For Quick Alerts
  ALLOW NOTIFICATIONS  
  For Daily Alerts

  ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ನಟ ಅರುಣ್ ಗೌಡ ವಶಕ್ಕೆ

  By Harshitha
  |

  ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ, ಬಾರ್ ಮಾಲೀಕರಾದ ನಟ ಅರುಣ್ ಗೌಡ ರವರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  'ಮುದ್ದು ಮನಸೇ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ನಟ ಅರುಣ್ ಗೌಡ ಪಾರ್ಟ್ನರ್ ಶಿಪ್ ನಲ್ಲಿ 'ಚಾರ್ ಕೋಲ್ ಕೆಫೆ' ಎಂಬ ಬಿಯರ್/ಹುಕ್ಕಾ ಬಾರ್ ನಡೆಸುತ್ತಿದ್ದರು.

  ಬೆಂಗಳೂರಿನ ಚಂದ್ರ ಲೇಔಟ್ ನಲ್ಲಿರುವ ಎಚ್.ಪಿ ಪೆಟ್ರೋಲ್ ಬಂಕ್ ಬಳಿ ಕಾನೂನು ಬಾಹಿರವಾಗಿ 'ಚಾರ್ ಕೋಲ್ ಕೆಫೆ' ತಲೆಯೆತ್ತಿದೆ ಎಂಬ ಮಾಹಿತಿ ಲಭ್ಯವಾದ ಬೆನ್ನಲ್ಲೇ, ಚಂದ್ರ ಲೇಔಟ್ ಪೊಲೀಸರ ಸಹಾಯದ ಮೇರೆಗೆ ಸಿಸಿಬಿ ಪೊಲೀಸರು ನಿನ್ನೆ (ಮೇ 8) ಸಂಜೆ ದಾಳಿ ನಡೆಸಿ, ಹುಕ್ಕಾ ಬಾರ್ ಮಾಲೀಕರಾದ ನಟ ಅರುಣ್ ಗೌಡ ಸೇರಿದಂತೆ 7 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

  ದಾಳಿ ವೇಳೆ 'ಚಾರ್ ಕೋಲ್ ಕೆಫೆ'ನ ಸೀಝ್ ಮಾಡಿ, 5 ಹುಕ್ಕಾ ಸ್ಟ್ಯಾಂಡ್ ಹಾಗೂ 2 ಕೋಲ್ ಸ್ಟ್ಯಾಂಡ್ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಬೆಂಗಳೂರಿನ ಎ.ಸಿ.ಪಿ ಎಸ್.ರವಿ ಟ್ವೀಟ್ ಕೂಡ ಮಾಡಿದ್ದಾರೆ.

  English summary
  CCB Police, Bengaluru raided Hookah Bar in Chandra Layout yesterday (May 8th) and secured 7 persons including Kannada Actor Arun Gowda of 'Muddu Manase' fame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X