For Quick Alerts
  ALLOW NOTIFICATIONS  
  For Daily Alerts

  ಇರ್ಫಾನ್ ಖಾನ್ ನೋಡಿ ಮೆಚ್ಚಿದ್ದರು ಈ ಕನ್ನಡ ಸಿನಿಮಾವನ್ನು

  |

  ನಟ ಇರ್ಫಾನ್ ಖಾನ್ ಅಗಲಿದ್ದಾರೆ. ಅವರ ಅಗಲಿಕೆ ಭಾರತೀಯ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಕರ್ನಾಟಕದೊಂದಿಗೆ ಅದ್ಭುತ ನಂಟು ಹೊಂದಿದ್ದ ಅವರು ಹಲವು ಬಾರಿ ಕರ್ನಾಟಕಕ್ಕೆ ಬಂದು ರಂಗಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.

  ಕನ್ನಡ ಚಿತ್ರ ಒಂದರಲ್ಲಿ ನಟಿಸಬೇಕಿತ್ತು ಇರ್ಫಾನ್ , ಕಥೆ ಕೂಡ ಇಷ್ಟ ಪಟ್ಟಿದ್ದರು | Irrfan khan

  ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರನ್ನು ತಮ್ಮ ಗುರು ಎಂದೇ ಕರೆಯುವ ಇರ್ಫಾನ್ ಗೆ ಕರ್ನಾಟಕ ರಂಗಭೂಮಿ ಚಟುವಟಿಕೆಗಳ ಪರಿಚಯವೂ ಅವರಿಗೆ ಸಾಕಷ್ಟಿತ್ತು.

  ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲಿಯೂ ನಟಿಸುತ್ತಿದ್ದರು ಇರ್ಫಾನ್ ಖಾನ್ಆರೋಗ್ಯ ಸರಿ ಇದ್ದಿದ್ದರೆ ಕನ್ನಡದಲ್ಲಿಯೂ ನಟಿಸುತ್ತಿದ್ದರು ಇರ್ಫಾನ್ ಖಾನ್

  ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ಇರ್ಫಾನ್ ಅವರನ್ನು ಹುಡುಕಿ ಹೋಗಿತ್ತು, ಆದರೆ ಅನಾರೋಗ್ಯದ ಕಾರಣದಿಂದಾಗಿಯೇ ಅದನ್ನು ನಿರಾಕರಿಸಿದ್ದರು ಇರ್ಫಾನ್, ಆದರೆ ಕೆಲವು ವರ್ಷಗಳ ಹಿಂದೆ ಇರ್ಫಾನ್ ಅವರು ಕನ್ನಡ ಸಿನಿಮಾವೊಂದನ್ನು ನೋಡಿ ಮೆಚ್ಚಿಕೊಂಡಿದ್ದರು. ಯಾವುದಾ ಸಿನಿಮಾ? ಮುಂದೆ ಓದಿ...

  ಲೂಸಿಯಾ ಸಿನಿಮಾ ನೋಡಿದ್ದ ಪವನ್ ಕುಮಾರ್

  ಲೂಸಿಯಾ ಸಿನಿಮಾ ನೋಡಿದ್ದ ಪವನ್ ಕುಮಾರ್

  ಇರ್ಫಾನ್ ಖಾನ್ ಅವರು ಪವನ್ ಕುಮಾರ್ ನಿರ್ದೇಶಿಸಿದ ಭಿನ್ನ ಬಗೆಯ ಸಿನಿಮಾ 'ಲೂಸಿಯಾ'ವನ್ನು ವೀಕ್ಷಿಸಿದ್ದರು. ಅಷ್ಟೆ ಅಲ್ಲದೆ ಸಿನಿಮಾವನ್ನು ಮೆಚ್ಚಿಕೊಂಡಿದ್ದರು ಸಹ. ಹೀಗೆಂದು ಸ್ವತಃ ನಿರ್ದೇಶಕ ಪವನ್ ಕುಮಾರ್ ಹೇಳಿದ್ದಾರೆ.

  ಲ್ಯಾಪ್‌ಟಾಪ್ ಅಲ್ಲಿ ಲೂಸಿಯಾ ಸಿನಿಮಾ ನೋಡಿದ್ದ ಇರ್ಫಾನ್

  ಲ್ಯಾಪ್‌ಟಾಪ್ ಅಲ್ಲಿ ಲೂಸಿಯಾ ಸಿನಿಮಾ ನೋಡಿದ್ದ ಇರ್ಫಾನ್

  ಪವನ್ ಕುಮಾರ್ ಅವರು ಇರ್ಫಾನ್ ಖಾನ್ ಅವರ ಮನೆಗೆ ಹೋಗಿ ಅವರಿಗೆ ತಮ್ಮ ಲೂಸಿಯಾ ಸಿನಿಮಾವನ್ನು ತೋರಿಸಿದ್ದರಂತೆ. ಲ್ಯಾಪ್‌ಟಾಪ್‌ ನಲ್ಲಿ ಸುಮಾರು ಎರಡು ಗಂಟೆ ಕಾಲ ಲೂಸಿಯಾ ಸಿನಿಮಾವನ್ನು ಇರ್ಫಾನ್ ಖಾನ್ ನೋಡಿದ್ದಲ್ಲದೆ, ನಂತರ 45 ನಿಮಿಷಗಳ ಕಾಲ ಸಿನಿಮಾ ಬಗ್ಗೆ ಪವನ್ ಅವರೊಡನೆ ಇರ್ಫಾನ್ ಮಾತನಾಡಿದ್ದರಂತೆ.

  ಇರ್ಫಾನ್ ಖಾನ್ ಅಂತರಂಗ ಅನಾವರಣ ಮಾಡಿದ ಮಾಜಿ ರೂಂಮೇಟ್ ಸುರೇಶ್ ಆನಗಳ್ಳಿಇರ್ಫಾನ್ ಖಾನ್ ಅಂತರಂಗ ಅನಾವರಣ ಮಾಡಿದ ಮಾಜಿ ರೂಂಮೇಟ್ ಸುರೇಶ್ ಆನಗಳ್ಳಿ

  ನಿರ್ದೇಶಕ ಪವನ್ ಕುಮಾರ್ ಫೇಸ್‌ಬುಕ್‌ನಲ್ಲಿ ಪೋಸ್ಟ್

  ನಿರ್ದೇಶಕ ಪವನ್ ಕುಮಾರ್ ಫೇಸ್‌ಬುಕ್‌ನಲ್ಲಿ ಪೋಸ್ಟ್

  ನಿರ್ದೇಶಕ ಪವನ್ ಕುಮಾರ್ ಅವರು ಸ್ವತಃ ಇರ್ಫಾನ್ ಖಾನ್ ಅವರ ಅಭಿಮಾನಿ ಆಗಿದ್ದು, ಅವರನ್ನು ತಾವು ಮೊದಲ ಬಾರಿಗೆ ಲಂಡನ್‌ ಅಲ್ಲಿ ಭೇಟಿಯಾದ ಬಗ್ಗೆ, ಅವರೊಟ್ಟಿಗೆ ಮಾತನಾಡಿದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಕನ್ನಡದಲ್ಲಿ ನಟಿಸುವ ಅವಕಾಶ ತಪ್ಪಿಹೋಯಿತು

  ಕನ್ನಡದಲ್ಲಿ ನಟಿಸುವ ಅವಕಾಶ ತಪ್ಪಿಹೋಯಿತು

  ಇರ್ಫಾನ್ ಖಾನ್ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಮಾಡಿದ್ದರಂತೆ. ಇರ್ಫಾನ್ ಖಾನ್ ಅವರನ್ನು ಕನ್ನಡದ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಾಗ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ, ಇಲ್ಲವಾದರೆ ಖಂಡಿತ ನಟಿಸುತ್ತಿದ್ದೆ ಎಂದಿದ್ದರಂತೆ ಇರ್ಫಾನ್.

  English summary
  Actor Irrfan Khan watched Pawan Kumar's Lucia Kannada movie in laptop and appreciated it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X