For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಚಿತ್ರಕ್ಕಾಗಿ ಮತ್ತೆ ಕನ್ನಡಕ್ಕೆ ಬಂದ 'ಸ್ಟಂಟ್ ಶಿವ'

  |
  ಬಾವಮೈದುನನ ಸಿನೆಮಾಕ್ಕೆ ದೊಡ್ಡ ಸ್ಟಾರ್ ಕರೆಸಿದ ಪ್ರೇಮ್

  'ದಿ ವಿಲನ್' ಸಿನಿಮಾ ಬಳಿಕ ತಮ್ಮ ಬಾವಮೈದುನ ರಾಣಾ (ರಕ್ಷಿತಾ ಪ್ರೇಮ್ ಸಹೋದರ) ಅವರನ್ನ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ನಿರ್ದೇಶಕ ಪ್ರೇಮ್ ಹಲವು ಸರ್ಪ್ರೈಸ್ ಗಳನ್ನ ಕೊಡ್ತಿದ್ದಾರೆ. ಸಿನಿಮಾ ಟೈಟಲ್, ನಾಯಕನ ಹೆಸರು ಬದಲಾವಣೆ ನಂತರ ಈಗ ಸೂಪರ್ ಸ್ಟಾರ್ ಗಳಿಗೆ ಆಕ್ಷನ್ ಕಟ್ ಹೇಳಿರುವ ಸಾಹಸ ನಿರ್ದೇಶಕರನ್ನ ಕರೆತಂದಿದ್ದಾರೆ.

  ಆಕ್ಷನ್ ದೃಶ್ಯಕ್ಕೆ ಚಾಲನೆ ನೀಡುವುದರ ಮೂಲಕ 'ಏಕ್ ಲವ್ ಯಾ' ಶೂಟಿಂಗ್ ಆರಂಭಿಸಿರುವ ಪ್ರೇಮ್, ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ಸ್ಟಂಟ್ ಶಿವ ಅವರನ್ನ ಕರೆದುಕೊಂಡು ಬಂದಿದ್ದಾರೆ.

  'ಏಕ್ ಲವ್ ಯಾ' ಚಿತ್ರೀಕರಣ ಪ್ರಾರಂಭಸಿದ ನಿರ್ದೇಶಕ ಪ್ರೇಮ್

  ಈಗಾಗಲೇ ಏಕ್ ಲವ್ ಯಾ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು, ಸ್ಟಂಟ್ ಶಿವ ಅವರ ಭರ್ಜರಿ ಆಕ್ಷನ್ ಚಿತ್ರಕ್ಕೆ ಜೋಶ್ ಹೆಚ್ಚಿಸಿದೆ. ಈ ಬಗ್ಗೆ ಸ್ವತಃ ಪ್ರೇಮ್ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

  ಸ್ಟಂಟ್ ಶಿವ ಅವರ ಬಗ್ಗೆ ಹೇಳುವುದಾರೇ ನಟ ಮತ್ತು ಸಾಹಸ ನಿರ್ದೇಶಕರಾಗಿದ್ದು, ಎಸ್ ಎಸ್ ರಾಜಮೌಳಿ ನಿರ್ದೇಶನದ ಯಮದೊಂಗ ಚಿತ್ರದ ಮೂಲಕ ಸ್ಟಂಟ್ ಡೈರೆಕ್ಟರ್ ಆಗಿ ಪರಿಚಯವಾದರು. ಅಲ್ಲಿಂದ ಆರಂಭವಾದ ಇವರ ಜರ್ನಿ ತೆಲುಗು, ತಮಿಳು, ಕನ್ನಡ, ಮಲಯಾಳಂ, ಮರಾಠಿ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.

  ಅಜಿತ್ ಕುಮಾರ್, ಧನುಶ್, ವಿಜಯ್, ಸೂರ್ಯ, ಮಮ್ಮೂಟಿ, ರಜನಿಕಾಂತ್, ಶಶಿ ಕುಮಾರ್ ಅಂತಹ ಸ್ಟಾರ್ ನಟರಿಗೆ ಸಾಹಸ ನಿರ್ದೇಶನ ಮಾಡಿರುವ ಅನುಭವ ಹೊಂದಿದ್ದಾರೆ.

  ಸಹೋದರನಿಗಾಗಿ ರಕ್ಷಿತಾ ಎಷ್ಟು ಕಥೆ ರಿಜೆಕ್ಟ್ ಮಾಡಿದ್ರು ಗೊತ್ತಾ?

  ವಿಶೇಷ ಅಂದ್ರೆ ಸ್ಟಂಟ್ ಶಿವ ಇದಕ್ಕೂ ಮುಂಚೆ ಕನ್ನಡದಲ್ಲೂ ಕೆಲಸ ಮಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ಚಕ್ರವ್ಯೂಹ' ಚಿತ್ರಕ್ಕೆ ಇವರೇ ಸಾಹಸ ನಿರ್ದೇಶನ ಮಾಡಿದ್ದರು. ಈಗ ಮೂರು ವರ್ಷದ ನಂತರ ಮತ್ತೆ ಕನ್ನಡಕ್ಕೆ ವಾಪಸ್ ಆಗಿರುವುದು ಕುತೂಹಲ ಮೂಡಿಸಿದೆ.

  ಇನ್ನು ರಕ್ಷಿತಾ ಸಹೋದರ ರಾಣಾ ಅಭಿನಯದ ಮೊದಲ ಸಿನಿಮಾ ಏಕ್ ಲವ್ ಯಾ. ಸ್ವತಃ ರಕ್ಷಿತಾ ಅವರೇ ಈ ಚಿತ್ರವನ್ನ ನಿರ್ಮಿಸುತ್ತಿದ್ದು, ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ಸದ್ಯಕ್ಕೆ ನಾಯಕಿ ಯಾರು ಎಂಬುದು ಅಂತಿಮವಾಗಿಲ್ಲ.

  English summary
  Rakshita prem brothers debut movie 'ek love ya' Shooting start wit fight Stunt Silva master. the movie directed by Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X