'ಗೇಟ್ ಕೀಪರ್' ಪುಸ್ತಕ ಲೋಕಾರ್ಪಣೆ ಮಾಡಿದ ಗೋಲ್ಡನ್ ಸ್ಟಾರ್
ಸಿನಿಮಾ ಪತ್ರಕರ್ತ ಆರ್. ಕೇಶವಮೂರ್ತಿ ಅವರ ಗೇಟ್ ಕೀಪರ್ ಪುಸ್ತಕ ಬಿಡುಗಡೆ. ಬೆಂಗಳೂರು ಬನಶಂಕರಿಯ ಟೆಂಟ್ ಹೌಸ್ ನಲ್ಲಿ ಪುಸ್ತಕ ಬಿಡುಗಡೆ.
ಬೆಂಗಳೂರು, ಆಗಸ್ಟ್ 28: ಖ್ಯಾತ ಸಿನಿಮಾ ಪತ್ರಕರ್ತ ಆರ್. ಕೇಶವಮೂರ್ತಿ ರಚಿಸಿರುವ 'ಗೇಟ್ ಕೀಪರ್' ಪುಸ್ತಕ ಭಾನುವಾರ (ಆಗಸ್ಟ್ 27) ಬಿಡುಗಡೆಗೊಂಡಿತು. ಇದೇ ವೇಳೆ, ಪುಸ್ತಕದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿಬಂದವು.
ಬನಶಂಕರಿ 2ನೇ ಹಂತದಲ್ಲಿರುವ 'ಟೆಂಟ್ ಸಿನಿಮಾ' ಸಂಸ್ಥೆಯ ಸಭಾಂಗಣದಲ್ಲಿ ಸಂಜೆ ಸುಮಾರು 4 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಪುಸ್ತಕ ಬಿಡುಗಡೆ ಮಾಡಿದರು. ಹೆಸರಾಂತ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಿನಿಮಾ ಸಾಹಿತಿ ಜೋಗಿ ಅವರು ಉಪಸ್ಥಿತರಿದ್ದರು.

ಪುಸ್ತಕವು ಕನ್ನಡ ಸೇರಿದಂತೆ ಬೆಂಗಾಲಿ, ಮರಾಠಿ, ಹಿಂದಿ, ಇರಾನ್, ಕೊರಿಯಾ ಸೇರಿದಂತೆ ಅನೇಕ ರಾಷ್ಟ್ರಗಳ, ಭಾಷೆಗಳ ಕ್ಲಾಸಿಕ್ ಎನಿಸುವಂಥ ಚಿತ್ರಗಳ ವಿಶ್ಲೇಷಣೆ ಹಾಗೂ ಬರಹಗಳನ್ನು ಹೊಂದಿದೆ.
ಸಿನಿಮಾವನ್ನು ಗಂಭೀರವಾಗಿ ತೆಗೆದುಕೊಂಡವರಿಗೆ, ಕ್ಲಾಸಿಕ್ ಸಿನಿಮಾಗಳ ಹಂಬಲವಿರುವಂಥ ಹವ್ಯಾಸಿಗಳಿಗೆ ಈ ಪುಸ್ತಕ ಉಪಯುಕ್ತ ಮಾಹಿತಿಗಳನ್ನು ನೀಡಲಿದೆ ಎಂದು ಕಾರ್ಯಕ್ರಮದ ಗಣ್ಯರು ಕೊಂಡಾಡಿದರು.
ಅಂದಹಾಗೆ, ಪುಸ್ತಕವನ್ನು ಸಾವಣ್ಣ ಪ್ರಕಾಶನ ಸಂಸ್ಥೆ ಹೊರತಂದಿದ್ದು, ಪ್ರತಿಗಳಿಗಾಗಿ 8660404034 ಸಂಖ್ಯೆಗೆ ಸಂಪರ್ಕಿಸಬಹುದು.


Click it and Unblock the Notifications











