»   » ರಾಯಲ್ ಬಾಯ್ ಫ್ರೆಂಡ್ ಜೊತೆ ಹರ್ಷಿಕಾ ಪೂಣಚ್ಚ

ರಾಯಲ್ ಬಾಯ್ ಫ್ರೆಂಡ್ ಜೊತೆ ಹರ್ಷಿಕಾ ಪೂಣಚ್ಚ

By: ಉದಯರವಿ
Subscribe to Filmibeat Kannada

ನಟಿ ಹರ್ಷಿಕಾ ಪೂಣಚ್ಚಗೆ ಹೊಸ ರಾಯಲ್ ಗೆಳೆಯ ಸಿಕ್ಕಿದ್ದಾನೆ. ರಮೇಶ್ ಅರವಿಂದ್ ಜೊತೆಗಿನ 'ಮಂಗನ ಕೈಲಿ ಮಾಣಿಕ್ಯ' ಚಿತ್ರ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್ ಗಳಿಗೂ ಈ ಸಿಕ್ಸ್ ಪ್ಯಾಕ್ ಗೆಳೆಯನ ಜೊತೆಗೆ ಭೇಟಿ ನೀಡುತ್ತಿದ್ದಾರೆ ಹರ್ಷಿಕಾ.

ಈ ರಾಯಲ್ ಗೆಳೆಯ ಬೇರಾರು ಅಲ್ಲ ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್. ಈಗ ಇದರ ಮೇಲೆ ಸವಾರಿ ಮಾಡುತ್ತಾ ಹರ್ಷಿಕಾ ಸಂತಸಪಡುತ್ತಿದ್ದಾರೆ. ಇಷ್ಟೆಲ್ಲಾ ಸಾಹಸ ಮಾಡಿ ಬೈಕ್ ರೈಡಿಂಗ್ ಕಲಿತಿರುವುದು ಮರ್ಯಾದೆ ಚಿತ್ರಕ್ಕಾಗಿ.


ಎರಡು ತಿಂಗಳ ಕಾಲ ಬುಲೆಟ್ ಕಲಿಯಲು ಹರ್ಷಿಕಾ ಶ್ರಮಿಸಿದ್ದಾರಂತೆ. ಆದರೆ ಒಮ್ಮೆಯೂ ಇವರು ಬೈಕ್ ಮೇಲೆ ಬೀಳುವುದಾಗಲಿ, ಬೈಕ್ ಇವರ ಮೇಲೆ ಬೀಳುವಂತಹ ಎಡವಟ್ಟುಗಳೇನು ಆಗಿಲ್ಲವಂತೆ. ಒಟ್ಟಾರೆಯಾಗಿ ಈ ಸಿಕ್ಸ್ ಪ್ಯಾಕ್ ಗೆಳೆಯನನ್ನು ಪಳಗಿಸಲು ಎರಡು ತಿಂಗಳು ಬೇಕಾಯಿತು ಎನ್ನುತ್ತಾರೆ ಹರ್ಷಿಕಾ.

ಟೂ ವ್ಹೀಲರ್ ವಿಚಾರಕ್ಕೆ ಬಂದರೆ ಹರ್ಷಿಕಾ ಅವರಿಗೆ ಸ್ಕೂಟಿ ಪೆಪ್, ಹೋಂಡಾ ಆಕ್ಟೀವಾ, ಹೀರೋ ಹೋಂಡಾ ಬೈಕ್ ಗಳನ್ನು ಸಲೀಸಾಗಿ ಓಡಿಸುತ್ತಾರಂತೆ. ಆದರೆ ಬುಲೆಟ್ ನಂತಹ ದ್ವಿಚಕ್ರ ವಾಹನವನ್ನು ಕಂಟ್ರೋಲ್ ಮಾಡುವುದು ಕಷ್ಟ. ಅದರಲ್ಲೂ ಈ ಬೈಕ್ ಹೆಣ್ಮಕ್ಕಳಿಗಂತೂ ಅಲ್ಲ ಬಿಡಿ. ಆದರೆ ಮರ್ಯಾದೆ ಚಿತ್ರದ ತಮ್ಮ ಪಾತ್ರಕ್ಕಾಗಿ ಈ ಸಾಹಸ ಮಾಡಿದ್ದಾರೆ.

English summary
Kannada actress Harshika Poonacha riding a Royal Enfield Bullet for her role in the film Maryade. The shooting for the film started in Mysore a few days ago, Komal Kumar lead the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada