For Quick Alerts
  ALLOW NOTIFICATIONS  
  For Daily Alerts

  'ಅಮ್ಮನ ತೋಟ'ದಲ್ಲಿ ಸಮಯ ಕಳೆದ ಪ್ರೇಮ್ , ರಕ್ಷಿತಾ

  |

  ನಟ ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶಿಸಿ ತೆರೆಗೆ ತಂದಿರುವ ಸಿನಿಮಾ 'ಏಕ್ ಲವ್ ಯಾ' . ಈ ಸಿನಿಮಾದಲ್ಲಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ಹೊಸ ಪ್ರತಿಭೆ ನಟಿ ರೀಷ್ಮಾ ನಟಿಸಿ ಫಸ್ಟ್‌ ಸಿನಿಮಾದಲ್ಲೇ ನೋಡುಗರನ್ನು ಮೋಡಿ ಮಾಡಿದ್ದಾರೆ. ಒಂದೊಳ್ಳೆ ರೊಮ್ಯಾಂಟಿಕ್ ಕಥೆಯನ್ನು ಹೊತ್ತು ಫೆಬ್ರವರಿ 24ಕ್ಕೆ ಸಿನಿಮಾ ರಾಜ್ಯದಾದ್ಯಂತ ತೆರೆ ಕಂಡು ಉತ್ತಮ ರೆಸ್ಪಾನ್ಸ್‌ ಕೂಡ ಪಡೆದುಕೊಳ್ಳುತ್ತಿದೆ.

  'ಏಕ್ ಲವ್ ಯಾ' ಸಿನಿಮಾವನ್ನು ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡಿದ್ದು, ವಿತರಣೆ ಮಾಡಿರುವುದು ಸ್ವತಃ ನಿರ್ದೇಶಕ ಪ್ರೇಮ್. ಹೀಗಾಗಿ ಈ ಸಿನಿಮಾವನ್ನು ಉತ್ತಮವಾಗಿ ತೆರೆಗೆ ತರಲು ಇಡೀ ಚಿತ್ರತಂಡ ಬರೋಬ್ಬರಿ ಮೂರು ವರ್ಷಗಳಿಂದ ಪ್ರಯತ್ನ ಮಾಡಿದೆ. ಅದರಂತೆ ರಿಲೀಸ್‌ ಆಗಿರುವ ಚಿತ್ರಕ್ಕೆ ನೋಡುಗರು ಕೂಡ ಜೈ ಎಂದಿದ್ದಾರೆ. ಪ್ರೇಮ್ ನಿರ್ದೇಶನದ ಸಿನಿಮಾ ಸೂಪರ್ ಅಂತಿದ್ದಾರೆ. ಹೀಗೆ ಥಿಯೇಟರ್‌ ಗಳಲ್ಲಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವಾಗಲೇ 'ಏಕ್ ಲವ್ ಯಾ' ತಂಡ ಜೋಗಿ ಪ್ರೇಮ್ ಅವರ ಅಮ್ಮನ ತೋಟಕ್ಕೆ ಭೇಟಿ ನೀಡಿ ಸಮಯ ಕಳೆದಿದೆ.

  ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ, ಎಲ್ಲರೂ ಸ್ವಾರ್ಥಿಗಳು: ಪ್ರೇಮ್ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ, ಎಲ್ಲರೂ ಸ್ವಾರ್ಥಿಗಳು: ಪ್ರೇಮ್

  ಹೌದು ಥಿಯೇಟರ್‌ ರೌಂಡ್ಸ್ ಮಾಡುತ್ತಿದ್ದ ತಂಡ ಸಿನಿಮಾ ರಿಲೀಸ್ ಆದಾಗಿನಿಂದಲೂ ಬಿಡುವಿಲ್ಲದೇ ಓಡಾಟವನ್ನು ನಡೆಸುತ್ತಿದೆ. ಹೀಗಾಗಿ ಪ್ರೇಮ್ ಅವರ ಒಡೆತನದ 'ಅಮ್ಮನ ತೋಟ'ಕ್ಕೆ ಇಡೀ ತಂಡ ತೆರಳಿ ಕೊಂಚ ರಿಲ್ಯಾಕ್ಸ್ ಮಾಡಿದೆ. ರಕ್ಷಿತಾ ಪ್ರೇಮ್, ನಟಿ ರೀಶ್ಮಾ ನಾಣಯ್ಯ, ರಾಣಾ, ಮತ್ತು ಪ್ರೇಮ್ ಸೇರಿದಂತೆ ಹಲವರು 'ಅಮ್ಮನ ತೋಟ'ಕ್ಕೆ ತೆರಳಿದ್ದು ಕೆಲ ಗಂಟೆ ಅಲ್ಲೆ ಕಳೆದಿದ್ದಾರೆ. ತೋಟದಲ್ಲಿ ಸುತ್ತಾಟ ನಡೆಸಿ, ಅಲ್ಲಿ ಸಾಕಿರುವಂತಹ ದನ ಕರುಗಳಿಗೆ ಮೇವು ಹಾಕಿ ಖುಷಿ ಪಟ್ಟಿದೆ 'ಏಕ್ ಲವ್ ಯಾ' ತಂಡ.


  ಅಂದಹಾಗೆ ಪ್ರೇಮ್ ಅವರ ತಾಯಿ ಸ್ಮರಣಾರ್ಥ ಈ 'ಅಮ್ಮನ ತೋಟ'ವನ್ನು ಪ್ರೇಮ್ ನಿರ್ಮಾಣ ಮಾಡಿದ್ದಾರೆ. ಕಳೆದ ವರ್ಷ ಅಂದ್ರೆ ಅಕ್ಟೋಬರ್ 22 ರಂದು ಪ್ರೇಮ್ ಅವರ ಹುಟ್ಟುಹಬ್ಬ. ಈ ವಿಶೇಷ ದಿನದಂದು ಜೋಗಿ ಪ್ರೇಮ್ ತನ್ನ ಅಮ್ಮನಿಗಾಗಿ ಗುಡಿಯೊಂದನ್ನ ಕಟ್ಟಿಸಿದ್ದರು. ತನ್ನ ತಾಯಿ ಭಾಗ್ಯಮ್ಮರನ್ನು ಅತೀಯಾಗಿ ಇಷ್ಟ ಪಡುತ್ತಿದ್ದ ಪ್ರೇಮ್ , ಕಳೆದ ವರ್ಷವಷ್ಟೇ ಅವರನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ತನ್ನ ಹುಟ್ಟೂರು ಮದ್ದೂರಿನ ಬೆಸಗರ ಹಳ್ಳಿಯಲ್ಲಿ ಇರುವ ತೋಟದಲ್ಲಿ ತನ್ನ ಅಮ್ಮನಿಗಾಗಿ ಒಂದು ಗುಡಿಯನ್ನೇ ಪ್ರೇಮ್ ಕಟ್ಟಿಸಿದ್ದಾರೆ.
  Ek Love Ya movie team spent time at Ammana Thota

  ಹುಟ್ಟುಹಬ್ಬದಂದೇ ಅಮ್ಮನ ಈ ಗುಡಿಯನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದರು ಪ್ರೇಮ್. ಈ ತೋಟಕ್ಕೆ ಅಮ್ಮನ ತೋಟ ಎಂದೆ ಹೆಸರಿಡಲಾಗಿದ್ದು, ಇಲ್ಲಿ ಸಾಕಷ್ಟು ತರಕಾರಿ ಬೆಳೆಗಳನ್ನು ಬೆಳೆಸಲಾಗುತ್ತಿದೆ. ಹಾಗೆಯೇ ಗುಜರಾತಿನ ಕೆಲ ಹಸುಗಳು ಮತ್ತು ಎಮ್ಮೆಗಳನ್ನು ಇಲ್ಲಿ ಸಾಕಲಾಗುತ್ತಿದ್ದು, ಅಮ್ಮನ ತೋಟ ಹೇಗಿದೆ ಎಂಬುದನ್ನ ವಿಡಿಯೋ ಮೂಲಕ ರಿವೀಲ್ ಮಾಡಿದ್ದರು ಪ್ರೇಮ್. ಇದೀಗ 'ಏಕ್ ಲವ್ ಯಾ' ಸಿನಿಮಾ ತಂಡ ಕೂಡ 'ಅಮ್ಮನ ತೋಟ'ಕ್ಕೆ ತೆರಳಿದ್ದು, ಎಂಜಾಯ್ ಮಾಡಿ ಬಂದಿದ್ದಾರೆ. ಅಲ್ಲಿ ಕಳೆದ ಒಂದಷ್ಟು ಕ್ಷಣಗಳನ್ನು ನಟಿ ರೀಷ್ಮಾ ನಾಣಯ್ಯ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.

  ಪೈರಸಿ ವಿರುದ್ಧ ಪ್ರೇಮ್ ಗರಂ, ಸಿಎಂಗೆ ದೂರು ನೀಡಲು ಸಜ್ಜುಪೈರಸಿ ವಿರುದ್ಧ ಪ್ರೇಮ್ ಗರಂ, ಸಿಎಂಗೆ ದೂರು ನೀಡಲು ಸಜ್ಜು

  ಇನ್ನು 'ಏಕ್ ಲವ್ ಯಾ' ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿದ್ದ ನಿರ್ದೇಶಕ ಪ್ರೇಮ್ ''ರಾಣಾ ಹಾಗೂ ರೀಷ್ಮಾ ಇಬ್ಬರನ್ನೂ ಜನ ಒಪ್ಪಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಇವರಿಬ್ಬರನ್ನೂ ಹಾಕಿಕೊಂಡಿದ್ದು ಒಳ್ಳೆಯದಾಯಿತು ಎನಿಸುತ್ತಿದೆ. ಹೊಸ ನಟ-ನಟಿಯರು ಎಂದು ನೋಡದೆ ನಮ್ಮ ಸಿನಿಮಾಕ್ಕೆ ಬಹಳ ದೊಡ್ಡ ಪ್ರತಿಕ್ರಿಯೆಯನ್ನು ಜನ, ಅಭಿಮಾನಿಗಳು ನೀಡಿದ್ದಾರೆ. ಅವರಿಗೆ ಜೀವನ ಪರ್ಯಂತ ಋಣಿಯಾಗಿರುತ್ತೇನೆ'' ಎಂದಿದ್ದಾರೆ ಪ್ರೇಮ್. 'ಏಕ್‌ ಲವ್ ಯಾ' ಸಿನಿಮಾದಲ್ಲಿ ರಾಣಾ, ರೀಷ್ಮಾ ಅಲ್ಲದೆ ನಟಿ ರಚಿತಾ ರಾಮ್ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಹಾಡುಗಳು ಸೂಪರ್ ಹಿಟ್ ಆಗಿವೆ.

  English summary
  Director prem Ek Love Ya movie team spent time at 'Ammana Thota' recently.
  Thursday, March 3, 2022, 16:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X