For Quick Alerts
  ALLOW NOTIFICATIONS  
  For Daily Alerts

  'ಗಂಧದಗುಡಿ' ಸಿನಿಮಾ ಅಲ್ಲ ಎಮೋಷನ್.. ದಾಖಲೆ ಬರೆದ ಟ್ರೈಲರ್: ಹೇಗಿರುತ್ತೆ ಗೊತ್ತಾ ಪ್ರೀ ರಿಲೀಸ್ ಈವೆಂಟ್?

  |

  ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ನಟನೆಯ ಡಾಕ್ಯುಮೆಂಟರಿ ಸಿನಿಮಾ 'ಗಂಧದಗುಡಿ' ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಏಕಕಾಲಕ್ಕೆ 3 ಭಾಷೆಗಳಲ್ಲಿ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ. ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರ ಜೊತೆಗೆ ಅಕ್ಕಪಕ್ಕದ ಚಿತ್ರರಂಗದ ತಾರೆಯರು ಭಾಗಿ ಆಗಲಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸೂಪರ್ ಹಿಟ್ ಆಗಿ ದಾಖಲೆ ಬರೆದಿದೆ.

  ನಮ್ಮ ರಾಜ್ಯದ ವನ್ಯ ಸಂಪತ್ತು ಎಷ್ಟು ಶ್ರೀಮಂತ ಎಂದು ಸಾರಿ ಹೇಳಲು ಪುನೀತ್ ರಾಜ್‌ಕುಮಾರ್ ಈ ಸಾಹಸ ಮಾಡಿದ್ದರು. ಆದರೆ ಅವರ ಅನುಪಸ್ಥಿತಿಯಲ್ಲಿ ಅವರ ಕನಸು ನನಸಾಗುತ್ತಿದೆ. ಅಮೋಘವರ್ಷ ಜೊತೆ ಸೇರಿ ಅಪ್ಪು ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದರು. ಬಹುತೇಕ ಚಿತ್ರೀಕರಣ ಮುಗಿದು, ಟೀಸರ್ ರಿಲೀಸ್‌ಗೆ ಕೆಲವೇ ದಿನಗಳು ಬಾಕಿ ಇದ್ದಾಗ ಪುನೀತ್ ಬಾರದ ಲೋಕಕ್ಕೆ ಹೊರಟುಬಿಟ್ಟರು. ಸಿನಿಮಾ ರೀತಿಯಲ್ಲೇ ಈ ಡಾಕ್ಯುಮೆಂಟರಿಯನ್ನು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲಾಗ್ತಿದೆ.

  ನಿನ್ನೆಯಷ್ಟೆ(ಅಕ್ಟೋಬರ್ 9) 'ಗಂಧದಗುಡಿ' ಟ್ರೈಲರ್ ರಿಲೀಸ್ ಆಗಿತ್ತು. ನರ್ತಕಿ ಥಿಯೇಟರ್‌ನಲ್ಲಿ ದೊಡ್ಮನೆಯ ಸದಸ್ಯರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ರೈಲರ್ ರಿಲೀಸ್ ಮಾಡಿ, ನಿಮ್ಮ ಅಪ್ಪು ಸಿನಿಮಾ ಎಲ್ಲರೂ ಸಿನಿಮಾ ನೋಡಿ ಹೇಗಿದೆ ಎಂದು ಹೇಳಿ ಎಂದಿದ್ದರು.

  ಕೆಲವೇ ಗಂಟೆಗಳಲ್ಲಿ 1 ಕೋಟಿ ವೀವ್ಸ್

  ಕೆಲವೇ ಗಂಟೆಗಳಲ್ಲಿ 1 ಕೋಟಿ ವೀವ್ಸ್

  ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ರಿಲೀಸ್ ಆಗಿದ್ದ 'ಗಂಧದಗುಡಿ' ಟ್ರೈಲರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಪ್ರಧಾನಿ ಮೋದಿ ಆದಿಯಾಗಿ ಅಭಿಮಾನಿಗಳು, ಸೆಲೆಬ್ರೆಟಿಗಳು ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದರು. ಹಾಲಿವುಡ್ ರೇಂಜ್ ಮೇಕಿಂಗ್, ಮುಗ್ಧ ಅಪ್ಪು ಮಾತು, ರಾಜ್ಯದ ವನ್ಯ ಸಂಪತ್ತು ಎಲ್ಲರೂ ಸೊಗಸಾಗಿ ಚಿತ್ರದಲ್ಲಿ ಅನಾವರಣವಾಗಿದೆ. ಗಾಜನೂರು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಡಾಕ್ಯುಮೆಂಟರಿಗಾಗಿ ಅಪ್ಪು, ಅಮೋಘವರ್ಷ ಟೀಂ ಸುತ್ತಾಡಿದೆ.

  ಅದ್ಭುತ ದೃಶ್ಯಕಾವ್ಯ 'ಗಂಧದಗುಡಿ'

  ಅದ್ಭುತ ದೃಶ್ಯಕಾವ್ಯ 'ಗಂಧದಗುಡಿ'

  ಬಯಲುಸೀಮೆಯಿಂದ ಹಿಡಿದು ಕಡಲ ತೀರದವರೆಗೆ, ಬರಡು ಭೂಮಿಯಿಂದ ಪಶ್ಚಿಮಘಟ್ಟಗಳವರೆಗೆ ಸುತ್ತಾಡಿ ಈ ಡಾಕ್ಯುಮೆಂಟರಿ ಸಿನಿಮಾ ನಿರ್ಮಿಸಲಾಗಿದೆ. ಕರ್ನಾಟಕದ ಮಣ್ಣಿನ ಘಮವನ್ನು ಪ್ರಪಂಚಕ್ಕೆ ಪರಿಚಯಿಸುವ ಪ್ರಯತ್ನ ನಡೀತಿದೆ. ಕಾಡು, ನದಿ, ಬೆಟ್ಟ, ಜಲಪಾತವನ್ನು ನೋಡುತ್ತಾ ಅಪ್ಪು ಕಳೆದುಹೋಗಿದ್ದಾರೆ. ಪ್ರಕೃತಿ ಮಾತೆಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.

  ಅಕ್ಟೋಬರ್ 21ಕ್ಕೆ ಪ್ರೀ ರಿಲೀಸ್ ಈವೆಂಟ್

  ಅಕ್ಟೋಬರ್ 21ಕ್ಕೆ ಪ್ರೀ ರಿಲೀಸ್ ಈವೆಂಟ್

  ಪಿಆರ್‌ಕೆ ಪ್ರೊಡಕ್ಷನ್ ಹಾಗೂ ಮಡ್‌ಸ್ಕಿಪರ್ ಬ್ಯಾನರ್‌ನಲ್ಲಿ ಈ ವೈಲ್ಡ್ ಡಾಕ್ಯುಮೆಂಟರಿ ನಿರ್ಮಾಣ ಆಗಿದೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಪ್ಪು ಕುಟುಂಬ, ಅಭಿಮಾನಿಗಳು ಹಾಗೂ ಚಿತ್ರರಂಗದ ಸ್ನೇಹಿತರ ಸಮ್ಮುಖದಲ್ಲಿ ಅಕ್ಟೋಬರ್ 21ರಂದು ಪ್ರೀರಿಲೀಸ್ ಈವೆಂಟ್ ನಡೆಯಲಿದೆ. ಈಗಾಗಲೇ ಪರಭಾಷೆಯ ಸ್ಟಾರ್‌ಗಳಿಗೂ ಇವೆಂಟ್‌ಗೆ ಆಹ್ವಾನ ನೀಡಲಾಗಿದೆ.

  ಈವೆಂಟ್ ಆಹ್ವಾನ ಪತ್ರಿಕೆ ಸೂಪರ್

  ಈವೆಂಟ್ ಆಹ್ವಾನ ಪತ್ರಿಕೆ ಸೂಪರ್

  'ಗಂಧದಗುಡಿ' ಪ್ರೀ ರಿಲೀಸ್ ಈವೆಂಟ್ ಆಹ್ವಾನ ಪತ್ರಿಕೆ ಗಮನ ಸೆಳೆದಿದೆ. ಅದರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಸಂಪೂರ್ಣ ಮರದಿಂದ ಮಾಡಲಾದ ಈ ಪತ್ರಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಪುಟ್ಟ ಪುತ್ಥಳಿ ಇದೆ. ಜೊತೆಗೆ ಪುನೀತ್ ರಾಜ್‌ಕುಮಾರ್​ ಹಸ್ತಾಕ್ಷರ ಇದರು ಶ್ರೀಗಂಧದ ತುಂಡು ಇದೆ. ಸಿಎಂ ಬಸವರಾಜ ಬೊಮ್ಮಾಯಿ, ಅಮಿತಾಭ್ ಬಚ್ಚನ್​, ರಜನಿಕಾಂತ್​ ಮುಂತಾದ ಗಣ್ಯರಿಗೆ ಇದೇ ಆಹ್ವಾನ ಪತ್ರಿಕೆಯನ್ನು ನೀಡಲಾಗಿದೆ.

  English summary
  Gandhada Gudi trailer crossed 10 million views in one day. Gandhada Gudi Docudrama trailer showed Puneeth Rajkumar going on a journey along with the director Amoghavarsha and it showed Puneeth in the backdrop of picturesque locations and beautiful and realistic places attracting everyone. Know More.
  Monday, October 10, 2022, 23:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X