»   » ರೀಲ್ ಮೇಲೆ ಮತ್ತೊಬ್ಬ ರಿಯಲ್ ರೌಡಿಯ ಕರಾಳ ಅಧ್ಯಾಯ

ರೀಲ್ ಮೇಲೆ ಮತ್ತೊಬ್ಬ ರಿಯಲ್ ರೌಡಿಯ ಕರಾಳ ಅಧ್ಯಾಯ

Posted By:
Subscribe to Filmibeat Kannada

'ಕೆಂಡಸಂಪಿಗೆ' ಮತ್ತು 'ದೊಡ್ಮನೆ ಹುಡುಗ' ಜೊತೆ ಜೊತೆಗೆ ದುನಿಯಾ ಸೂರಿ ಮತ್ತೊಂದು ಸಿನಿಮಾ ಮಾಡುತ್ತಿರುವ ಸುದ್ದಿಯನ್ನ ನಾವೇ ನಿಮಗೆ ಹೇಳಿದ್ವಿ. ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಜೊತೆಗೂಡಿ ದುನಿಯಾ ಸೂರಿ ಒಂದು ರಿಯಲಿಸ್ಟಿಕ್ ಸಿನಿಮಾ ಮಾಡೋಕೆ ಮನಸ್ಸು ಮಾಡಿರುವ ಬಗ್ಗೆ ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ.

ಇದೀಗ ಆ ರಿಯಲ್ ಸ್ಟೋರಿ ಯಾವುದು ಅನ್ನೋದು ಬಯಲಾಗಿದೆ. ಹಾಗಾದ್ರೆ, ಸೂರಿ ನಿರ್ದೇಶಿಸುತ್ತಿರುವ 'ರಿಯಲ್' ಕಥೆ ಯಾರದ್ದು? ಒಂದ್ಕಾಲದ ರೌಡಿ 'ಸೈಲೆಂಟ್ ಸುನೀಲ'ರದ್ದು!

ಹೌದು, ಭೂಗತ ಜಗತ್ತಿನ ಕುಖ್ಯಾತ ರೌಡಿ ಸೈಲೆಂಟ್ ಸುನೀಲನ ರಕ್ತಸಿಕ್ತ ಅಧ್ಯಾಯ ತೆರೆಮೇಲೆ ಅನಾವರಣವಾಗಲಿದೆ. ನಿಜ ಜೀವನದ ಕಥೆ ಆದ್ದರಿಂದ ಚಿತ್ರಕ್ಕೆ 'ಸೈಲೆಂಟ್ ಸುನೀಲ' ಅಂತಲೇ ನಾಮಕರಣ ಮಾಡಿದ್ದಾರೆ ನಿರ್ದೇಶಕ ದುನಿಯಾ ಸೂರಿ.

silent sunila

ಕುಖ್ಯಾತ ರೌಡಿ ಬೆಕ್ಕಿನ ಕಣ್ಣು ರಾಜೇಂದ್ರನ ಮರ್ಡರ್ ಕೇಸ್ ನಲ್ಲಿ ತಗಲಾಕೊಂಡಿದ್ದ ಸೈಲೆಂಟ್ ಸುನೀಲ, ತಮ್ಮ ನಿಜ ಜೀವನದ ಪಾತ್ರವನ್ನ ತೆರೆಮೇಲೂ ಪೋಷಿಸುತ್ತಿರುವುದು ಇಲ್ಲಿನ ವಿಶೇಷ. ಅರ್ಥಾತ್ 'ರಿಯಲ್' ಸೈಲೆಂಟ್ ಸುನೀಲ, 'ರೀಲ್'ನಲ್ಲಿ ತಮ್ಮ ಪಾತ್ರವನ್ನ ತಾವೇ ನಿಭಾಯಿಸಿ 'ಹೀರೋ' ಆಗುತ್ತಿದ್ದಾರೆ.

ಅದಾಗಲೇ ಸದ್ದಿಲ್ಲದೇ ಚಿತ್ರೀಕರಣಕ್ಕೂ ಚಾಲನೆ ನೀಡಿದ್ದಾರೆ ದುನಿಯಾ ಸೂರಿ. ಆಗ್ನಿ ಶ್ರೀಧರ್ ರವರ ಮೇಘ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ದುನಿಯಾ ಸೂರಿ ಕ್ಯಾಂಪಿನ ಕ್ಯಾಮರಾಮೆನ್ ಸತ್ಯ ಹೆಗಡೆ, ಸಂಕಲನಕಾರ ದೀಪು.ಎಸ್.ಕುಮಾರ್ ಇಲ್ಲೂ ಮುಂದುವರೆಯಲಿದ್ದಾರೆ. [ಅಗ್ನಿ ಶ್ರೀಧರ್ ಜೊತೆ ದುನಿಯಾ ಸೂರಿ 'ದಾದಾಗಿರಿ']

ಅಷ್ಟುಬಿಟ್ಟರೆ, ಪಾತಕ ಲೋಕದಲ್ಲಿ ಒಂದು ದಶಕದ ಕಾಲ ಮೆರೆದ 'ಸೈಲೆಂಟ್ ಸುನೀಲ'ನ ಜೊತೆ ಚಿತ್ರದಲ್ಲಿ ಯಾರ್ಯಾರು ಇರಲಿದ್ದಾರೆ ಅಂತ ಫೈನಲ್ ಆಗಿಲ್ಲ. ಅದೇನೇ ಇರಲಿ, ಅಗ್ನಿ ಶ್ರೀಧರ್ ಕಿಸೆಯಿಂದ ದುನಿಯಾ ಸೂರಿ ಕೃಪೆಯಿಂದ ಬೆಳ್ಳಿತೆರೆ ಮೇಲೆ ಮತ್ತೊಮ್ಮೆ 'ರಿಯಲ್' ರೌಡಿಗಳ ರುದ್ರನರ್ತನ ನಡೆಯಲಿದೆ. (ಏಜೆನ್ಸೀಸ್)

English summary
Director Duniya Soori and Agni Shridhar have joined hands for the new movie called 'Silent Sunila'. The film 'Silent Sunila' is based on Bangalore underworld and particularly on gangster 'Silent Sunila'. Interestingly, Silent Sunila himself is playing the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada