»   » ಹ್ಯಾಟ್ರಿಕ್ ಹೀರೋ ಶಿವಣ್ಣನಿಗೊಂದು ಸಮಸ್ಯೆಯಿದೆ

ಹ್ಯಾಟ್ರಿಕ್ ಹೀರೋ ಶಿವಣ್ಣನಿಗೊಂದು ಸಮಸ್ಯೆಯಿದೆ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ತುಂಬಾ ಸಿಂಪಲ್. ಅವರು ಬಳಸೋ ಕಾರು ನೋಡಿದ್ರೇ ಅದು ಗೊತ್ತಾಗುತ್ತೆ. ಇನ್ನು ಶಿವಣ್ಣ ನಿವ್ಯಾಕೆ ಇಷ್ಟು ಸಿಂಪಲ್ ಅಂತ ಅದೆಷ್ಟೋ ಇಂಟರ್ ವ್ಯೂಗಳಲ್ಲಿ ಕೇಳಿದ್ದಾರೆ. ಅದೆಲ್ಲಾ ತಂದೆ ಡಾ.ರಾಜ್ ರಿಂದ ಬಂದಿರೋ ಗುಣ ಇರ್ಬೇಕು. ನಾನಿರೋದೇ ಹೀಗೆ ಅಂತಾರೆ ಶಿವಣ್ಣ.

ಕ್ವಾರ್ಟರ್ ಸೆಂಚುರಿಗೂ ಹೆಚ್ಚು ವರ್ಷಗಳಲ್ಲಿ ಸೆಂಚುರಿ ಸಿನಿಮಾಗಳನ್ನ ದಾಟಿ ಮುಂದೆ ಹೋಗಿರೋ ಶಿವಣ್ಣ ಸಿನಿಮಾ ಬಗ್ಗೆ ಮಾತ್ರ ಯೋಚಿಸ್ತಾರೆ. ಸಿನಿಮಾದೊಳಗೆ ಮುಳುಗಿ ಹೋಗಿರ್ತಾರೆ. ಶೂಟಿಂಗ್ ಮುಗಿಸಿ ಮನೆಗೆ ಹೋದ್ರೂ ಅಲ್ಲೂ ಅವರ ಸಿನಿಮಾ ಗೆಳೆಯರು, ಕಾಲ್ ಶೀಟ್ ಕೇಳೋ ಪ್ರೊಡ್ಯೂಸರ್ ಗಳು, ಡೈರೆಕ್ಟರ್ಗಳು ಬಂದಿರ್ತಾರೆ.

ಕಳೆದ ವರ್ಷದ ಭಜರಂಗಿ ಗೆಲುವಿನ ನಂತರ ಶಿವಣ್ಣ ಒಪ್ಪಿಕೊಂಡಿರೋ ಸಿನಿಮಾಗಳು ಹೆಚ್ಚೂ ಕಡಿಮೆ ಹತ್ತು. ಇಷ್ಟು ಸಿನಿಮಾಗಳನ್ನ ಒಪ್ಪಿಕೊಂಡಿರೋ ಹ್ಯಾಟ್ರಿಕ್ ಹೀರೋಗೆ ಒತ್ತಡ ಜಾಸ್ತಿಯಾಗಲ್ವ. ಕಷ್ಟ ಆಗಲ್ವಾ ಅನ್ನೋದು ಅವರ ಅಭಿಮಾನಿಗಳ ಆಲೋಚನೆ. ಆದರೆ ಇದರಲ್ಲಿ ಶಿವಣ್ಣನಿಗೆ ಒಂದು ಸಮಸ್ಯೆಯಿದೆ ಅಂತಾರೆ ಅವರ ಆತ್ಮೀಯರು. ಅದರ ಡೀಟೈಲ್ಸ್ ಇಲ್ಲಿದೆ ನೋಡಿ...

ಹಾರರ್ ಸಿನಿಮಾದಲ್ಲಿ ನಟಿಸ್ತಾರಂತೆ

ಇತ್ತೀಚೆಗೆ ಪಿ ವಾಸು ನಿರ್ದೇಶನದ ಹಾರರ್ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಬಂದಿದೆ. ವಜ್ರಕಾಯ ಶೂಟಿಂಗ್ ನಲ್ಲಿ ಪಿ ವಾಸು ಭೇಟಿಯಾದ ಒಂದೇ ಮೀಟಿಂಗ್ ಗೆ ಶಿವಣ್ಣ ಹಾರರ್ ಸಿನಿಮಾಗೆ ಓಕೆ ಅಂದಿದ್ದಾರೆ. ಇಲ್ಲಿಯವರೆಗೂ ಮಾಡದ ಹಾರರ್ ಸಿನಿಮಾವನ್ನ ಒಂದೇ ಮೀಟಿಂಗ್ ನಲ್ಲಿ ಒಪ್ಪಿಕೊಳ್ಳೋದೆ ಶಿವಣ್ಣನ ಸಿಂಪ್ಲಿಸಿಟಿಗೆ ಸಾಕ್ಷಿ.

ಮೋಸ್ಟ್ ವೆಲ್ಕಮ್ ಅನ್ನೋದೇ ಸಮಸ್ಯೆ

ಶಿವಣ್ಣನಿಗೆ ಯಾರಾದ್ರೂ ಬಂದು ಒಂದು ಒಳ್ಳೆಯ ಕಥೆ ಇದೆ ಅಂದ್ರೆ ಸಾಕು, ಸರಿ ಅಂತ ಕೇಳೋಕೆ ನಿಂತು ಬಿಡ್ತಾರೆ. ಒಳ್ಳೆಯ ಸಿನಿಮಾ ಮಾಡ್ಬೇಕು ಅನ್ನೋದಷ್ಟೇ ಅವರ ಯೋಚನೆ. ಇದರಿಂದಾಗೀನೆ ಶಿವಣ್ಣನ ಸಿನಿಮಾಗಳ ಲಿಸ್ಟ್ ಬೆಳೀತಾ ಇರೋದು.

ಇಲ್ಲೂ ಶಿವಣ್ಣ ಸಿಂಪಲ್

ನೂರು ಸಿನಿಮಾಗಳನ್ನ ಮುಗಿಸಿದ ನಟ ಸಹಜವಾಗಿ ಕಥೆಯನ್ನ ಕೇಳೋಕೆ ಇಷ್ಟಪಡೋಲ್ಲ. ದೊಡ್ಡ ದೊಡ್ಡ ಡೈರೆಕ್ಟರ್ ಕಥೆಗಳನ್ನ ಮಾತ್ರ ಕೇಳ್ತಾರೆ. ಹೊಸಬರು ಬಂದ್ರೆ ಟೈಮ್ ಇಲ್ಲ ಅಂತ ಹೇಳಿ ಕಳಿಸ್ತಾರೆ. ಆದರೆ ಹೊಸಬನಲ್ಲಿ ಒಂದು ಹೊಸ ಕಥೆ ಇರಬಹುದು ಅನ್ನೋ ಕಾಳಜಿ ಶಿವಣ್ಣನದ್ದು.

ಕಥೆ ಚನ್ನಾಗಿದ್ರೆ ಸಂಭಾವನೆ ಓಕೆ

ಕಥೆ ಇಷ್ಟವಾದ್ರೆ ಅವ್ರು ಕೊಡೋ ಸಂಭಾವನೆ ವಿಷಯದಲ್ಲಿ ಮಾತಾಡೋಲ್ಲ ಶಿವಣ್ಣ. ಈಗಿರೋ ಹಲವು ಸಿನಿಮಾಗಳು ಶಿವಣ್ಣನಿಗೆ ಕೊಡ್ತಿರೋದು ಒಬ್ಬ ಸ್ಟಾರ್ ನಟನಿಗೆ ಕೊಡ್ತಿರೋ ಸಂಭಾವನೆ ಅಲ್ಲವಂತೆ. ಕಥೆ ಇಷ್ಟವಾಗಿ ಡೈರೆಕ್ಟರ್ ಬಗ್ಗೆ ವಿಶ್ವಾಸ ಬಂದ್ರೆ ಶಿವಣ್ಣ ಕಡಿಮೆ ಸಂಭಾವನೆಗೂ ಸೈ.

ಸುನಿ ಟ್ಯಾಲೆಂಟ್ ಗೆ ಶಹಬ್ಬಾಸ್

ಒಂದೇ ಒಂದು ಸಿನಿಮಾ ಮಾಡಿದ್ದ ನಿರ್ದೇಶಕ ಸಿಂಪಲ್ ಸುನಿಗೆ ಶಿವಣ್ಣ 'ಮನಮೋಹಕ' ಸಿನಿಮಾ ಮಾಡೋಕೆ ಒಪ್ಪಿದ್ದೂ ಕೂಡ ಹೊಸ ಹುಡುಗನ ಟ್ಯಾಲೆಂಟ್ ನೋಡಿ.

ಹೀಗ್ಮಾಡಿದ್ರೆ ಹೇಗೆ ಶಿವಣ್ಣ?

ಆದರೆ ಶಿವಣ್ಣ ಹೀಗೆ ಮಾಡಿದ್ರೆ ಒಂದೇ ಸಾರಿ ಬಂದಷ್ಟೂ ಸಿನಿಮಾಗಳನ್ನ ಒಪ್ಪಿಕೊಂಡ್ರೆ ಹೇಗೆ ಅನ್ನೋದು ಅಭಿಮಾನಿಗಳ ಕಾಳಜಿ. 52 ದಾಟಿದಮೇಲೆ ಅಪರೂಪಕ್ಕೊಂದು ಸಿನಿಮಾ ಮಾಡ್ಬೇಕು. ಈಗ್ಲೂ ಹತ್ತಾರು ಸಿನಿಮಾ ಅಂದ್ರೆ ಟೆನ್ಷನ್ ಪ್ರೆಷರ್ ಜಾಸ್ತಿ ಆಗೋಲ್ವಾ ಶಿವಣ್ಣ ಅಂತಿದ್ದಾರೆ ಅಭಿಮಾನಿಗಳು.

English summary
Hat Trick Hero Shivrajkumar have a proffessional problem? Why Shivanna accepting more and more projects? The actor is accepting too many projects although he is 52 years old. At present 10 movies are in his hand.
Please Wait while comments are loading...