»   » ಸಂಪ್ರದಾಯಸ್ಥ ಹರಿಪ್ರಿಯಾ ಅವರ ಇನ್ನೊಂದು ಕಲೆ ನೋಡಿ

ಸಂಪ್ರದಾಯಸ್ಥ ಹರಿಪ್ರಿಯಾ ಅವರ ಇನ್ನೊಂದು ಕಲೆ ನೋಡಿ

Posted By:
Subscribe to Filmibeat Kannada
ಹರಿಪ್ರಿಯಾ ಮಾಡಿರೋ ಈ ಕೆಲಸ ನೋಡಿ ನೀವು ಬೋಲ್ಡ್ ಆಗ್ತೀರಾ !!! | FIlmibeat Kannada

ಸಿನಿಮಾ ಹೀರೋಯಿನ್ ಆಗ್ಬಿಟ್ರೆ, ಅವರ ಪ್ರತಿಯೊಂದು ಕೆಲಸಗಳಿಗೂ ಒಬ್ಬೊಬ್ಬರು ಆಲುಗಳು ಇರ್ತಾರೆ ಎಂಬ ಭಾವನೆ ಜನಸಾಮಾನ್ಯರದ್ದು.

ಇನ್ನು ನಟಿಯರು ಶ್ರೀಮಂತ ಕುಟುಂಬದವರು, ಅವರಿಗೆ ಈ ಸಂಪ್ರದಾಯಗಳು, ಆಚಾರ-ವಿಚಾರಗಳು ಗೊತ್ತಿರಲ್ಲ, ಕೇವಲ ಸಿನಿಮಾಗಳಲ್ಲಿ ಮಾಡ್ತಾರೆ ಅಷ್ಟೇ ಎಂಬ ಮಾತು ಕೂಡ ಇದೆ.

ಆದ್ರೆ, ಈ ಎಲ್ಲ ಭಾವನೆಗಳನ್ನ, ಅಭಿಪ್ರಾಯಗಳನ್ನ ಸುಳ್ಳು ಎಂದು ಸಾಬೀತು ಪಡಿಸಿದ ನಟಿ ಹರಿಪ್ರಿಯಾ. ಇತ್ತೀಚಿಗಷ್ಟೆ ಮಣ್ಣಿನ ನೆಲದ ಮೇಲೆ ಚೆಂದದ ಚುಕ್ಕಿ ರಂಗೋಲಿ ಬಿಡಿಸಿ, ಅಭಿಮಾನಿಗಳನ್ನು ಬೆರಗು ಗೊಳಿಸಿದ್ದ ಹರಿಪ್ರಿಯಾ ಈಗ ಮತ್ತೊಂದು ಚೆಂದವಾದ ಕಲೆಯನ್ನ ಪ್ರದರ್ಶಿಸಿದ್ದಾರೆ.

Haripriya share new video about artsncrafts

ಹೌದು, ಮಲ್ಲಿಗೆ ಹೂವು ಕಟ್ಟುತ್ತಿರುವ ವಿಡಿಯೋ ಪೊಸ್ಟ್ ಮಾಡಿರುವ ಹರಿಪ್ರಿಯಾ ತನ್ನ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ನಮ್ಮ ಸಂಸ್ಕ್ರತಿಯನ್ನ ಕಲಿಸಿದ ನನ್ನ ತಾಯಿಗೆ ಥ್ಯಾಂಕ್ಸ್ ಎಂದು ಹೇಳಿರುವ ಹರಿಪ್ರಿಯಾ, ನಮ್ಮ ಸಂಪ್ರದಾಯಗಳನ್ನ ಕಲಿಯುವ ಮೂಲಕ ಒಬ್ಬ ಸಂಪೂರ್ಣ ಹೆಣ್ಣು ಮಗಳು ಎನಿಸಿಕೊಂಡಿದ್ದಾರೆ.

ಚುಕ್ಕಿ ರಂಗೋಲಿ ಬಿಡಿಸಿದ ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾ

ಉಗ್ರಂ', 'ರನ್ನ', 'ನೀರ್ ದೋಸೆ', 'ಭರ್ಜರಿ', 'ಕನಕ', 'ಸಂಹಾರ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಹರಿಪ್ರಿಯಾ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿ. 'ಸೂಜಿದಾರ', 'ಕಥಾ ಸಂಗಮ', 'ಲೈಫ್ ಜೊತೆ ಒಂದು ಸೆಲ್ಫಿ' ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ ಹರಿಪ್ರಿಯಾ

ಚಿಕ್ಕಬಳ್ಳಾಪುರದಲ್ಲಿ ಹುಟ್ಟಿದ ಹರಿಪ್ರಿಯಾ, ಅಲ್ಲಿನ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದರು. ಬಳಿಕ ಬೆಂಗಳೂರಿಗೆ ಶಿಫ್ಟ್ ಆದ ಹರಿಪ್ರಿಯಾ, ವಿದ್ಯಾ ಮಂದಿರ ಕಾಲೇಜಿನಲ್ಲಿ ಪಿ.ಯು.ಸಿ ಓದಿದರು. ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾ ಇಂದು ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವ ನಟಿಯಾಗಿ ಗುರುತಿಸಿಕೊಂಡಿದ್ದರೂ, ನಮ್ಮ ನೆಲದ ಸಂಸ್ಕೃತಿಯನ್ನು ಮರೆತಿಲ್ಲ.

English summary
Kannada Actress Haripriya has taken her twitter account to share their new video about arts n crafts.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X