»   » ಗೌತಮ್ ಮೆನನ್ ಆಕ್ಷನ್ ಕಟ್ ನಲ್ಲಿ ಪುನೀತ್

ಗೌತಮ್ ಮೆನನ್ ಆಕ್ಷನ್ ಕಟ್ ನಲ್ಲಿ ಪುನೀತ್

Posted By:
Subscribe to Filmibeat Kannada
ಈ ಹಿಂದೆಯೂ ಇದೇ ರೀತಿ ಸುದ್ದಿ ಹಬ್ಬಿತ್ತು. ತಮಿಳಿನಲ್ಲಿ ಸೂಪರ್ ಹಿಟ್ ಚಿತ್ರ 'ವಿನ್ನೈಥಾಂಡಿ ವರುವಾಯ' ಕನ್ನಡ ರೀಮೇಕ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಲಿದ್ದಾರೆ ಎಂಬುದು. ಈ ಚಿತ್ರಕ್ಕೆ ಗೌತಮ್ ವಾಸುದೇವ ಮೆನನ್ ಆಕ್ಷನ್ ಕಟ್ ಹೇಳಿದ್ದರು.

ಕನ್ನಡದ ರೀಮೇಕ್ ಚಿತ್ರಕ್ಕೂ ಅವರೇ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು. ಆದರೆ ಪುನೀತ್ ತಾವು ವಿನ್ನೈಥಾಂಡಿ ವರುವಾಯ ರೀಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಹೇಳುವ ಮೂಲಕ ಅಂತೆಕಂತೆಗಳಿವೆ ಕೊನೆ ಹಾಡಿದ್ದರು.

ಇವರಿಬ್ಬರೂ ಮತ್ತೆ ಒಂದಾಗುವಂತಹ ಸುವರ್ಣಾವಕಾಶ ಒದಗಿಬಂತು. ಜಾಹೀರಾತು ಒಂದರಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರು. ಒಬ್ಬರ ಬಗ್ಗೆ ಇನ್ನೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಇಬ್ಬರೂ ಕೈಜೋಡಿ ಸಿನಿಮಾ ಒಂದನ್ನು ಕೈಗೆತ್ತಿಕೊಳ್ಳುವ ಸುದ್ದಿಯೂ ಹಬ್ಬಿದೆ.

ಆದರೆ ಈ ಸುದ್ದಿಯನ್ನು ಪುನೀತ್ ಸಾರಸಗಟಾಗಿ ತಳ್ಳಿಹಾಕಿಲ್ಲ. ಅಂತಹ ಒಂದು ಸಂದರ್ಭ, ಸನ್ನಿವೇಶ ಬಂದರೆ ಖಂಡಿತ ಗೌತಮ್ ಮೆನನ್ ಜೊತೆ ಕೆಲಸ ಮಾಡುತ್ತೇನೆ ಎಂದಿದ್ದಾರೆ. 'ಯಾರೇ ಕೂಗಾಡಲಿ' (ಚಿತ್ರ ವಿಮರ್ಶೆ ಓದಿ) ಚಿತ್ರದ ಬಳಿಕ ಪುನೀತ್ ಇನ್ನೂ ಯಾವ ಹೊಸ ಚಿತ್ರಕ್ಕೂ ಸಹಿ ಹಾಕಿಲ್ಲ.

ಅತ್ತ ಗೌತಮ್ ಮೆನನ್ ಸಹ ಇನ್ನೂ ಯಾವ ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಬಹುಶಃ ಇಬ್ಬರೂ ಶೀಘ್ರದಲ್ಲೇ ಕೈಜೋಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಹುಶಃ ಇದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಬಹುದೇನೋ? (ಏಜೆನ್ಸೀಸ್)

English summary
The buzz is that, Tamil ace director Gautham Vasudeva Menon to direct Puneet Rajkumar. When asked about the possibility of working with Gautham, Puneet neither admitted nor denied and said that there are chances and he wish that the director of his caliber would make hid debut in Kannada film industry.
Please Wait while comments are loading...