For Quick Alerts
  ALLOW NOTIFICATIONS  
  For Daily Alerts

  ಚಿತ್ರ ಬಿಡುಗಡೆಗೂ ಮುಂಚೆ ಅಣ್ಣಮ್ಮ ದೇವಿಯ ಮೊರೆ ಹೋದ 'ಸಲಗ'

  |

  ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ ಸಲಗ ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಮೊದಲ ಸಲ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳಿರುವ ಕಾರಣ ಬಹಳ ದೊಡ್ಡ ಮಟ್ಟದಲ್ಲಿ ಈ ಚಿತ್ರ ನಿರೀಕ್ಷೆ ಮೂಡಿಸಿದೆ. ಅದಕ್ಕೆ ತಕ್ಕಂತೆ ಟೀಸರ್, ಹಾಡುಗಳು ಹಾಗೂ ಪ್ರಮೋಷನ್ ಸಹ ಮಾಡಲಾಗಿದೆ.

  ಅಕ್ಟೋಬರ್ 14 ರಂದು ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಸಲಗ ರಿಲೀಸ್ ಆಗುತ್ತಿದೆ. ಅದಕ್ಕೂ ಮುಂಚೆ ಈಗ ವಿಜಿ ಅವರ ಕುಟುಂಬ ನಗರದ ಅಣ್ಣಮ್ಮ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡಿದ್ದಾರೆ.

  ಶುಕ್ರವಾರ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿದ ದುನಿಯಾ ವಿಜಯ್ ಹಾಗೂ ಪತ್ನಿ ಕೀರ್ತಿ ಸಲಗ ಚಿತ್ರದ ಸೆನ್ಸಾರ್ ಪ್ರಮಾಣಪತ್ರವಿಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪುತ್ರ ಸಾಮ್ರಾಟ್ ಹಾಗೂ ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ಸಹ ಭಾಗಿಯಾಗಿದ್ದರು.

  ಅಕ್ಟೋಬರ್ 10ಕ್ಕೆ ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ
  ಅಕ್ಟೋಬರ್ 10ರಂದು ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್‌ನಲ್ಲಿ ಸಲಗ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜನೆಯಾಗಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸ್ಟಾರ್ ನಟರು ಹಾಗೂ ರಾಜಕೀಯ ಗಣ್ಯರು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಲಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಸಿದ್ದರಾಮಯ್ಯ, ಪುನೀತ್ ರಾಜ್ ಕುಮಾರ್, ಶಿವಣ್ಣ, ಉಪೇಂದ್ರ ಅವರನ್ನು ಭೇಟಿ ಮಾಡಿ ಆಹ್ವಾನಿಸಲಾಗಿದೆ.

  duniya-vijay-visit-to-annamma-devi-temple-at-bangalore

  ಸಲಗ ಚಿತ್ರ ಸೆನ್ಸಾರ್ ಮುಗಿಸಿದ್ದ ಯಾವುದೇ ಕಟ್ ಇಲ್ಲದೇ 'ಎ' ಪ್ರಮಾಣ ಪತ್ರ ನೀಡಲಾಗಿದೆ. ಪಕ್ಕಾ ರೌಡಿಸಂ ಆಧರಿತ ಕಥಾಹಂದರ ಹೊಂದಿದ್ದು, ಸುಕ್ಕ ಶೈಲಿಯಲ್ಲಿ ಸಿನಿಮಾ ತಯಾರಾಗಿದೆ. ಈಗಾಗಲೇ ಹಾಡುಗಳು, ಡೈಲಾಗ್‌ಗಳು ಹಾಗೂ ಟೀಸರ್ ಭರ್ಜರಿ ಸದ್ದು ಮಾಡಿದೆ.

  ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಪ್ರಕಾಶ್ ನಾಯಕಿ. ಕಾಕ್ರೋಚ್ ಖ್ಯಾತಿಯ ಸುಧೀ, ಯಶ್ ಶೆಟ್ಟಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಕೆಪಿ ಶ್ರೀಕಾಂತ್ ನಿರ್ಮಿಸಿದ್ದಾರೆ. ಕೆಜಿ ರಸ್ತೆಯಲ್ಲಿರುವ ಸಂತೋಷ್ ಮೇನ್ ಥಿಯೇಟರ್ ಸೇರಿದಂತೆ ರಾಜ್ಯಾದ್ಯಂತ ಪ್ರಮುಖ ಚಿತ್ರಮಂದಿರಗಳಲ್ಲಿ ಸಲಗ ಎಂಟ್ರಿಯಾಗಲಿದೆ.

  English summary
  Actor Duniya Vijay, wife Keerthi and producer KP Srikanth visit to Annamma Devi Temple at Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X