»   » 'ಗೇಮ್' ನೋಡಲು ಮುಗಿಬೀಳುತ್ತಿರುವ ಕನ್ನಡ ಪ್ರೇಕ್ಷಕರು!

'ಗೇಮ್' ನೋಡಲು ಮುಗಿಬೀಳುತ್ತಿರುವ ಕನ್ನಡ ಪ್ರೇಕ್ಷಕರು!

Posted By:
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ ಎ.ಎಮ್.ಆರ್.ರಮೇಶ್ ನಿರ್ದೇಶನದ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ 'ಗೇಮ್' ನೋಡಲು ಕನ್ನಡ ಸಿನಿ ಪ್ರೇಕ್ಷಕರು ಮುಗಿಬೀಳ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ಹೌದು, ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ 'ಗೇಮ್' ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ಬುಕ್ ಮೈ ಶೋ' ವೆಬ್ ತಾಣದಲ್ಲಿ 'ಗೇಮ್' ಚಿತ್ರಕ್ಕೆ 89% ಮಂದಿ ಉತ್ತಮ ವಿಮರ್ಶೆ ನೀಡಿರುವ ಕಾರಣ 'ಗೇಮ್' ಟ್ರೆಂಡಿಂಗ್ ನಲ್ಲಿದೆ.


good-response-for-arjun-sarja-starrer-kannada-movie-game

ನಿನ್ನೆ ಶನಿವಾರ ಕರ್ನಾಟಕದ ಬಹುತೇಕ ಮಲ್ಟಿಪ್ಲೆಕ್ಸ್ ಗಳಲ್ಲಿ 'ಗೇಮ್' ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣ್ತು. ಇಂದು ಭಾನುವಾರ, ರಜಾ ದಿನವಾದ್ದರಿಂದ ಎಲ್ಲಾ ಶೋಗಳು ಫಾಸ್ಟ್ ಫಿಲ್ಲಿಂಗ್ ಆಗುತ್ತಿವೆ. ['ಗೇಮ್' ವಿಮರ್ಶೆ; ಕುಡಿದು ಗಾಡಿ ಓಡಿಸುವ ಎಲ್ರೂ ನೋಡ್ಲೇಬೇಕ್!]


ಸ್ಪ್ಯಾನಿಷ್ ಭಾಷೆಯಲ್ಲಿ ತೆರೆಕಂಡ 'ದಿ ಬಾಡಿ' ಚಿತ್ರದಂತೆಯೇ ಇರುವ 'ಗೇಮ್' ಚಿತ್ರ ಪ್ರೇಕ್ಷಕರಿಗೆ ಕಡೆವರೆಗೂ ಥ್ರಿಲ್ಲಿಂಗ್ ಅನುಭವ ನೀಡುವುದರಲ್ಲಿ ಡೌಟ್ ಬೇಡ. [ಸಸ್ಪೆನ್ಸ್ 'ಗೇಮ್' ಚಿತ್ರಕ್ಕೆ ವಿಮರ್ಶಕರು ಥ್ರಿಲ್ಲ್ ಆದ್ರಾ?]


ಬಾಲಿವುಡ್ ನಟಿ ಮನೀಷಾ ಕೊಯಿರಾಲಾ, ಕಾಲಿವುಡ್ ನಟ ಶ್ಯಾಮ್, ಎ.ಎಮ್.ಆರ್.ರಮೇಶ್ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ 'ಗೇಮ್'. ನೀವಿನ್ನೂ 'ಗೇಮ್' ನೋಡಿಲ್ಲ ಅಂದ್ರೆ ಈಗಲೇ ಟಿಕೆಟ್ ಬುಕ್ ಮಾಡಿಕೊಳ್ಳಿ....

English summary
Kannada Actor Arjun Sarja starrer 'Game' movie is receiving good response from the Audience. Infact, AMR Ramesh directorial 'Game' is trending in Book My Show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada