»   » ನೀವು 'ಹಾಫ್ ಮೆಂಟ್ಲು' ಆಗೋ ಸಿನಿಮಾ ಬರ್ತಿದೆ

ನೀವು 'ಹಾಫ್ ಮೆಂಟ್ಲು' ಆಗೋ ಸಿನಿಮಾ ಬರ್ತಿದೆ

By: ಜೀವನರಸಿಕ
Subscribe to Filmibeat Kannada

ಹೊಸಬರ ಸಿನಿಮಾಗಳು ಅಂದ್ರೆ ಯಾವ ಪ್ರೇಕ್ಷಕರೂ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ಆದ್ರೆ ವಿಭಿನ್ನವಾಗಿದ್ದು ವಿಶೇಷವಾಗಿದ್ದು ಇದ್ರೆ ಅದನ್ನ ಪ್ರೋತ್ಸಾಹಿಸೋದ್ರಲ್ಲಿ ಕನ್ನಡ ಪ್ರೇಕ್ಷಕರು ಹಿಂದೆ ಬಿದ್ದಿಲ್ಲ. ಈಗ ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮಾಡಬಹುದಾದ ಹೊಸಬರ ಸಿನಿಮಾವೊಂದು ನಿಧಾನಕ್ಕೆ ಸದ್ದು ಮಾಡ್ತಿದೆ.

ಅದು 'ಹಾಫ್ ಮೆಂಟ್ಲು' ಸಿನಿಮಾ. ಟೈಟಲ್ ಕೇಳಿದ ಮೊದಲಿಗೆ ಇದೂ ನೂರರಲ್ಲಿ ಮತ್ತೊಂದು ಸಿನಿಮಾ ಅಂದುಕೊಂಡವರು ಈಗ 'ಹಾಫ್ ಮೆಂಟ್ಲು' ಹಾಡುಗಳನ್ನ ಕೇಳಿ ತಲೆದೂಗ್ತಿದ್ದಾರೆ. ಈ ಹಾಡುಗಳ ವಿಶೇಷ ಅಂದ್ರೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಂಗೀತ ನಿರ್ದೇಶಕ ಬಿ.ಜೆ ಭರತ್ ಮೊದಲು ಸಂಗೀತ ನೀಡಿದ್ದ ಹಾಡುಗಳಿವು. ['ಹಾಫ್ ಮೆಂಟ್ಲು' ರಾತ್ರಿ ಶೂಟಿಂಗ್ ನಲ್ಲಿ ಏನಾಯ್ತು?]


Get ready for Kannada movie Half Mentlu

ಈ ಹಾಡುಗಳನ್ನ ನೋಡೀನೇ ನಿರ್ದೇಶಕ ಸುನಿ ತಮ್ಮ ಸಿನಿಮಾಗೆ ಬಿ ಜೆ ಭರತ್ ಸಂಗೀತವನ್ನು ಆಯ್ದುಕೊಂಡಿದ್ರಂತೆ. ಇನ್ನು 'ಹಾಫ್ ಮೆಂಟ್ಲು' ಆರಂಭದಲ್ಲೇ ಮಂಗಳಮುಖಿಯರಿಂದ ಹಾಡೊಂದನ್ನ ಹಾಡಿಸಿ ಸಖತ್ ಸೌಂಡ್ ಮಾಡಿತ್ತು. ಈಗ ಚಿತ್ರದಲ್ಲಿರೋ 9 ಹಾಡುಗಳೂ ವಿಭಿನ್ನವಾಗಿ ಮೂಡಿಬಂದಿವೆ ಅಂತಿದ್ದಾರೆ ಸಿನಿ ಪಂಡಿತರು.


ಅಂದಹಾಗೆ. ಶಶಿಕುಮಾರ್ ಅನ್ನೋ ಹೊಸ ನಿರ್ಮಾಪಕರು ಹಣ ಸುರಿದಿರೋ ಚಿತ್ರವನ್ನ ನಿರ್ದೇಶನ ಮಾಡಿರೋದು ಕೂಡ ನವ ನಿರ್ದೇಶಕ ಲಕ್ಷ್ಮಿ ದಿನೇಶ್ ಒಟ್ಟಾರೆ ಹೊಸಬರೇ ನಿರ್ಮಿಸಿರೋ ಚಿತ್ರದಲ್ಲಿ ಸಂಕಲನಕಾರರೂ ಸೇರಿದಂತೆ ಹಲವು ತಂತ್ರಜ್ಞರು 2013ರಲ್ಲಿ ಗೆದ್ದ ಸಿಂಪಲ್ಲಾಗ್ ಒಂದ್ ಲಲ್ ಸ್ಟೋರಿ ತಂಡದವ್ರು ಅನ್ನೋದು ವಿಶೇಷ.ಇಷ್ಟಕ್ಕೂ 'ಹಾಫ್ ಮೆಂಟ್ಲು' ಕಥೆ ಏನೆಂದರೆ ಹುಡುಗಿಗಾಗಿ, ಹುಡುಗಿಯಿಂದ, ಹುಡುಗಿಗೋಸ್ಕರ ಹುಚ್ಚನಾದ ಮತ್ತೊಬ್ಬ ಹುಡುಗನ ಹೃದಯ ವಿದ್ರಾವಕ ಕಥೆ. ಅಂದಹಾಗೆ ಹಾಫ್ ಮೆಂಟ್ಲು ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಜಿ ಶಿವಕುಮಾರ್, ಸಂಗೀತ ಬಿಜೆ ಭರತ್. ಪಕ್ಕಾ ಲವ್ ಸ್ಟೋರಿಯಾಗಿರುವ ಈ ಚಿತ್ರದಲ್ಲಿ ಮೈಕೋ ನಾಗರಾಜ್, ಹರಿ, ತಬಲಾ ನಾಣಿ, ಶ್ರೀನಿವಾಸ ಗೌಡ ಮುಂತಾದವರಿದ್ದಾರೆ.
English summary
Kannada movie Half Mentlu is all set for release soon. The movie directed by Lakshmi Dinesh, Producer by G Shivakumar and Music by Bharth B J.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada