'ಪುಷ್ಪ'-2 ತಂಡವನ್ನು ಸೇರಿಕೊಳ್ಳಲಿದ್ದಾರೆ. ಇಷ್ಟೆಲ್ಲಾ ಬ್ಯುಸಿಯಾಗಿರುವ ಡಾಲಿ ಮಂಗಳವಾರ(ಆಗಸ್ಟ್ 23) 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಅಪ್ಪು ಅಗಲಿಕೆಯ ನೋವಿನ ಹಿನ್ನಲೆಯಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಧನಂಜಯ ನಿರ್ಧರಿಸಿದ್ದಾರೆ. ವಿಡಿಯೋ ಸಂದೇಶದ ಮೂಲಕ ಈ ವಿಚಾರವನ್ನು ಅಭಿಮಾನಿಗಳು ತಿಳಿಸಿದ್ದಾರೆ.

  ಡಾಲಿ ಬರ್ತ್‌ಡೇಗೆ 'ಹೆಡ್‌ ಬುಷ್' ಸಾಂಗ್

  ಡಾಲಿ ಬರ್ತ್‌ಡೇಗೆ 'ಹೆಡ್‌ ಬುಷ್' ಸಾಂಗ್

  ಕೊರೊನಾ ಹಾವಳಿಯಿಂದ ಕಳೆದೆರಡು ವರ್ಷಗಳಿಂದ ಧನಂಜಯ್ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದರು. ಈ ಬಾರಿ ಹುಟ್ಟುಹಬ್ಬಕ್ಕೆ ಭರ್ಜರಿ ಸರ್‌ಪ್ರೈಸ್‌ಗಳು ಕಾಯುತ್ತಿದೆ. ಮಂಗಳವಾರ 'ಹೆಡ್‌ ಬುಷ್' ಚಿತ್ರದ 'ರೌಡಿಗಳು ನಾವು ರೌಡಿಗಳು' ಎನ್ನುವ ಲಿರಿಕಲ್ ವಿಡಿಯೋ ಸಾಂಗ್‌ ರಿಲೀಸ್ ಆಗ್ತಿದೆ. ಇದನ್ನು ಸ್ವತಃ ಡಾಲಿ ಟ್ವೀಟ್ ಮಾಡಿ ಖಚಿತಪಡಿಸಿದ್ದು, ಇದು ರೌಡೀಸ್ ಆಂಥಮ್‌ ಎಂದು ಹೇಳಿದ್ದಾರೆ. ಬೆಂಗಳೂರು ಭೂಗತಲೋಕದ ನೈಜ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಶೃತಿ ಹರಿಹರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೂನ್ಯ ನಿರ್ದೇಶನದ ಚಿತ್ರದಕ್ಕೆ ಚರಣ್ ರಾಜ್ ಮ್ಯೂಸಿಕ್ ಇದೆ.

  "ಪುಷ್ಪ" ನಂತರ ಟಾಲಿವುಡ್‌ನಲ್ಲಿ ಮಾರ್ಕೆಟ್ ಹೆಚ್ಚಿಸಿಕೊಂಡ ಡಾಲಿ

  'ಹೊಯ್ಸಳ' ಖಡಕ್ ಪೋಸ್ಟರ್ ರಿಲೀಸ್

  'ಹೊಯ್ಸಳ' ಖಡಕ್ ಪೋಸ್ಟರ್ ರಿಲೀಸ್

  'ಹೆಡ್‌ ಬುಷ್' ಚಿತ್ರದ ಸಾಂಗ್‌ ಜೊತೆಗೆ ಧನು ಹುಟ್ಟುಹಬ್ಬಕ್ಕೆ 'ಹೊಯ್ಸಳ' ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಲಿದೆ. 'ಸಲಗ' ಚಿತ್ರದಲ್ಲಿಕೆ ಖಡಕ್ ಕಾಪ್ ಆಗಿ ಅಬ್ಬರಿಸಿದ್ದ ಡಾಲಿ ಈ ಚಿತ್ರದಲ್ಲೂ ಖಾಕಿ ಖದರ್ ತೋರಿಸಲು ಬರ್ತಿದ್ದಾರೆ. ವಿಜಯ್. ಎನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಮಿಂಚಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗ್ತಿದ್ದು, ಗುರುದೇವ್ 'ಹೊಯ್ಸಳ' ಅನ್ನುವ ಪವರ್‌ಫುಲ್ ಪೊಲೀಸ್ ಆಫೀಸರ್ ಆಗಿ ಧನು ಬಣ್ಣ ಹಚ್ಚಿದ್ದಾರೆ. ಬೆಳಗಾವಿ, ಅಥಣಿ ಭಾಗಗಳಲ್ಲಿ ಸಿನಿಮಾ ಕಥೆ ನಡೆಯಲಿದೆ.

  'ಮಾನ್ಯೂನ್ ರಾಗ' ರಿಲೀಸ್ ಮುಂದಕ್ಕೆ

  'ಮಾನ್ಯೂನ್ ರಾಗ' ರಿಲೀಸ್ ಮುಂದಕ್ಕೆ

  ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೊನ್ನೆ ಶುಕ್ರವಾರ 'ಮಾನ್ಸೂನ್ ರಾಗ' ಸಿನಿಮಾ ತೆರೆಗೆ ಬರಬೇಕಿತ್ತು. ಸಿನಿಮಾ ಟ್ರೈಲರ್ ರಿಲೀಸ್ ಮಾಡಿ ಭರ್ಜರಿ ಪ್ರಚಾರ ಕೂಡ ಶುರು ಮಾಡಿದ್ದರು. ಆದರೆ ಪೋಸ್ಟ್‌ ಪ್ರೊಡಕ್ಷನ್ ತಡವಾಗುತ್ತಿರುವ ಕಾರಣಕ್ಕೆ ಕ್ಷಮೆ ಕೇಳಿ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಮುಂದೂಡಿದೆ. ಚಿತ್ರದಲ್ಲಿ ನಾಯಕಿ ರಚಿತಾ ರಾಮ್ ವೇಶ್ಯೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಆಕೆಯನ್ನು ಪ್ರೀತಿಸುವ ಪ್ರೇಮಿಯಾಗಿ ಬಹಳ ವಿಭಿನ್ನವಾಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ. 70-80ರ ದಶಕದ ಕಥೆ 'ಮಾನ್ಸೂನ್ ರಾಗ' ಚಿತ್ರದಲ್ಲಿದೆ.

  ಡಾಲಿ ಮತ್ತೆರಡು ಚಿತ್ರಗಳು ರಿಲೀಸ್‌ಗೆ ರೆಡಿ

  ಡಾಲಿ ಮತ್ತೆರಡು ಚಿತ್ರಗಳು ರಿಲೀಸ್‌ಗೆ ರೆಡಿ

  ಧನಂಜಯ್ ನಟನೆಯ 'ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ' ಹಾಗೂ 'ತೋತಾಪುರಿ' ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ. ಸೆಪ್ಟೆಂಬರ್‌ 9ಕ್ಕೆ 'ಜಮಾಲಿಗುಡ್ಡ' ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. 'ಮಾನ್ಸೂನ್ ರಾಗ' ತಡವಾಗುತ್ತಿರುವುದರಿಂದ ಈ ಚಿತ್ರವೂ ತಡವಾಗುವ ಸಾಧ್ಯೆತೆಯಿದೆ. ಕುಶಾಲ್ ಗೌಡ ನಿರ್ದೇಶನದ ಈ ರೆಟ್ರೋ ಲವ್‌ ಸ್ಟೋರಿಯಲ್ಲಿ ಡಾಲಿ ಬಾರ್ ಸಪ್ಲೆಯರ್ ಪಾತ್ರ ಮಾಡಿದ್ದಾರೆ. ಅವರ ಲುಕ್‌ ಬಹಳ ವಿಭಿನ್ನವಾಗಿದೆ. ವಿಜಯ್ ಪ್ರಸಾದ್ ನಿರ್ದೇಶನದ 'ತೋತಾಪುರಿ' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಜಗ್ಗೇಶ್ ಹೀರೊ ಆಗಿ ನಟಿಸಿರುವ ಈ ಚಿತ್ರದಲ್ಲಿ ನಾರಾಯಣ್ ಪಿಳ್ಲೈ ಅನ್ನುವ ಮೂರು ಶೇಡ್‌ಗಳ ಪಾತ್ರದಲ್ಲಿ ಧನು ಮಿಂಚಿದ್ದಾರೆ.

  English summary
  Double Teat for Daali fans on Dhananjaya Birthday. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X