»   »  ತುಟಿಗೆ ತುಟಿ ಬೆರೆಸಿದ 'ಬಿತ್ರಿ' ಹರ್ಷಿಕಾ ಪೂಣಚ್ಚ

ತುಟಿಗೆ ತುಟಿ ಬೆರೆಸಿದ 'ಬಿತ್ರಿ' ಹರ್ಷಿಕಾ ಪೂಣಚ್ಚ

Posted By:
Subscribe to Filmibeat Kannada

ಇದೇ ಮೊದಲ ಸಲ ಹರ್ಷಿಕಾ ಪೂಣಚ್ಚ ತುಟಿಗೆ ತುಟಿ ಬೆರೆಸಿದ್ದಾರೆ. ಯಾರ ಜೊತೆ, ಯಾವಾಗ ,ಎಲ್ಲಿ ಅಂತೀರಾ? ಹೇಳ್ತೀವಿ ಅದಕ್ಕೂ ಮುನ್ನ ಇನ್ನೊಂದಿಷ್ಟು ವಿವರಗಳ ಕಡೆಗೆ ಕಣ್ಣರಳಿಸೋಣ. ಹರ್ಷಿಕಾ ಪೂಣಚ್ಚ ತುಟಿ ಬೆರೆಸಿರುವುದು ಚಿತ್ರವೊಂದರ ಸನ್ನಿವೇಶಕ್ಕಾಗಿ.

ಆರಂಭದಿಂದಲೂ 'ಬಿತ್ರಿ' ಎಂಬ ಚಿತ್ರ ಸಾಕಷ್ಟು ವಾದ ವಿವಾದಗಳಿಂದಾಗಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ಈ ಚಿತ್ರದ ಕಥೆ ತಮ್ಮದು ಎಂದು ಆರೋಪಿಸಿದ್ದರು ವೇಲು ಪ್ರಿಯನ್ ಎಂಬ ನಿರ್ದೇಶಕರು. ಆ ಬಳಿಕ ಚಿತ್ರ ಪೋಸ್ಟರ್ ಗಳು ಸಾಕಷ್ಟು ಹಾಟ್ ಆಗಿದ್ದು ಇನ್ನೊಂದು ಚರ್ಚೆಗೆ ಗ್ರಾಸವಾದವು.

ಈಗ ಚಿತ್ರ ನಾಯಕಿ ಹಾಗೂ ನಾಯಕನ ಜೊತೆಗಿನ ಲಿಪ್ ಲಾಕ್ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಇದು ಕೇವಲ ಮೂರು ಸೆಕೆಂಡ್ ಗಳಷ್ಟು ಕಾಲಾವಧಿಯದಾಗಿದೆ. ಬಹುಶಃ ಅಮೀರ್ ಖಾನ್ ಚುಂಬನ ಅತ್ಯಂತ ಸುದೀರ್ಘವಾದ ಇದು ಅತ್ಯಂತ ಕಡಿಮೆ ಅವಧಿಯ ಚುಂಬನ ಎನ್ನಬಹುದು. ಬನ್ನಿ ಚುಂಬನ ಮತ್ತಷ್ಟು ವಿವರಗಳನ್ನು ಸ್ಲೈಡ್ ಗಳಲ್ಲಿ ನೋಡೋಣ.

ಚಿತ್ರದಲ್ಲಿ ಯುವಕರಿಗೆ ಒಳ್ಳೆಯ ಸಂದೇಶವಿದೆ

ಈ ಚಿತ್ರದ ಬಗ್ಗೆ ಮಾತನಾಡಿರುವ ಹರ್ಷಿಕಾ, "ಚಿತ್ರದಲ್ಲಿ ಯುವಕರಿಗೆ ಒಳ್ಳೆಯ ಸಂದೇಶವಿದೆ. ಚಿತ್ರ ನೋಡಿದ ಮೇಲೆ ಪ್ರೇಕ್ಷಕರಿಗೆ ಅದು ಅರ್ಥವಾಗುತ್ತದೆ" ಎಂದಿದ್ದಾರೆ.

ಹತ್ತು ಸೆಕೆಂಡ್ ಗಳಲ್ಲಿ ಪ್ರೇಮ ಸನ್ನಿವೇಶದ ನಡುವೆ ಚುಂಬನ

ಇನ್ನು ಈ ಚುಂಬನ ದೃಶ್ಯ ಹಾಡಿನಲ್ಲಿ ಬರುತ್ತದೆ. ಹೀರೋ ಮತ್ತು ಹೀರೋಯಿನ್ ನಡುವಿನ ಹತ್ತು ಸೆಕೆಂಡ್ ಗಳ ಪ್ರೇಮ ಸನ್ನಿವೇಶದ ನಡುವೆ ಈ ಚುಂಬನ ದೃಶ್ಯವೂ ಬರುತ್ತದೆ.

ತಮ್ಮದು ನಟನೆಗೆ ಸವಾಲೊಡ್ಡುವ ಪಾತ್ರೆ

ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಟನೆಗೆ ಸವಾಲೊಡ್ಡುವ ಪಾತ್ರ ತಮ್ಮದು. ಅಂತಹ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎನ್ನುತ್ತಾರೆ ಹರ್ಷಿಕಾ.

ಎಲ್ಲರೂ ತಮ್ಮ ಗರ್ಲ್ ಫ್ರೆಂಡ್ ನೆನಪಿಸಿಕೊಳ್ತಾರೆ

ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ತಮ್ಮ ಗರ್ಲ್ ಫ್ರೆಂಡ್ ಗಳನ್ನು ನೆನಪಿಸಿಕೊಳ್ಳುತ್ತಾರೆ. ಈ ಚಿತ್ರದ ಮೂಲಕ ತಾವು ಬಿಗ್ ಬ್ರೇಕ್ ನಿರೀಕ್ಷೆಯಲ್ಲಿದ್ದೇವೆ ಎಂಬ ವಿಶ್ವಾಸವನ್ನೂ ಹರ್ಷಿಕಾ ವ್ಯಕ್ತಪಡಿಸಿದ್ದಾರೆ.

ಮಿ.ಇಂಡಿಯಾ ಚಿತ್ರದಲ್ಲಿ ಶ್ರೀದೇವಿ ಮಾಡಿಲ್ವಾ?

'ಮಿಸ್ಟರ್ ಇಂಡಿಯಾ' ಚಿತ್ರದಲ್ಲಿ ನಟಿ ಶ್ರೀದೇವಿ ಸಹ ಲಿಪ್ ಲಾಕ್ ಸನ್ನಿವೇಶದಲ್ಲಿ ಅಭಿನಯಿಸಿದ್ದಾರೆ. ಇದರಲ್ಲಿ ಯಾವುದೇ ಅಶ್ಲೀಲತೆ ಇಲ್ಲ. ನಮ್ಮ ಮನಸ್ಸಿನ ಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಚುಂಬನ ದೃಶ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಲವ್ ಯು ಎಂಬುದು ಚಿತ್ರದ ಅಡಿಬರಹ

ಘನಶ್ಯಾಮ್ ನಿರ್ದೇಶಿಸುತ್ತಿರುವ ಈ ಚಿತ್ರದ ಅಡಿಬರಹ 'ಲವ್ ಯು' ಎಂಬುದು. ಒಲವೇ ಮಂದಾರ ಖ್ಯಾತಿಯ ಶ್ರೀಕಿ ಆಲಿಯಾಸ್ ಶ್ರೀಕಾಂತ್ ಚಿತ್ರದ ನಾಯಕ. ಗೋವಿಂದರಾಜು ಮತ್ತು ಬಸವರಾಜು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರಕ್ಕೆ ಸಂಗೀತ ನೀಡಿರುವುದು ಅನೂಪ್ ಸಿಳೀನ್.

English summary
Actress Harshika Poonacha, who recently won Karnataka State Award for the Best Supporting Actor (female), has done three seconds lip-lock in her forthcoming movie B3. It is reported that the actress has done the lip-lock in a song sequence, which is featured on her and lead actor Shrikanth.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada