For Quick Alerts
  ALLOW NOTIFICATIONS  
  For Daily Alerts

  ದಿನವೊಂದಕ್ಕೆ ಅತಿ ಹೆಚ್ಚು ಗಳಿಸುವ ಕನ್ನಡ ನಟರಿವರು

  By ಜೀವನರಸಿಕ
  |

  ಸ್ಯಾಂಡಲ್ವುಡ್ನಲ್ಲಿ ಕೈಗೆ ಸಿಗದ ನಟರು ಅಂದ್ರೆ ಯಾರು ಅಂತ ಯೋಚಿಸಿದ್ರೆ ನಮ್ಮ ಕಣ್ಣಿಗೆ ಕಾಣೋದು ಯಾವ ಖಾಸಗಿ ಕಾರ್ಯಕ್ರಮಗಳಲ್ಲೂ ಭಾಗವಹಿಸದ, ಭಾಗವಹಿಸಿದ್ರೂ ಮಾಧ್ಯಮಗಳಿಗೆ ಕಾಣದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸದಾ ಶೂಟಿಂಗ್ನಲ್ಲೇ ಬ್ಯುಸಿಯಾಗಿರೋ ಪವರ್ ಸ್ಟಾರ್ ಪುನೀತ್, ಕಿಚ್ಚ ಸುದೀಪ್ ತರದವ್ರು.

  ಆದ್ರೆ ಈ ಟಾಪ್ಸ್ಟಾರ್ಗಳಿಗಿಂತ ಬ್ಯುಸಿಯಾಗಿರೋ ನಟರು ಕನ್ನಡದಲ್ಲಿದ್ದಾರೆ. ಟಾಪ್ಸ್ಟಾರ್ಗಳಾದ್ರೂ ಮೀಡಿಯಾದವ್ರ ಫೋನ್ ರಿಸೀವ್ ಮಾಡಿದ್ರೆ ಏನಾದ್ರೂ ಪ್ರಶ್ನೆ ಕೇಳ್ತಾರೆ, ಇಂಟರ್ವ್ಯೂವ್ ಬೇಕು ಅಂತಾರೆ ಅಂತ ಫೋನ್ ರಿಸೀವ್ ಮಾಡದೇ ಇರೋದು ಕಾಮನ್. ಯಾಕಪ್ಪಾ ತಲೆ ನೋವು ಅಂತ ಫ್ರೀ ಇದ್ರೂ ಬ್ಯುಸಿ ಇದ್ದವರ ಹಾಗೆ ಬಿಲ್ಡಪ್ ಕೊಡೋದು ಕೆಲವರಿಗೆ ಸರ್ವೇಸಾಮಾನ್ಯ.

  ಆದ್ರೆ ಕೆಲವು ನಟರಿದ್ದಾರೆ. ಈ ನಟರು ನಿಜವಾಗಿಯೂ ಬ್ಯುಸಿ ಇರ್ತಾರೆ. ಯಾರು ಆ ಬ್ಯುಸಿ ನಟರು? ಅತಿ ಹೆಚ್ಚು ಸಂಭಾವನೆ ಪಡೀಯುವ ಸ್ಟಾರ್ ನಟರ ಲಿಸ್ಟ್ ಆಗಾಗ ಹೊರಬರ್ತಾನೇ ಇರುತ್ತೆ. ಸ್ಟಾರ್ ನಟರ ಸಿನಿಮಾಗಳು ಯಶಸ್ವಿ ಆದಾಗಲೆಲ್ಲ ಅವರ ಸಂಭಾವನೆ ಇಷ್ಟಂತೆ. ಬೇಡಿಕೆ ಇದ್ದರೆ ಏರ್ತಿರತ್ತೆ, ಇಲ್ಲದಿದ್ದರೆ ಇಳೀತಿರತ್ತೆ. [ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಯಾರು?]

  ಅವ್ರು ಸ್ಯಾಲರಿ ಹೆಚ್ಚಿಸಿಕೊಂಡ್ರು, ಇವ್ರು ಸಂಭಾವನೆಯನ್ನ ಇಷ್ಟು ಹೆಚ್ಚಿಸಿಕೊಂಡ್ರಂತೆ ಅಂತೆಲ್ಲಾ ಸುದ್ದಿ ಬರ್ತಾನೇ ಇರುತ್ತೆ. ಆದರೆ, ಈಗ ಇಲ್ಲಿ ಬರೆಯುತ್ತಿರುವುದು ಬಿಗ್ ಸ್ಟಾರ್ ನಟರ ಸಂಭಾವನೆಯನ್ನಲ್ಲ. ಬದಲಿಗೆ, ವರ್ಷದ ಲೆಕ್ಕ ಹಾಕಿದರೆ ಸ್ಟಾರ್ ನಟರಿಗಿಂತ ಹೆಚ್ಚು ಗಳಿಸುವ, ಅವರಿಗಿಂತಲೂ ಹೆಚ್ಚು ಪ್ರತಿಭಾವಂತರಾಗಿರುವ ಕಲಾವಿದರ ಸಂಭಾವನೆಯ ಸುದ್ದಿ.

  ರಗಡ್ ರವಿಶಂಕರ್

  ರಗಡ್ ರವಿಶಂಕರ್

  ಕೆಂಪೇಗೌಡ ಚಿತ್ರದಿಂದ ಸ್ಯಾಂಡಲ್ವುಡ್ನಲ್ಲಿ ಜರ್ನಿ ಶುರುಮಾಡಿದ ರವಿಶಂಕರ್ ಖಳನಟನಾಗಿ ಮಾತ್ರವಲ್ಲ ಕಾಮಿಡಿ ಶೇಡ್ ಪಾತ್ರಗಳಲ್ಲೂ ಪ್ರೇಕ್ಷಕರನ್ನ ನಕ್ಕು ನಗಿಸ್ತಿದ್ದಾರೆ. ಈ ಕಾರಣದಿಂದಾನೆ ರವಿಶಂಕರ್ರಿಗೆ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಡಿಮಾಂಡ್ ಇದೆ. ರವಿಶಂಕರ್ ಸದ್ಯ ಪಡ್ಕೊಳ್ತಿರೋ ಸಂಭಾವನೆ ದಿನಕ್ಕೆ 3ರಿಂದ4 ಲಕ್ಷ. ಇದೇ ಒಂದು ವರ್ಷಕ್ಕೆ ಅಂದ್ರೆ ಲೆಕ್ಕ ಹಾಕಿ..

  ಸುದೀಪ್ ಹೇಳಿದ್ದು ಸತ್ಯ

  ಸುದೀಪ್ ಹೇಳಿದ್ದು ಸತ್ಯ

  ಚಿತ್ರರಂಗಕ್ಕೆ ಸುದೀಪ್ ಪರಿಚಯಿಸಿದ ನಟ ರವಿಶಂಕರ್. ಖಳ ನಟನಾಗಿ ಇದು ಆರ್ಮುಗಂ ಕೋಟೆ ಕಣೋ ಅಂತ ಅಬ್ಭರಿಸ್ತಾ ಬಂದ ಆರಡಿಯ ಭೂಪ ರವಿಶಂಕರ್ ಅಭಿನಯಕ್ಕೆ ಈಗ ಪರಭಾಷೆಯಲ್ಲೂ ಬೇಡಿಕೆಯಿದೆ. ಹಾಗಾಗೀನೇ ರವಿಶಂಕರ್ ಸಂಭಾವನೆ ದಿನೇ ದಿನೇ ಏರ್ತಾನೇ ಇದೆ.

  ಕಾಮಿಡಿ ಫ್ಯೂಚರ್ ಚಿಕ್ಕಣ್ಣ

  ಕಾಮಿಡಿ ಫ್ಯೂಚರ್ ಚಿಕ್ಕಣ್ಣ

  ಸ್ಯಾಂಡಲ್ವುಡ್ನ ಭವಿಷ್ಯದ ಕಾಮಿಡಿಯನ್ ಅಂತಲೇ ಕರೆಸಿಕೊಳ್ತಿರೋ ಚಿಕ್ಕಣ್ಣ ಸಂಭಾವನೆ ಗಗನಕ್ಕೇರಿದೆ. ಚಿಕ್ಕಣ್ಣ ಕಣ್ಣು ಸದಾ ಕೆಂಪಾಗಿರೋದ್ರಿಂದ ಚಿಕ್ಕಣ್ಣ ಡ್ರಿಂಕ್ಸ್ ಮಾಡಿರ್ಬೇಕು ಅಂತ ನೀವಂದ್ರುಕೊಂಡ್ರೆ ತಪ್ಪು. ರಾತ್ರಿ ಹಗಲೂ ಶೂಟಿಂಗ್ನಿಂದ ನಿದ್ದೆ ಕೆಟ್ಟು ಚಿಕ್ಕಣ್ಣ ಕಣ್ಣು ಕೆಂಪಾಗಿರುತ್ತೆ.

  ಚಿಕ್ಕಣ್ಣ ಸಂಭಾವನೆ ದುಪ್ಪಟ್ಟು

  ಚಿಕ್ಕಣ್ಣ ಸಂಭಾವನೆ ದುಪ್ಪಟ್ಟು

  ಎರಡು ವರ್ಷದ ಹಿಂದೆ ದಿನಕ್ಕೆ 100 ರುಪಾಯಿ ಸಂಭಾವನೆಗೆ ಸಿಕ್ತಿದ್ದ ಚಿಕ್ಕಣ್ಣ ಕಾಲ್ಶೀಟ್ಗೆ ಈಗ ಒಂದು ದಿನಕ್ಕೆ ಅಂದ್ರೆ 9ರಿಂದ 6 ಗಂಟೆ ವರೆಗಿನ ಶೂಟ್ಗೆ ಒಂದೂವರೆ ಲಕ್ಷ ಕೊಡ್ಬೇಕಾಗುತ್ತೆ. ಅದು ನಾಟಕದಿಂದ ಬೆಳೆದ ಅದ್ಭುತ ಅಭಿನಯಕ್ಕೆ ಸಲ್ಲುವ ವರಮಾನ ಬಿಡಿ. ಚಿಕ್ಕಣ್ಣ ಅಷ್ಟು ಕೇಳೋದ್ರಲ್ಲಿ ತಪ್ಪೇನೂ ಇಲ್ಲ.

  ಸಂಭಾವನೆ ಶೂರ ಸಾಧುಕೋಕಿಲ

  ಸಂಭಾವನೆ ಶೂರ ಸಾಧುಕೋಕಿಲ

  ಕನ್ನಡ ಚಿತ್ರರಂಗದ ಕಾಮಿಡಿ ಕಿಲಾಡಿ ಸಾಧು ತೆರೆಮೇಲೆ ಕಾಣಿಸಿಕೊಂಡ್ರೇ ನಗು ಕನ್ಫರ್ಮ್. ಸಾಧು ನಗಿಸ್ಬೇಕು ಅಂತಿಲ್ಲ. ಅಂತಹಾ ಅದ್ಭುತ ಹಾಸ್ಯ ಕಲಾವಿದನಿಗೆ ದಶಕಗಳಿಂದಲೂ ಬೇಡಿಕೆ ಕಡಿಮೆಯಾಗಿಲ್ಲ. ಈಗಲೂ ಸಾಧು ಸಂಭಾವನೆ ದಿನಕ್ಕೆ 1ರಿಂದ 3 ಲಕ್ಷದ ವರೆಗೂ ಇದೆ.

  ರಂಗಾಯಣ ರಘು ರಂಗು

  ರಂಗಾಯಣ ರಘು ರಂಗು

  ನಟನಾಗಿ ತೆರೆ ಮೇಲೆ ಬಂದ್ರೆ ನಮ್ಮನ್ನ ಮಂತ್ರಮುಗ್ಧಗೊಳಿಸೋ ಅಭಿಜಾತ ಕಲಾವಿದ ರಂಗಾಯಣ ರಘು. ರಾಜಕಾರಿಣಿಯ ಪಾತ್ರಕ್ಕೂ ಸೈ, ಬಿಕ್ಷುಕನ ಪಾತ್ರಕ್ಕೂ ಸೈ. ಹೀಗಾಗೀನೇ ದಶಕಗಳಿಂದಲೂ ಬೇಡಿಕೆ ಉಳಿಸಿಕೊಂಡು ಬಂದಿರೋ ಅಪ್ಪಟ ಕಲಾವಿದ ರಂಗಾಯಣ ರಘು ದಿನದ ಸಂಭಾವನೆ 1 ಲಕ್ಷ.

  ಅತ್ಯುತ್ತಮ ನಟ ಅಚ್ಯುತ್ಕುಮಾರ್

  ಅತ್ಯುತ್ತಮ ನಟ ಅಚ್ಯುತ್ಕುಮಾರ್

  ಅಚ್ಯುತ್ ಕುಮಾರ್ ಅಂದ್ರೆ ಸದ್ಯ ಸ್ಯಾಂಡಲ್ವುಡ್ನ ಬ್ರ್ಯಾಂಡ್ ಪೋಷಕ ನಟ. ವಿಭಿನ್ನ ಪಾತ್ರಗಳಿಗೆ ತನ್ನನ್ನ ತಾನು ಒಗ್ಗಿಸಿಕೊಳ್ಳೋ ಅಚ್ಯುತ್ ಕುಮಾರ್ ಸತತವಾಗಿ 2013, 2014ರ ಅತ್ಯುತ್ತಮ ಪೋಷಕ ನಟ ಅವಾರ್ಡ್ ಪಡೆದಿರೋ ಪ್ರತಿಭಾವಂತ ನಟ. ಅಚ್ಯುತ್ ಕುಮಾರ್ ದಿನವೊಂದಕ್ಕೆ ಲಕ್ಷಗಟ್ಟಲೆ ಸಂಭಾವನೆ ಪಡೀತಾ ಇರೋ ನಟ.

   ಎಲ್ಲರಿಗಿಂತ ಬ್ಯುಸಿ ಇದ್ರೂ..

  ಎಲ್ಲರಿಗಿಂತ ಬ್ಯುಸಿ ಇದ್ರೂ..

  ಈ ನಟರು ವಾರದ ಹಲವು ದಿನ ರಾತ್ರಿ ಹಗಲೂ ಶೂಟ್ ಮಾಡ್ತಾರೆ ಬರೀ ದಿನದ ಒಂದು ಕಾಲ್ಶೀಟ್ ಸಂಭಾವನೆ ಮಾತ್ರ ಅಲ್ಲ. ಹಾಗೆ ನೋಡಿದ್ರೆ ಇವ್ರ ಸಂಭಾವನೆ ವರ್ಷಕ್ಕೊಂದು ಸಿನಿಮಾ ಮಾಡೋ ಸ್ಟಾರ್ ನಟರಿಗಿಂತ ಹೆಚ್ಚೇ ಇರ್ಬಹುದು. ಇಷ್ಟು ಬ್ಯುಸಿ ಇದ್ರೂ ಇವ್ರು ಮಾಧ್ಯಮದವ್ರಿಗೆ ಸಿಗ್ತಾರೆ. ಮಾತ್ನಾಡ್ತಾರೆ. ಅದಕ್ಕೆ ಅವರೆಲ್ಲರಿಗೊಂದು ಥ್ಯಾಂಕ್ಸ್.

  English summary
  Who are the highest paid actors in Kannada film industry on daily basis? Though star actors get payment according to the demand and their value, actors like Ravishankar, Sadhu Kokila, Rangayana Raghu, Achut Kumar earn on daily basis and more than the star actors. Highest paid Kannada actors on daily basis

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X