»   » 'ಇಂಡಿಯನ್' ಸುನಾಮಿ ಕಿಟ್ಟಿ ಸಿನಿಮಾಗೆ ಡಿಮಾಂಡ್

'ಇಂಡಿಯನ್' ಸುನಾಮಿ ಕಿಟ್ಟಿ ಸಿನಿಮಾಗೆ ಡಿಮಾಂಡ್

By: ಜೀವನರಸಿಕ
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಇಂಡಿಯನ್' ಗೆದ್ದ ಸುನಾಮಿ ಕಿಟ್ಟಿ ಅನ್ನೋ ತರಕಾರಿ ಮಾರೋ ಹುಡುಗ ಈಗ ಸಿನಿಮಾ ಹೀರೋ ಆಗೋಕೆ ರೆಡಿಯಾಗಿದ್ದಾನೆ. ಇಂಡಿಯನ್ ರಿಯಾಲಿಟಿ ಶೋನಲ್ಲಿ ಹೆಗ್ಗಡದೇವನಕೋಟೆಯಿಂದ ಆಯ್ಕೆಯಾಗಿದ್ದ.

ಸುನಾಮಿ ಕಿಟ್ಟಿ ತನ್ನ ಮುಗ್ಧತೆ ಮತ್ತು ಶಕ್ತಿ ಸಾಮರ್ಥ್ಯದಿಂದ ರಿಯಾಲಿಟಿ ಶೋ ಫೈನಲ್ ತಲುಪಿ ಹತ್ತು ಲಕ್ಷ ಬಹುಮಾನ ಗೆದ್ದಿದ್ದ. ಕಿಟ್ಟಿ ಪಡೆದುಕೊಂಡ ಪಬ್ಲಿಸಿಟಿಯನ್ನು ಎನ್ ಕ್ಯಾಶ್ ಮಾಡಿಕೊಳ್ಳೋಕೆ ಈಗ ಮೂರು ನಾಲ್ಕು ಪ್ರೊಡ್ಯೂಸರ್ ಗಳು ಕಾದು ಕುಳಿತಿದ್ದಾರೆ. [ಪ್ರದೀಪ ಅಲಿಯಾಸ್ ಸುನಾಮಿ ಕಿಟ್ಟಿ]

Tsunami Kitty

ಕಿಟ್ಟಿಯನ್ನ ಈಗಾಗಲೇ ನಾಲ್ಕು ಮಂದಿ ಪ್ರೊಡ್ಯೂಸರ್ ಗಳು ಸಂಪರ್ಕಿಸಿದ್ದಾರೆ. ಇನ್ನು ಹೆಗ್ಗಡದೇವನ ಕೋಟೆ ಶಾಸಕ ಚಿಕ್ಕಮಾದು ಈಗಾಗ್ಲೇ ಸುನಾಮಿ ಕಿಟ್ಟಿಯ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರಂತೆ. ಈಗ ಕಿಟ್ಟಿ ಅನ್ನೋ ಸುನಾಮಿ ಯಾರ ಕೈಗೆ ಸಿಕ್ಕತ್ತೋ ಗೊತ್ತಿಲ್ಲ.

ಟೀ ಮಾರುತ್ತಿದ್ದ ಹುಡಗ ದೇಶದ ಪ್ರಧಾನಿಯಾಗೋಕೆ ಹೊರಟಿರೋವಾಗ ತರಕಾರಿ ಮಾರೋ ಹುಡುಗ ಸಿನಿಮಾ ಹೀರೋ ಆಗಬಾರದಾ? ಆಗಲಿ ಕಿಟ್ಟಿ ಯಶಸ್ಸನ್ನೂ ಕಾಣಲಿ. ಆದರೆ ಇತ್ತೀಚೆಗೆ ತಾನೆ ಸಾವನ್ನಪ್ಪಿದ ಮತ್ತೊಬ್ಬ ರಿಯಾಲಿಟಿ ಶೋ ತಾರೆ ಹಳ್ಳಿಹೈದ ರಾಜೇಶ್ ನನ್ನು ನೆನಪಿಸಿಕೊಂಡ್ರೆ ಎಂಥವರಿಗೂ ಒಂದು ಕ್ಷಣ ಭಯವಾಗುತ್ತೆ.

English summary
Etv Kannada reality show 'Indian' winner Kitty getting opportunities in Sandalwood, who is popularly known as Tsunami Kitty, has won the first edition of the reality show Indian, which is being aired on ETV Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada