»   » ದುನಿಯಾ ವಿಜಿ ಹೈ ವೋಲ್ಟೇಜ್ ಚಿತ್ರ ಶಿವಾಜಿನಗರ

ದುನಿಯಾ ವಿಜಿ ಹೈ ವೋಲ್ಟೇಜ್ ಚಿತ್ರ ಶಿವಾಜಿನಗರ

Posted By:
Subscribe to Filmibeat Kannada

ಈ ಚಿತ್ರ ಹಂಡ್ರಡ್ ಪರ್ಸೆಂಟ್ ಹಿಟ್ ಆಗುತ್ತದೆ ಎಂಬ ನಂಬಿಕೆಯಲ್ಲಿ ಗಾಂಧಿನಗರ ಇದೆ. ದುನಿಯಾ ವಿಜಯ್ ಅಭಿನಯದ ಹೈ ವೋಲ್ಟೇಜ್ ಚಿತ್ರ 'ಶಿವಾಜಿನಗರ'. ಇದೇ ಮಹಾಶಿವರಾತ್ರಿಗೆ (ಫೆ.27) ತೆರೆಗೆ ಅಪ್ಪಳಿಸುತ್ತಿದೆ. ಗುರುವಾರವೇ ಚಿತ್ರ ತೆರೆಗೆ ಬರುತ್ತಿರುವುದು ವಿಶೇಷ.

ಹೆಸರಾಂತ ನಿರ್ಮಾಪಕ ರಾಮು ಅವರ ಚಿತ್ರಗಳೆಂದರೆ ಸಾಹಸಕ್ಕೆ ದೋಖಾ ಇರಲ್ಲ. ಜೊತೆಗೆ ಅದ್ದೂರಿತನ ಇದ್ದೇ ಇರುತ್ತದೆ. ಮಾಸ್ ಪ್ರೇಕ್ಷಕರಿಗೆ ಇಷ್ಟವಾದ ಎಲ್ಲಾ ಮಸಾಲೆಗಳನ್ನು ಕೊಡುವಂತಹ ನಿರ್ಮಾಪಕ. ಈ ಬಾರಿ ವಿಜಯ್ ಜೊತೆ ಪ್ಯಾರ್ ಗೆ ಆಗ್ಬಿಟ್ಟೈತೆ ಚೆಲುವೆ ಪರುಲ್ ಯಾದವ್ ಅಭಿನಯಿಸುತ್ತಿದ್ದಾರೆ. [ಪಾರೂಲ್ ಈಗ ಸೋಲೋ ಹೀರೋಯಿನ್]


ಪಿ.ಎನ್.ಸತ್ಯ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ. ಈ ಹಿಂದೆ ರಾಮು ಫಿಲ್ಮ್ ಲಾಂಛನದಲ್ಲಿ ಕಲಾಸಿಪಾಳ್ಯ (2005) ಚಿತ್ರ ಬಂದಿತ್ತು. ಈಗ ಅದೇ ಲಾಂಛನದಲ್ಲಿ ಶಿವಾಜಿನಗರ ನಿರ್ಮಿಸಲಾಗಿದೆ. ಪಿ ಎನ್ ಸತ್ಯ ಈ ಹಿಂದೆ ನಿರ್ಮಾಪಕ ರಾಮು ಅವರ ಸಂಸ್ಥೆಯಲ್ಲಿ 'ಘೂಳಿ' ನಿರ್ದೇಶನ ಮಾಡಿದ್ದರು.

ನಾಯಕ ನಟ ವಿಜಯ್ 'ಕಂಠೀರವ' ಸಿನೆಮಾದಲ್ಲಿ ಇದೆ ನಿರ್ಮಾಪಕರ ಸಂಸ್ಥೆಯಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಜಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಮ್ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ, ವಿಜಯ್ ಚಂಡೂರ್ ಅವರ ಸಹಾಯಕ ನಿರ್ದೇಶನ, ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.

ವಿಜಯ್ ಅವರಿಗೆ ನಾಯಕಿ ಆಗಿ ಪರೂಲ್ ಯಾದವ್ ಅವರು ಇದ್ದಾರೆ. ಪ್ರದೀಪ್ ರಾವತ್, ಅಭಿಮನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಷ್, ಸತ್ಯಜಿತ್, ಹುಳಿವಾನ್ ಗಂಗಾಧರ, ಶ್ರೀ ನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವು ಅಲ್ಲದೆ 20 ವರ್ಷಗಳ ಬಳಿಕ ಅಂದಿನ ನಾಯಕಿ ತ್ರಿವೇಣಿ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actor Duniya Vijay's high voltage movie Shivajinagara releasing on 27th February, Maha Shivaratri. The movie will show how middle class families suffer. 
Please Wait while comments are loading...