For Quick Alerts
ALLOW NOTIFICATIONS  
For Daily Alerts

  ಭಜರಂಗಿ ಟಿಕೆಟ್ ಸೋಲ್ಡ್ ಔಟ್, ಡಿವಿಡಿ ಡಿಮ್ಯಾಂಡ್

  By Mahesh
  |

  ಹಲವು ಹೊಸತನಗಳನ್ನು ಮೈಗೂಡಿಸಿಕೊಂಡು ಕನ್ನಡ ಸಿನಿ ರಸಿಕರಿಗೆ ಭಾರಿ ಕುತೂಹಲ ಹುಟ್ಟಿಸಿರುವ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಚಿತ್ರದ ಟಿಕೆಟ್ ಗಳು ಬಿಡುಗಡೆಗೆ ಮುನ್ನವೇ ಸೋಲ್ಡ್ ಔಟ್ ಆಗಿದೆ. ಅಭಿಮಾನಿಗಳಿಂದ ಬೇಡಿಕೆ ಹೆಚ್ಚಿದ್ದರಿಂದ ತ್ರಿವೇಣಿ ಚಿತ್ರಮಂದಿರದಲ್ಲಿ ಬೆಳ್ಳಂಬೆಳ್ಳಗೆ ಚಿತ್ರದ ಮೊದಲ ಪ್ರದರ್ಶನ ಕಾಣುವ ಭಾಗ್ಯ ಪ್ರೇಕ್ಷಕರಿಗೆ ಸಿಕ್ಕಿತ್ತು.

  ತ್ರಿವೇಣಿ ಚಿತ್ರಮಂದಿರ ಸೇರಿದಂತೆ 160ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಭಜರಂಗಿ ಚಿತ್ರದ ಮುಖ್ಯ ಚಿತ್ರಮಂದಿರ ತ್ರಿವೇಣಿಯ ಬೆಳಗ್ಗೆ 7 ಗಂಟೆ ವಿಶೇಷ ಆಟದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ.

  ಪ್ರೇಕ್ಷಕರನ್ನು ತಲುಪಲು ಅಭಿಮಾನಿಗಳನ್ನು ಆಕರ್ಷಿಸಲು ವಿನೂತನ ತಂತ್ರಗಳ ಹೆಣೆಯುತ್ತಿರುವ ಚಿತ್ರಕರ್ಮಿಗಳು ಈ ಚಿತ್ರಕ್ಕೂ ವಿಭಿನ್ನ ರೀತಿ ಪ್ರಚಾರ ನೀಡುತ್ತಾ ಬಂದಿದ್ದಾರೆ. ಭಜರಂಗಿ ಚಿತ್ರ ಕೂಡಾ ಇದರಿಂದ ಹೊರತಾಗಿಲ್ಲ,. ಶಿವಣ್ಣ ಲಾಂಗ್ ಹಿಡಿದ್ರೆ 100 days ಗ್ಯಾರಂಟಿ ಎನ್ನುವ ಫ್ಯಾನ್ಸ್ ಡೈಲಾಗ್ ಜತೆಗೆ ಬೆಂಗಳೂರಿನ ಹಲವೆಡೆ ಶಿವರಾಜ್ ಅವರ ದೊಡ್ಡ ದೊಡ್ಡ ಕಟೌಟ್, ಫ್ಲೆಕ್ಸ್ ಗಳು ತಲೆ ಎತ್ತಿದೆ.

  ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಭಜರಂಗಿ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆದಿತ್ತು. ಟ್ರೇಲರ್ ಬಗ್ಗೆ ವಿವರ ಇಲ್ಲಿದೆ ಓದಿ

  52 ರ ಪ್ರಾಯದ ಶಿವರಾಜ್ ಕುಮಾರ್ ಅವರಿಗೆ ಇಂದಿಗೂ ಚಿಗುರು ಮೀಸೆ ಹುಡುಗನ ಉತ್ಸಾಹವಿದೆ. ಪಾತ್ರಕ್ಕೆ ಅಗತ್ಯವಿರುವುದರಿಂದ ಸಿಕ್ಸ್ ಪ್ಯಾಕ್ ಗಾಗಿ ಸಿದ್ಧ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದ ಶಿವಣ್ಣ ಟ್ರೇಲರ್ ನಲ್ಲಿ ಸಿಕ್ಸ್ ಪ್ಯಾಕ್ ಝಲಕ್ ತೋರಿಸಿದ್ದಾರೆ. ಶಿವಣ್ಣ ಅವರ ಸಿಕ್ಸ್ ಪ್ಯಾಕ್ ಸೀಕ್ರೇಟ್ ಬಗ್ಗೆ ಸತ್ವ ಮೀಡಿಯಾದವರು ತಯಾರಿಸಿರುವ ವಿಡಿಯೋ ಡಿವಿಡಿ ರೂಪದಲ್ಲಿ ಸೋಮವಾರ ಸಂಜೆ ಬೆಂಗಳೂರು ಮಂತ್ರಿ ಮಾಲ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ. 12-12-2013ರಂದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಡಿವಿಡಿಗೆ ಈಗ ಡಿಮ್ಯಾಂಡ್ ಶುರುವಾಗಿದೆ.

  ಡಿವಿಡಿ ರಿಲೀಸ್

  ಶಿವಣ್ಣ ಅವರು ಯಾವ ನಟ ಮಾಡದ ಸಾಧನೆ ಮಾಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ಅವರ ಸಿಕ್ಸ್ ಪ್ಯಾಕ್ ಬಗ್ಗೆ ಡಿವಿಡಿ ರಿಲೀಸ್ ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಅಭಿಮಾನಿಗಳು ಡಿವಿಡಿಗಾಗಿ ಡಿಮ್ಯಾಂಡ್ ಮಾಡಿದ್ದಾರೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಜಾಕ್ ಮಂಜು ಹೇಳಿದ್ದಾರೆ.

  ಶಿವಣ್ಣ ಸಿಕ್ಸ್ ಪ್ಯಾಕ್ ಝಲಕ್

  ಶಿವಣ್ಣ ಸಿಕ್ಸ್ ಪ್ಯಾಕ್ ಸೀಕ್ರೇಟ್ ಬಗ್ಗೆ ಮಾಡಿರುವ ಡಿವಿಡಿ ಹೊರ ತಂದಿರುವ ಸತ್ವ ಮೀಡಿಯಾದವರ ಪ್ರೋಮೋ. ಇಂದು ಸಂಜೆ 6 ಗಂಟೆ ಡಿವಿಡಿ ಲೋಕಾರ್ಪಣೆಯಾದರೂ ಮಾರುಕಟ್ಟೆಗೆ 12-12-2013ರಂದು ಬರಲಿದೆಯಂತೆ.

  ಸಿಕ್ಸ್ ಪ್ಯಾಕ್ ಈಗ ಕಾಮನ್ ಆಗಿದೆ. ಆದರೆ, ಈ ವಯಸ್ಸಿನಲ್ಲಿ ಶಿವರಾಜ್ ಅವರ ಉತ್ಸಾಹ, ಪರಿಶ್ರಮ ಕಂಡು ನಮಗೆ ಇನ್ನಷ್ಟು ಸ್ಪೂರ್ತಿ ಸಿಕ್ಕಿದೆ. ಸೈಕಲಿಂಗ್ ಇಷ್ಟಪಡುವ ಶಿವಣ್ಣ ಅವರು ವರ್ಕ್ ಔಟ್ ಬಗ್ಗೆ ತಿಳಿಯಲು ಡಿವಿಡಿ ಖರೀದಿಸಿ ಎಂದರು. ಶಿವರಾಜ್ ಅಭಿಮಾನಿಗಳ ಸಂಘದವರು ಸೈಕಲ್ ವಿತರಣೆ ಪೋಗ್ರಾಂ ಕೂಡಾ ಹಾಕಿಕೊಂಡಿದೆಯಂತೆ

  ಸಿಕ್ಸ್ ಪ್ಯಾಕ್ ಝಲಕ್

  ಸತ್ವ ಮಾಧ್ಯಮ ಹೊರ ತಂಡಿರುವ ಶಿವಣ್ಣ ಸಿಕ್ಸ್ ಪ್ಯಾಕ್ ಡಿವಿಡಿ ಸೋಮವಾರ(ಡಿ.9)ಸಂಜೆ 6 ಗಂಟೆ ಡಿವಿಡಿ ಲೋಕಾರ್ಪಣೆಯಾದರೂ ಮಾರುಕಟ್ಟೆಗೆ 12-12-2013ರಂದು ಬರಲಿದೆಯಂತೆ

  ಭಜರಂಗಿ ಮೆಗಾ ರಿಲೀಸ್

  ಕರ್ನಾಟಕದಾದ್ಯಂತ ಸುಮಾರು 160ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭಜರಂಗಿ ಡಿ.12ರಂದು ತೆರೆ ಕಾಣಲಿದೆ. ರಾಕ್ ಲೈನ್ ಸಿನಿಮಾಸ್ ನಲ್ಲಿ ಈಗಾಗಲೇ ಬುಕ್ಕಿಂಗ್ ಶುರುವಾಗಿದೆ. ಇದಲ್ಲದೆ, ದೆಹಲಿ, ಕೊಚ್ಚಿನ್, ಚೆನ್ನೈ, ಮುಂಭೈ, ಹೈದರಾಬಾದ್, ಪುಣೆ ಹಾಗೂ ಸೂರತ್ ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಸ್ಯಾಂಡಲ್ ವುಡ್ ನ ಅತಿದೊಡ್ಡ ರಿಲೀಸ್ ಇದಾಗಲಿದೆ.

  ಪಿವಿಆರ್ ಜತೆ ಒಪ್ಪಂದ

  ದೇಶದಲ್ಲಿ ಅತಿದೊಡ್ಡ ಚಿತ್ರ ಪರದೆ ಜಾಲ ಹೊಂದಿರುವ ಪಿವಿಆರ್ ಜತೆ ಭಜರಂಗಿ ನಿರ್ಮಾಪಕರಾದ ನಟರಾಜ್ ಗೌಡ ಹಾಗೂ ಜಾಕ್ ಮಂಜು ಅಲಿಯಾಸ್ ಮಂಜು ಗೌಡ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಚಿತ್ರವನ್ನು ತಲುಪಿಸಲು ಸಾಧ್ಯವಾಗುತ್ತಿದ್ದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  ಶಿವಣ್ಣನ ಪವರ್

  ಚಿತ್ರದ ಟಿವಿ ರೈಟ್ಸ್ 3.25 ಕೋಟಿ ರೂಪಾಯಿಗೆ ಮಾರಾಟವಾಗಿದೆ, ಕೆಲವು ದಿನಗಳ ಹಿಂದೆ ಅಗ್ರೀಮೆಂಟ್ ಸೈನ್ ಮಾಡಿದ್ದೇವೆ ಎಂದು ನಿರ್ಮಾಪಕರು ಸ್ಪಷ್ಟ ಪಡಿಸಿದ್ದರು. ಚಿತ್ರದ ಸಟಿಲೈಟ್ ರೈಟ್ಸ್ ಭರ್ಜರಿಯಾಗಿ ಮಾರಾಟವಾಗಿದೆ ಎಂಬ ಸುದ್ದಿಯಿದೆ ಆದರೆ, ಇನ್ನೂ ಎಷ್ಟಕ್ಕೆ ಎಂಬುದು ತಿಳಿದು ಬಂದಿಲ್ಲ.

  ಭರ್ಜರಿ ಚಿತ್ರ ತಂಡ

  ಶಿವಣ್ಣ ಮತ್ತು ನಿರ್ದೇಶಕ ಹರ್ಷ ಹೊಂದಾಣಿಕೆಯಲ್ಲಿ ಬರುತ್ತಿರುವ ಮೊದಲ ಚಿತ್ರವಿದು. ಶಿವಣ್ಣ, ಐಂದ್ರಿತಾ, ಬುಲೆಟ್ ಪ್ರಕಾಶ್, ಊರ್ವಶಿ, ಸಾಧು ಕೋಕಿಲ, ಹೊನ್ನವಳ್ಳಿ ಕೃಷ್ಣ, ತಬ್ಲಾ ನಾಣಿ ಪ್ರಮುಖ ಭೂಮಿಕೆಯಲ್ಲಿದ್ದಾರೆ.

  ನಾಟಕ ರಂಗದಿಂದ ಬಂದಿರುವ ಸೌರವ್ ಲೋಕೇಶ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಿವಣ್ಣನ ಲುಕ್ ಜತೆ ವಿಲನ್ ಗಳ ವಿಶಿಷ್ಟ ಲುಕ್ ಕೂಡಾ ಪ್ರೇಕ್ಷಕರನ್ನು ಸೆಳೆದಿದೆ.

  ಯುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡಾ ಜನಪ್ರಿಯತೆ ಗಳಿಸಿದೆ. ಹಾಡುಗಳ ವಿಮರ್ಶೆ ಇಲ್ಲಿ ಓದಿ

  ಭಜರಂಗಿ ಟ್ರೇಲರ್ ನೋಡಿ

  ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಭಜರಂಗಿ ಚಿತ್ರದ ಟ್ರೇಲರ್ ನೋಡಿ

  ಭರ್ಜರಿ ಚಿತ್ರ ತಂಡ

  ಎಲ್ಲೆಡೆ ಭಜರಂಗಿ ಕ್ರೇಜ್

  ಭರ್ಜರಿ ಚಿತ್ರ ತಂಡ

  ಎಲ್ಲೆಡೆ ಭಜರಂಗಿ ಕ್ರೇಜ್

  ಭರ್ಜರಿ ಚಿತ್ರ ತಂಡ

  ಎಲ್ಲೆಡೆ ಭಜರಂಗಿ ಕ್ರೇಜ್

  ಭರ್ಜರಿ ಚಿತ್ರ ತಂಡ

  ಎಲ್ಲೆಡೆ ಭಜರಂಗಿ ಕ್ರೇಜ್

  English summary
  Hattrick hero Shivaraj Kumar, who wowed the audience by sporting six pack abs at the age of 52, is all set to give a feast for his fans with a DVD on the journey of his workout. Special 7 A.M show of Bhajarangi which was Organized for fans at Triveni has been Sold out

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more