»   » ದುನಿಯಾ ವಿಜಯ್ 360 ಡಿಗ್ರಿ ಕ್ರೆಸೆಂಟ್ ಕಿಕ್

ದುನಿಯಾ ವಿಜಯ್ 360 ಡಿಗ್ರಿ ಕ್ರೆಸೆಂಟ್ ಕಿಕ್

Posted By:
Subscribe to Filmibeat Kannada

ದುನಿಯ ವಿಜಯ್ ಅವರ ಪ್ರಥಮ ನಿರ್ಮಾಣದ ಚಿತ್ರ 'ಜಯಮ್ಮನ ಮಗ'. ಈ ಚಿತ್ರ ಹಲವು ವಿಶೇಷಗಳ ಉಡುಗೊರೆಯನ್ನು ಅಭಿಮಾನಿಗಳಿಗೆ ನೀಡಿದೆ. ಅತ್ಯುತ್ತಮ ತಾಂತ್ರಿಕತೆಯಿಂದಾಗಿ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬಲ್ಲಿ ಭಾರಿ ಸದ್ದು ಮಾಡಿದೆ. [ಜಯಮ್ಮನ ಮಗ ಟ್ರೇಲರ್]

ನಾಯಕ ನಟನೊಬ್ಬ ನಿರ್ಮಾಪಕನಾದಾಗ ಏನೇನು ಬೇಕೋ ಅವೆಲ್ಲವನ್ನು ಶ್ರಮ, ಶ್ರದ್ಧೆ ಹಾಗೂ ಫ್ಯಾಶನ್ ನಿಂದ ಮಾಡುತ್ತಾರೆ ಎಂಬುದಕ್ಕೆ ದುನಿಯಾ ವಿಜಯ್ ಅವರೇ ನಿದರ್ಶನ. ಈ ಚಿತ್ರದಲ್ಲಿ ವಿಜಯ್ ಈಗಾಗಲೇ 360 ಡಿಗ್ರಿ ತಿರುಗಿ ಕ್ರೇಸೆಂಟ್ ಕಿಕ್ ಅನ್ನು ಮಾಡಿ ಅವರ 16 ವರ್ಷಗಳ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಅಂದಹಾಗೆ 360 ಕ್ರೆಸೆಂಟ್ ಕಿಕ್ ಬಗ್ಗೆ ಒಂದೆರಡು ಮಾತು. ಇದೊಂದು ಮಾರ್ಷಲ್ ಆರ್ಟ್ಸ್ ಕಿಕ್. ಇದನ್ನು 360 ಕಿಕ್, ಜಂಪ್ ಸ್ಪಿನ್ ಕಿಕ್ ಎಂದೂ ಕರೆಯುತ್ತಾರೆ. ಗಾಳಿಯಲ್ಲಿ ಜಿಗಿದು ದೇಹವನ್ನು ನೇರವಾಗಿಡಿದು 360 ಡಿಗ್ರಿ ತಿರುಗಿಸುವುದೇ ಈ ಕಿಕ್ ನ ಗಮ್ಮತ್ತು. ಇನ್ನೇನು ಕೆಳಗೆ ಅಡಿಯಿಡುತ್ತಿರುವಂತೆ ಕಿಕ್ಕಿಂಗ್ ಲೆಗ್ಗನ್ನು ನೀಳವಾಗಿ ಚಾಚಿ ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಬೇಕು. ಇದನ್ನು ಮಾಡಲು ಬಹಳಷ್ಟು ಶ್ರಮ ಅಗತ್ಯ. ಇದನ್ನು ಪದಗಳಲ್ಲಿ ಹೇಳುವುದಕ್ಕಿಂತ ನೋಡಿ ಆನಂದಿಸುವುದೇ ಮಜಾ.


ಚಿತ್ರದ ಶೀರ್ಷಿಕೆ ಗೀತೆಗೆ ಸ್ವತಃ ವಿಜಯ್ ಅವರೇ ಹೇಳಿ ಮನೆ ಮನೆ ಮಗನಾಗಿ 'ಜಯಮ್ಮನ ಮಗ' ಚಿತ್ರದಲ್ಲಿ ಕಂಗೊಳಿಸಿದ್ದಾರೆ. ನೃತ್ಯ ನಿರ್ದೇಶಕ ಮುರಳಿ ಅವರು ಎಂಟು ಬಗೆಯ ವೇಷ ಭೂಷಣಗಳನ್ನು ತೊಡಿಸಿ ವಿಜಯ್ ಅವರನ್ನು ಕುಣಿಸಿದ್ದಾರೆ. ಈ ಚಿತ್ರವನ್ನು ಸಮಸ್ತ ತಾಯಂದರಿಗಾಗಿ ವಿಜಯ್ ಅರ್ಪಿಸುತ್ತಿದ್ದಾರೆ.

ಅವರ ಹೆತ್ತವರ ಹೆಸರಿನಲ್ಲಿ ಈ ಚಿತ್ರದ ನಿರ್ಮಾಣ ಸಹ ಮಾಡುತ್ತಿದ್ದಾರೆ. 'ಜಯಮ್ಮನ ಮಗ' ಚಿತ್ರದ ಅಡಿ ಬರಹ 'ಇವ್ನ ಹಿಡ್ಕೊಳ್ಳಿ ನೆಮ್ಮದಿ ತಂದ್ಕೊಳ್ಳಿ' ಎಂದು ಹೇಳಲಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ಹಾಡಿನ ಸಾಲಿನಿಂದ ಆಯ್ಕೆ ಮಾಡಲಾಗಿದೆ.

ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಿ ಟಿ ಎಸ್ ಮುಗಿಸಿಕೊಂಡು ಚಿತ್ರವೂ ಆಗಸ್ಟ್ ಮೊದಲ ವಾರದಲ್ಲಿ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಮಾಡಿಕೊಳ್ಳಲಿದೆ. ಆಗಸ್ಟ್ ತಿಂಗಳಲ್ಲಿ ಸಿನೆಮಾದ ಬಿಡುಗಡೆ ಸಹ ಆಗಲಿದೆ ಎಂದು ನಿಯೋಜಿಸಲಾಗಿದೆ.

ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಅವರ ಮತ್ತೊಬ್ಬ ಶಿಷ್ಯ ವಿಕಾಸ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಅವರು ಕಳೆದ 9 ವರ್ಷಗಳಿಂದ ನಾಯಕ ನಿರ್ಮಾಪಕರಿಗೆ ಪರಿಚಯ. ಇದು ತಮಗೆ ಸಿಕ್ಕ ಅನಿರೀಕ್ಷಿತ ಅವರಕಾಶ. ನಿರ್ದೇಶನ ಮಾಡಲು ಚಿತ್ರದ ಕಥಾವಸ್ತು ನೀಡಿದವರು ವಿಜಯ್ ಅವರೇ ಎನ್ನುತ್ತಾರೆ ವಿಕಾಸ್.

ರಾಜ್ಯ ಪ್ರಶಸ್ತಿ ನಟಿ ಕಲ್ಯಾಣಿ ಅವರು 'ಜಯಮ್ಮಳಾಗಿ' ಅಭಿನಯಿಸಿದ್ದಾರೆ. ರಂಗಾಯಣ ರಘು 'ಜಯಮ್ಮನ ಮಗ' ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಡನಂಬಿಕೆಯ ಸುತ್ತ ರಚಿಸಿರುವ ಕಥೆಯ ನಾಯಕಿ ಡಾಕ್ಟರ್ ಭಾರತಿ.

ಉದಯ್ ಈ ಚಿತ್ರದಲ್ಲಿ ಖಳ ನಟರಾಗಿ ಅಭಿನಯಿಸಿದ್ದಾರೆ. ಅನಿಲ್, ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಸಹ ಪಾತ್ರವರ್ಗದಲ್ಲಿ ಇರುವರು. ಅರ್ಜುನ್ ಜನ್ಯ ಸಂಗೀತ ಇರುವ ಈ ಚಿತ್ರದಲ್ಲಿ ನಾಲ್ಕು ಭರ್ಜರಿ ಸಾಹಸ ಸನ್ನಿವೇಶಗಳಿವೆ. ಮಾಸ್ ಮಾಧ ಈ ಚಿತ್ರದ ಸಾಹಸ ನಿರ್ದೇಶಕರು. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು. (ಒನ್ಇಂಡಿಯಾ ಕನ್ನಡ)

English summary
Duniya Vijay fulfils his 16 year old dream while performing a 360 crescent Kick in 'Jayammana Maga' movie. The film 'Jayammana Maga' in the producer Dhuniya Talkies by actor turned producer Vijay and Ramesh. Vijay is the son of superstitious mother in this film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada