»   » ಡಿಕೆ 'ರಾ' ಲವ್ ಸ್ಟೋರಿಯ ಅಚ್ಚರಿ ಸೀಕ್ರೆಟ್ ಗಳು

ಡಿಕೆ 'ರಾ' ಲವ್ ಸ್ಟೋರಿಯ ಅಚ್ಚರಿ ಸೀಕ್ರೆಟ್ ಗಳು

By: ಜೀವನರಸಿಕ
Subscribe to Filmibeat Kannada

'ಡಿ ಕೆ' ಅನ್ನೋ ಸಿನಿಮಾ ಶುರುವಾದಾಗಲೇ ಚಿತ್ರಪ್ರೇಮಿಗಳಲ್ಲಿ ಶುರುವಾಗಿದ್ದ ಕುತೂಹಲಗಳು ಹಲವು. ಆದರೆ ಪ್ರೆಸ್ ಮೀಟ್ ಕರೆದ ಪ್ರೇಮ್ ರಕ್ಷಿತಾ ಇದು ಸಿಂಪಲ್ಲಾಗ್ ಒಂದ್ ರಾ ಲವ್ ಸ್ಟೋರಿ ಅಂತ ಹೇಳಿ ಮಾಧ್ಯಮದವರ ಮುಂದೆ ನಗೆ ಬೀರಿದರು. ಆದರೆ ಈಗ 'ಡಿ ಕೆ' ಸರ್ಕಾರ್ ನ ಮೊದಲ ಲುಕ್ ಹೊರಬರಲಿದೆ.

ಆದರೆ ಇಲ್ಲಿ ನಿಜಕ್ಕೂ ಕುತೂಹಲ ಅಂದ್ರೆ 'ಡಿ ಕೆ' ಸಿನಿಮಾದ ಫಸ್ಟ್ ಲುಕ್ ಲಾಂಚ್ ಗೆ ಇಂಧನ ಸಚಿವ ಡಿಕೆಶಿನೂ ಇರ್ತಾರಂತೆ. ಸ್ವತಃ ಪ್ರೇಮ್ ಡಿ ಕೆ ಶಿವಕುಮಾರ್ ಮನೆಗೆ ಹೋಗಿ ಅವರನ್ನ ಕಪಾಲಿ ಥಿಯೇಟರ್ ಗೆ ಬರಬೇಕು ಅಂತ ಕರೆದು ಬಂದಿದ್ದಾರೆ. [ಸ್ಯಾಂಡಲ್ ವುಡ್ ನಲ್ಲಿ ಐಟಂ ಬಾಗಿಲು ತೆಗೆದ ಶೇಷಮ್ಮ]

ರಾಜಕೀಯದಲ್ಲಿ ನಂಗ್ಯಾರೂ ಶತ್ರುಗಳಿಲ್ಲ, ಎಲ್ಲರೂ ಮಿತ್ರರೇ ಅಂದಿದ್ದ ಪ್ರೇಮ್ ಮತ್ತಷ್ಟು ರಾಜಕಾರಿಣಿಗಳನ್ನ ಮುಹೂರ್ತಕ್ಕೆ ಆಹ್ವಾನಿಸಿದ್ದಾರಂತೆ. ಜೋಗಿ ಪ್ರೇಮ್ ಪ್ರಚಾರ ಚತುರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಡಿ ಕೆ ಅಂದ್ರೆ ಡಿ ಕೆ ಶಿವಕುಮಾರ್ ಹೌದೋ ಅಲ್ಲವೋ ಗೊತ್ತಿಲ್ಲ. ಅದನ್ನ ಚಿತ್ರತಂಡವೂ ಬಿಟ್ಟುಕೊಟ್ಟಿಲ್ಲ.

ಆದ್ರೆ ಡಿಕೆ ಅನ್ನೋ ಸಿನಿಮಾ ಒಂದಷ್ಟು ಕುತೂಹಲ ಮೂಡಿಸ್ತಿರೋದಂತೂ ನಿಜ. ನಿಜವಾಗ್ಲೂ ಡಿ ಕೆ ಅಂದ್ರೇನು ಅನ್ನೋದ್ರ ಬಗ್ಗೆ ಒಂದಷ್ಟು ಸೀಕ್ರೇಟ್ ಗಳನ್ನ ನಾವ್ ತೆರೆದಿಡ್ತವೆ ಹೌದಾ ಅಂತ ನೀವೂ ಅಚ್ಚರಿಪಡ್ತೀರ ಸ್ಲೈಡ್ ನಲ್ಲಿ ನೋಡಿ.

ಡಿ ಕೆ ರಾ ಲವ್ ಸ್ಟೋರಿ

ಡಿ ಕೆ ಸಿನಿಮಾದ ಟ್ಯಾಗ್ ಲೈನ್ ಆಗಿರೋದು ರಾ ಲವ್ ಸ್ಟೋರಿ ಅಂತ. ಇದು ಯಾಕೆ Raw ಅಂದ್ರೆ ರಕ್ಷಿತಾ ಪ್ರೇಮ್ ಲವ್ ಸ್ಟೋರಿ ಆಗಿರ್ಬಾರ್ದು ಅನ್ನೋ ಕುತೂಹಲ ನಮ್ಮದು.

ರಾಧಿಕಾ ಲವ್ ಸ್ಟೋರಿನಾ?

ಡಿ ಕೆ ಶಿವಕುಮಾರನ್ನು ಆಹ್ವಾನಿಸಿರೋದು ನೋಡಿದ್ರೆ ಇದು ರಾಧಿಕಾ ಕುಮಾರಸ್ವಾಮಿಯವರ ಪ್ರೇಮಕಥೆನಾ ಅನ್ನೋ ಮತ್ತೊಂದು ಕುತೂಹಲವೂ ಮೂಡ್ತಿದೆ.

ಅಬ್ ಕಿ ಬಾರ್ ಮೇರಾ ಸರ್ಕಾರ್

ಡಿ ಕೆ ಟ್ಯಾಗ್ ಲೈನ್ ರಾ ಲವ್ ಸ್ಟೋರಿಯಾದ್ರೆ ಟಾಪ್ ಲೈನ್ "ಅಬ್ ಕಿ ಬಾರ್ ಮೇರಾ ಸರ್ಕಾರ್" ಅಂತ. ಇದು ರಾಜಕೀಯಕ್ಕೂ ಲಿಂಕ್ ಇರೋ ಸ್ಟೋರಿ. ಹಾಗಾಗೀನೇ ಹಿಂದಿನ ಎರಡೂ ಲವ್ ಸ್ಟೋರಿಗಳಿಗೆ ಲಿಂಕ್ ಸಿಗ್ತಿದೆ.

ಗನ್ ಹಿಡಿದಿದ್ದಾರೆ ಪ್ರೇಮ್

ಫಸ್ಟ್ ಲುಕ್ ನಲ್ಲಿ ಪ್ರೇಮ್ ಗನ್ ಹಿಡಿದಿದ್ದಾರೆ. ಹಾಗೆ ನೋಡಿದ್ರೆ ಇದೊಂಥರಾ ಅಂಡರ್ ವರ್ಲ್ಡ್ ಕಥೆ ಇದ್ದ ಹಾಗಿದೆ, ಮೀಸೆ ಬಿಟ್ಟ ಗೆಟಪ್ ನೋಡ್ತಿದ್ರೆ ಯಾವ್ದೋ ಲೋಕಲ್ ರೌಡಿ ತರಹ ಕಾಣ್ತಾರೆ ಪ್ರೇಮ್.

ಚಿತ್ರತಂಡ ಬಾಯ್ಬಿಟ್ಟಿರೋದು ಇದೊಂದನ್ನ ಮಾತ್ರ

ರಿಯಲ್ ಲವ್ ಸ್ಟೋರಿಯಂತೆ. ಇದೊಂದು ರಿಯಲ್ ಲವ್ ಸ್ಟೋರಿ ಅಂತ ನಿರ್ದೇಶಕ ಉದಯಪ್ರಕಾಶ್ ಉಸುರಿದ್ದಾರೆ. ಹಾಗೆ ನೋಡಿದ್ರೆ ಚಿತ್ರತಂಡ ಬಾಯ್ಬಿಟ್ಟಿರೋದು ಇದೊಂದು ವಿಷಯವನ್ನ ಮಾತ್ರ. ಹಾಗಾಗೀನೇ ಹಿಂದಿನ ರಾ ಲವ್ ಸ್ಟೋರಿ ಅನ್ನೋದು ಮತ್ತೆ ಮತ್ತೆ ಹೊಸ ಹೊಸ ಕುತೂಹಲ ಮೂಡಿಸ್ತಿದೆ.

ಸದ್ಯದಲ್ಲೇ ಫಸ್ಟ್ ಲುಕ್ ಲಾಂಚ್

ಫಸ್ಟ ಲುಕ್ ಲಾಂಚ್ ಸದ್ಯದಲ್ಲೇ ರಾಜ್ಯಾದ್ಯಂತ ನಡೆಯುತ್ತೆ. ಅದೂ ಒಂದಲ್ಲ ಎರಡಲ್ಲ 300ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಫಸ್ಟ್ ಲುಕ್ ಹೊರಬೀಳುತ್ತೆ. ಕಪಾಲಿ ಚಿತ್ರಮಂದಿರದಲ್ಲಿ ಲಾಂಚ್ ಆಗಲಿರೋ ಡಿ ಕೆ ಹೇಗಿರ್ತಾನೋ ಅವತ್ತೇ ನೋಡ್ಬೇಕಷ್ಟೆ.

English summary
Here is the interesting facts about Kannada movie DK. It is believed to be based on the life of politician DK Shivakumar, who is popularly known as DK, due to its title. But what it actually stands for?
Please Wait while comments are loading...