For Quick Alerts
  ALLOW NOTIFICATIONS  
  For Daily Alerts

  ವಿಜಯ ಪ್ರಕಾಶ್ ಸವಾಲನ್ನು ಸ್ವೀಕರಿಸಿದ ಹಣ್ಣಿನ ವ್ಯಾಪಾರಿ, ಆಟೋ ಚಾಲಕ

  |

  ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ನೀಡಿದ್ದ ಕವನದ ಸವಾಲನ್ನು ಗಾಯಕ ವಿಜಯ ಪ್ರಕಾಶ್ ಸ್ವೀಕರಿಸಿದ್ದರು. ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಹಾಡಿದ್ದರು. ನಂತರ ಈ ಸವಾಲನ್ನು ಜನ ಸಾಮಾನ್ಯರಿಗೆ ವಿಜಯ ಪ್ರಕಾಶ್ ನೀಡಿದ್ದರು.

  ವಿಜಯ ಪ್ರಕಾಶ್ ನೀಡಿದ್ದ ಕವನದ ಸವಾಲು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಇಷ್ಟು ದಿನ ಸ್ಟಾರ್ ಗಳ ಮಧ್ಯೆ ನಡೆಯುತ್ತಿದ್ದ ಕವನ ಸವಾಲು ಇದೀಗ ಜನ ಸಾಮಾನ್ಯರನ್ನು ತಲುಪಿದೆ. ಸಾಕಷ್ಟು ಜನರು ಕನ್ನಡ ಕವನಗಳನ್ನು ಓದಿದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಎಲ್ಲ ವಿಡಿಯೋಗಳಿಗೆ ವಿಜಯ ಪ್ರಕಾಶ್ ಸ್ಪಂದಿಸಿದ್ದಾರೆ.

  ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಕಿದ ಸವಾಲ್ ಸ್ವೀಕರಿಸಿದ ಗಾಯಕ ವಿಜಯ್ ಪ್ರಕಾಶ್ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಕಿದ ಸವಾಲ್ ಸ್ವೀಕರಿಸಿದ ಗಾಯಕ ವಿಜಯ್ ಪ್ರಕಾಶ್

  ಅದರಲ್ಲಿಯೂ ಕೆ ಶ್ರೀನಿವಾಸ್ ಎಂಬ ಆಟೋ ಚಾಲಕ ಹಾಗೂ ಚಂದ್ರು ಎಂಬ ಹಣ್ಣಿನ ಅಂಗಡಿಯ ಯುವಕ ಕವನ ಓದಿರುವ ವಿಡಿಯೋ ಗಮನ ಸೆಳೆದಿದೆ. ಚಂದ್ರು, ಕೆ ಎಸ್ ನರಸಿಂಹ ಸ್ವಾಮಿ ರವರ 'ಹೂವು ಬಳ್ಳಿಗೆ ದೀಪ..' ಎಂಬ ಕವನ ಓದಿದ್ದಾರೆ. ಕೆ ಶ್ರೀನಿವಾಸ್ ''ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಎಂದು ಹಾಡಿದ್ದಾರೆ.

  ಈ ವರ್ಷ ಈ ರೀತಿ ಕವನ ಓದುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ನಟ ಯಶ್, ಗಣೇಶ್, ಹಾಸ್ಯ ನಟ ಚಿಕ್ಕಣ್ಣ, ರವಿಶಂಕರ್ ಸೇರಿದಂತೆ ಅನೇಕರು ಇದರಲ್ಲಿ ಭಾಗಿಯಾಗಿದ್ದಾರೆ.

  ಕನ್ನಡದಲ್ಲಿ ಸೋನು, ಅರ್ಮಾನ್ ಮಲ್ಲಿಕ್ ಮಾರ್ಕೆಟ್ ಬೀಳಿಸಿದ್ದೇ ಈ ಗಾಯಕ!ಕನ್ನಡದಲ್ಲಿ ಸೋನು, ಅರ್ಮಾನ್ ಮಲ್ಲಿಕ್ ಮಾರ್ಕೆಟ್ ಬೀಳಿಸಿದ್ದೇ ಈ ಗಾಯಕ!

  ಅನಿಲ್ ಕುಂಬ್ಳೆ ಗಾಯಕ ವಿಜಯ ಪ್ರಕಾಶ್, ನಟ ಪುನೀತ್ ರಾಜ್ ಕುಮಾರ್ ಹಾಗೂ ಸುದೀಪ್ ಗೆ ಕವನ ಚಾಲೆಂಜ್ ಹಾಕಿದ್ದು, ಈ ಪೈಕಿ ಗಾಯಕ ವಿಜಯ ಪ್ರಕಾಶ್ ಅದನ್ನು ಪೂರೈಸಿದ್ದಾರೆ.

  English summary
  Fans accepted Singer Vijay Prakash kavana challenge.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X