Just In
Don't Miss!
- News
ಚೇತರಿಕೆ ಹಾದಿ ಕಂಡುಕೊಂಡ ಬಿಟ್ ಕಾಯಿನ್ ಮೌಲ್ಯ
- Finance
ಚಿನ್ನದ ಬೆಲೆ ಇಳಿಕೆ: ಗರಿಷ್ಠ ಮಟ್ಟಕ್ಕಿಂತ 11,500 ರೂ. ಕಡಿಮೆ
- Automobiles
ರಾಂಗ್ ಸೈಡ್'ನಲ್ಲಿ ಬಂದ ನಟನ ಕಾರನ್ನು ಹಿಂದಕ್ಕೆ ಕಳುಹಿಸಿದ ಟ್ರಾಫಿಕ್ ಪೊಲೀಸ್
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಮ್ಮ ಕೈ ಕಟ್ಟಿಹಾಕಿದ್ದಾರೆ: ಡಬ್ಬಿಂಗ್ ಬಗ್ಗೆ ಸಾ.ರಾ.ಗೋವಿಂದು ಹತಾಶೆ
ಡಬ್ಬಿಂಗ್ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಸ್ಥ, ನಿರ್ಮಾಪಕ ಸಾ.ರಾ.ಗೋವಿಂದು.
ಡಬ್ಬಿಂಗ್ ಹಾವಳಿ ವಿರುದ್ಧ ಅಸಮಾಧಾನಗೊಂಡ ಕರ್ನಾಟಕ ರಾಷ್ಟ್ರ ಸಮಿತಿ ಸದಸ್ಯರು ಇಂದು ಫಿಲಂ ಛೇಂಬರ್‌ಗೆ ಭೇಟಿ ನೀಡಿ ಸಾ.ರಾ.ಗೋವಿಂದು ಅವರೊಂದಿಗೆ ಚರ್ಚೆ ನಡೆದು, ಅವರಿಗೆ ಮನವಿ ಅರ್ಜಿಯೊಂದನ್ನು ನೀಡಿದರು.
ಈ ಸಂದರ್ಭದಲ್ಲಿ ಡಬ್ಬಿಂಗ್ ವಿರುದ್ಧ ತಾವು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಿರುವ ಹೋರಾಟದ ಬಗ್ಗೆ ಮಾತನಾಡಿದ ಸಾ.ರಾ.ಗೋವಿಂದು, 'ನ್ಯಾಯಾಲಯದ ಆದೇಶಗಳು ನಮ್ಮ ಕೈ ಕಟ್ಟಿಹಾಕಿವೆ' ಎಂದು ಅಸಮಾಧಾನ ಹೊರಹಾಕಿದರು.
ಈ ಹಿಂದೆ ಅನ್ಯ ಭಾಷೆಗಳ ಸಿನಿಮಾಗಳಿಗೆ ಇಂತಿಷ್ಟೇ ಚಿತ್ರಮಂದಿರವನ್ನು ಮಾತ್ರವೇ ನೀಡಬೇಕು ಎಂಬ ನಿಯಮ ಮಾಡಿಕೊಂಡಿದ್ದೆವು. ಆಗ 'ರಾ ಒನ್' ಎಂಬ ಸಿನಿಮಾ ಬಿಡುಗಡೆ ಆಯ್ತು. ಅವರಿಗೆ ನಿಯಮದಂತೆ ಕೆಲವು ಸಿನಿಮಾ ಮಂದಿರಗಳನ್ನು ನೀಡಿದೆವು, ಅವರು ನಮ್ಮ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ಗೆದ್ದರು. ಅಂದಿನಿಂದ ಯಾವ ಭಾಷೆಯ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ಬೇಕಾದರೂ ಬಿಡುಗಡೆ ಆಗಬಹುದು ಎಂಬಂತಾಗಿದೆ ಎಂದರು ಸಾ.ರಾ.ಗೋವಿಂದು.
ಬಾಹುಬಲಿ ಸಿನಿಮಾವನ್ನು ರಾಜ್ಯದಲ್ಲಿ 200 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರು. ಎದೆಗೆ ಗುಂಡು ಹೊಡೆದ ಅನುಭವವಾಯಿತು. ಆದರೆ ನ್ಯಾಯಾಲಯದ ಆದೇಶಗಳು ನಮ್ಮನ್ನು ಕಟ್ಟಿಹಾಕಿವೆ. ನಿಮ್ಮಂಥಹವರು ಆದರೂ ಇದರ ಬಗ್ಗೆ ಪ್ರತಿಭಟಿಸುತ್ತಿದ್ದೀರ, ನಿಮಗೆ ನನ್ನ ಗೌರವ ಇದ್ದೇ ಇರುತ್ತದೆ ಎಂದರು ಸಾ.ರಾ.ಗೋವಿಂದು.
'ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಕರ್ನಾಕಟದಲ್ಲಿ ಕನ್ನಡದಲ್ಲಿ, ಆಂಧ್ರ, ತೆಲಂಗಾಣಗಳಲ್ಲಿ ತೆಲುಗಿನಲ್ಲಿ, ಕೇರಳದಲ್ಲಿ ಮಲಯಾಳಂ ನಲ್ಲಿ ಬಿಡುಗಡೆ ಆಗಿದೆ. ಇದಕ್ಕೇನು ಅರ್ಥವಿಲ್ಲವೇ, ಭಾಷೆಯ ಬಗ್ಗೆ ಗೌರವ ಬೇಡವೇ, ನಮ್ಮ ಭಾಷೆ ಏನಾಯ್ತು, ಈ ನ್ಯಾಯಾಲಯಗಳಿಗೆ ಇದೆಲ್ಲಾ ಯಾಕೆ ಅರ್ಥವಾಗುತ್ತಿಲ್ಲ' ಎಂದು ಸಾ.ರಾ.ಗೋವಿಂದು ಅಸಮಾಧಾನ ಹೊರಹಾಕಿದ್ದಾರೆ.