For Quick Alerts
  ALLOW NOTIFICATIONS  
  For Daily Alerts

  ಹೊಸ ಕಾರು ಖರೀದಿಸಿ, ಅಪಮಾನ ಎದುರಿಸಿದ್ದ ದಿನಗಳ ನೆನೆದ ಜಗ್ಗೇಶ್

  |

  ನಟನಾಗಿ, ರಾಜಕಾರಣಿಯಾಗಿ ಜಗ್ಗೇಶ್ ಚಿರಪರಿಚಿತರು. ರಾಯರ ಅಪ್ಪಟ ಅನುಯಾಯಿಯಾಗಿರುವ ತಮ್ಮ ಜೀವನದಲ್ಲಿ ನಡೆದಿದ್ದೆಲ್ಲ ರಾಯರ ಆಶೀರ್ವಾದದಿಂದ ಎಂದು ನಂಬಿರುವ ಭಕ್ತ.

  ಇಂತಿಪ್ಪ ಜಗ್ಗೇಶ್ ಇದೀಗ ಹೊಸ ಐಶಾರಾಮಿ ಕಾರೊಂದನ್ನು ಖರೀದಿಸಿದ್ದಾರೆ. ಹೊಸದಾಗಿ ಕೊಂಡ ಕಾರನ್ನು ಮೊದಲಿಗೆ ರಾಯರ ಮಠಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಹ ಮಾಡಿದ್ದಾರೆ. ಹೊಸ ಕಾರು ಕೊಂಡ ದಿನ ದಶಕಗಳ ಹಿಂದೆ ತಾವು ಅನುಭವಿಸಿದ್ದ ಅಪಮಾನಗಳನ್ನು, ನೋವುಗಳನ್ನು, ಸಾಗಿ ಬಂದ ಹಾದಿಯನ್ನು ನೆನಪು ಮಾಡಿಕೊಂಡಿದ್ದಾರೆ.

  ಜಗ್ಗೇಶ್, ತಮ್ಮ ಹೊಸ ಕಾರಿಗೆ ಪೂಜೆ ಮಾಡುತ್ತಿರುವ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಆ ವಿಡಿಯೋವನ್ನು ರೀಟ್ವೀಟ್ ಮಾಡಿರುವ ಜಗ್ಗೇಶ್, ರಾಯರಕೃಪೆಯಿಂದ ಹೊಸ ವಾಹನ ಖರೀದಿಸಿದ್ದಾಗಿ ಹೇಳಿದ್ದಾರೆ. ಜೊತೆಗೆ ಹಳೆಯ ಅಪಮಾನವನ್ನೂ ನೆನಪು ಮಾಡಿಕೊಂಡಿದ್ದಾರೆ.

  ಪ್ರೊಡಕ್ಷನ್ ವಾಹನದಲ್ಲೂ ನನ್ನ ಕೂರಿಸುತ್ತಿರಲಿಲ್ಲಾ: ಜಗ್ಗೇಶ್

  ಪ್ರೊಡಕ್ಷನ್ ವಾಹನದಲ್ಲೂ ನನ್ನ ಕೂರಿಸುತ್ತಿರಲಿಲ್ಲಾ: ಜಗ್ಗೇಶ್

  ''40ವರ್ಷದ ಹಿಂದೆ ಸಿನಿಮಾ ಪ್ರೊಡಕ್ಷನ್ ವಾಹನದಲ್ಲೂ ನನ್ನ ಕೂರಿಸುತ್ತಿರಲಿಲ್ಲಾ ಆಗ ಇದೆ ರಾಯರ ಮಠದಲ್ಲಿ ಕಣ್ಣೀರಿಟ್ಟು ರಾಯರಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದೆ. ನಾನು ಪರಿಮಳ ಎಷ್ಟೋ ದಿನ ಈ ಮಠದಲ್ಲಿ ಊಟಮಾಡಿ ಕಾಲಕಳೆದು ನನ್ನಶಕ್ತಿ ಹೆಚ್ಚಿಸಿದ ಮಲ್ಲೇಶ್ವರದ 8ನೆ ಕ್ರಾಸ್ ರಾಯರಮಠ. ನನ್ನ ಬದುಕಿನ ಸಕಲ ನಿರ್ಧಾರವನ್ನು ಇಲ್ಲಿಯೇ ಮಾಡುವುದು'' ಎಂದು ಬರೆದುಕೊಂಡಿದ್ದಾರೆ ನಟ ಜಗ್ಗೇಶ್.

  ಸಂತೋಶ್ ಆನಂದ್‌ರಾಮ್ ಒತ್ತಾಸೆ ಮೇರೆಗೆ ಕಾರು ಖರೀದಿ

  ಸಂತೋಶ್ ಆನಂದ್‌ರಾಮ್ ಒತ್ತಾಸೆ ಮೇರೆಗೆ ಕಾರು ಖರೀದಿ

  ಜಗ್ಗೇಶ್ ಹೊಸ ಬಿಎಂಡಬ್ಲು ಕಾರು ಖರೀದಿಸಿದ್ದಾರೆ. ನಿರ್ದೇಶಕ ಸಂತೋಶ್ ಆನಂದ್‌ರಾಮ್ ಒತ್ತಾಸೆ ಮೇರೆಗೆ ಈ ಬಿಎಂಡ್ಲು ಎಕ್ಸ್‌ 5, ಎಸ್‌ಯುವಿ ಮಾದರಿ ಕಾರನ್ನು ಜಗ್ಗೇಶ್ ಖರೀದಿಸಿದ್ದಾರೆ. ಕಾರಿನ ಪೂಜೆಯನ್ನು ಮಲ್ಲೇಶ್ವರದ ರಾಯರ ಮಠದಲ್ಲಿ ಮಾಡಿಸಿದ್ದಾರೆ. ಈ ಸಮಯದಲ್ಲಿ ಜಗ್ಗೇಶ್‌ರ ಪತ್ನಿ ಪರಿಮಳ ಸಹ ಜೊತೆಯಲ್ಲಿದ್ದರು. ಹೊಸ ಕಾರು ಖರೀದಿಸಿದಾಗ ಅದರಲ್ಲಿ ರಾಯರ ಮೂರ್ತಿ ಇಡುವ ಅಭ್ಯಾಸ ಜಗ್ಗೇಶ್‌ಗೆ ಇದೆ. ಅಂತೆಯೇ ಈ ಕಾರಿನಲ್ಲೂ ರಾಯರ ಮೂರ್ತಿ ಇಟ್ಟಿದ್ದಾರೆ ಜಗ್ಗೇಶ್. ನಿರ್ದೇಶಕ ಸಂತೋಶ್ ಆನಂದ್‌ರಾಮ್ ಸಹ ಕೆಲ ತಿಂಗಳ ಹಿಂದೆ ಬಿಎಂಡಬ್ಲು ಕಾರು ಖರೀದಿ ಮಾಡಿದ್ದಾರೆ.

  ಆಧುನಿಕ ತಂತ್ರಜ್ಞಾನ ಹೊಂದಿರುವ ಬಿಎಂಡಬ್ಲು ಎಕ್ಸ್‌5 ಕಾರು

  ಆಧುನಿಕ ತಂತ್ರಜ್ಞಾನ ಹೊಂದಿರುವ ಬಿಎಂಡಬ್ಲು ಎಕ್ಸ್‌5 ಕಾರು

  ಜಗ್ಗೇಶ್ ಖರೀದಿಸಿರುವ ಬಿಎಂಡಬ್ಲು ಎಕ್ಸ್‌5 ಕಾರು ದುಬಾರಿ ಕಾರಾಗಿದ್ದು, ಈ ಕಾರಿನ ಸರಣಿಯಲ್ಲಿ ಹಲವು ವಿಧದ ಕಾರುಗಳು ಲಭ್ಯವಿವೆ. ಒಂದೊಂದರ ಬೆಲೆ ಒಂದೊಂದು ರೀತಿ ಇದೆ. 1 ಕೋಟಿ ಯಿಂದ ಆರಂಭಗೊಂಡು 3 ಕೋಟಿ ಬೆಲೆಯವರೆಗೂ ಎಕ್ಸ್‌ 5 ಸರಣಿಯಲ್ಲಿ ಕಾರುಗಳು ಲಭ್ಯವಿದೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಈ ಕಾರು ಒಳ್ಳೆಯ ಶಕ್ತಿಯನ್ನು ಸಹ ಹೊಂದಿದೆ. ಅತ್ಯುತ್ತಮ ಎಸ್‌ಯುವಿ ಮಾದರಿ ಕಾರುಗಳಲ್ಲಿ ಒಂದೆನೆಸಿಕೊಂಡಿದೆ ಬಿಎಂಡಬ್ಲು ಎಕ್ಸ್‌ 5.

  ಮೂರು ಸಿನಿಮಾ ಬಿಡುಗಡೆಗೆ ರೆಡಿ

  ಮೂರು ಸಿನಿಮಾ ಬಿಡುಗಡೆಗೆ ರೆಡಿ

  ಜಗ್ಗೇಶ್ ಪ್ರಸ್ತುತ 'ರಾಘವೇಂದ್ರ ಸ್ಟೋರ್ಸ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದ್ದು, ಸಂತೋಶ್ ಆನಂದ್‌ರಾಮ್ ನಿರ್ದೇಶನ ಮಾಡಿದ್ದಾರೆ. ಅದರ ಹೊರತಾಗಿ ಜಗ್ಗೇಶ್ ನಟಿಸಿರುವ 'ತೋತಾಪುರಿ' ಸಿನಿಮಾ ಸಹ ಬಿಡುಗಡೆ ಆಗಬೇಕಿದೆ. ಗುರುಪ್ರಸಾದ್ ನಿರ್ದೇಶನ ಮಾಡಿರುವ 'ರಂಗನಾಯಕ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಹಾಗೂ 'ತೋತಾಪುರಿ' ಸಿನಿಮಾದ ಬಗ್ಗೆ ಜಗ್ಗೇಶ್‌ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

  English summary
  Actor Jaggesh purchased new BMW X5 car. Jaggesh and his Parimala performed Pooja at Malleshwaram Rayara Mutt.
  Saturday, May 21, 2022, 12:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X