Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕುರುಕ್ಷೇತ್ರ' V/S 'ಕೆಂಪೇಗೌಡ 2' : ತಮ್ಮನ ಚಿತ್ರದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ
ಆಗಸ್ಟ್ 2 ರಂದು ಬಿಡುಗಡೆಯಾಗಬೇಕಿದ್ದ 'ಕುರುಕ್ಷೇತ್ರ' ಸಿನಿಮಾ ಆಗಸ್ಟ್ 9ಕ್ಕೆ ಮುಂದಕ್ಕೆ ಹೋಗಿದೆ. ಹೀಗಾಗಿ ಅದೇ ದಿನ ರಿಲೀಸ್ ಆಗುವ 'ಕೆಂಪೇಗೌಡ 2' ಸಿನಿಮಾಗೆ ದೊಡ್ಡ ಸಂಕಷ್ಟ ಎದುರಾಗಿದೆ.
ಈ ಬಗ್ಗೆ ನಿನ್ನೆ (ಜುಲೈ 28) ರಂದು ಮಾತನಾಡಿರುವ ನಟ ಕೋಮಲ್ ಇದ್ದಕ್ಕಿದ್ದ ಹಾಗೆ ಬದಲಾದ 'ಕುರುಕ್ಷೇತ್ರ' ಚಿತ್ರದ ಬಿಡುಗಡೆ ದಿನದಿಂದ ತಮ್ಮ ಸಿನಿಮಾಗೆ ತೊಂದರೆ ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದರು.
'ಫುಟ್
ಪಾತ್
ಮೇಲೆ
ಹೋಗುತ್ತಿದ್ದವನಿಗೆ
ಬಂದು
ಗುದ್ದಿದ್ದಾರೆ':'ಕುರುಕ್ಷೇತ್ರ'
ವಿರುದ್ಧ
'ಕೆಂಪೇಗೌಡ'ನ
ಬೇಸರ
ಈ ಘಟನೆಯ ಬಗ್ಗೆ ನಟ ಹಾಗೂ ಕೋಮಲ್ ಅಣ್ಣ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ''ದರ್ಶನ ಜೊತೆ ನಟಿಸಿ ನನಗಿಂತ ದರ್ಶನನನ್ನು ಹೆಚ್ಚು ಪ್ರೀತಿಸುತ್ತಾನೆ ಕೋಮಲ್. ಅವನ ಅನಿಸಿಕೆ' 'ಕೆಂಪೇಗೌಡ 2' ಬಗ್ಗೆ ಅಸಾಹಯಕತೆ ಮನಬಿಚ್ಚಿ ಹೇಳಿದ್ದಾನೆ. ಮಾಧ್ಯಮ ಮಿತ್ರರಿಗೆ. ಅವನು ನನ್ನಂತೆ ಕನ್ನಡಿಗರ ರಂಜಿಸಿದ ಕನ್ನಡದ ನಟ. ಉತ್ತಮ ಚಿತ್ರಕ್ಕಾಗಿ 3 ವರ್ಷ ಶ್ರಮಿಸಿದ್ದಾನೆ. ಅವನಿಗೂ ಶುಭವಾಗಲಿ ಎಂದು ಹರಸಿ.'' ಎಂದು ಬರೆದುಕೊಂಡಿದ್ದಾರೆ.
ಟ್ವಿಟ್ಟರ್ ನಲ್ಲಿ ದರ್ಶನ್ ಅಭಿಮಾನಿ ''ಸರ್ ಇಲ್ಲಿ ಡಿ ಬಾಸ್ ತಪ್ಪಿಲ್ಲ ಸರ್ ನೀವು ಕೋಮಲ್ ಸರ್ ಗೆ ಹೇಳಿ ಬಾಸ್ ಮೇಲೆ ಕೋಪ ಮಾಡಿಕೊಳ್ಳಬೇಡಿ ಅಂತ ಬಾಸ್ ಏನು ಅಂತ ನಿಮಗೆ ಚೆನ್ನಾಗಿ ಗೊತ್ತು.'' ಎಂದು ಜಗ್ಗೇಶ್ ಗೆ ಮನವಿ ಮಾಡಿದ್ದು, ಈ ಟ್ವೀಟ್ ಗೆ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಕಪಾಳಕ್ಕೆ
ಹೊಡೆದರು,
ಕೀಳಾಗಿ
ನೋಡಿದರು,
ಆಡಿಕೊಂಡರು
ಆದರೂ
ಎದ್ದು
ಬಂದ್ರು
ಕೋಮಲ್
ಈ ಹಿಂದೆ 'ಗಜ', 'ದತ್ತ' ಸೇರಿದಂತೆ ದರ್ಶನ್ ಸಿನಿಮಾದಲ್ಲಿ ಕೋಮಲ್ ನಟಿಸಿದ್ದರು. ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಕೋಮಲ್ 'ಕೆಂಪೇಗೌಡ 2' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದ್ದು, 'ಕುರುಕ್ಷೇತ್ರ' ದೊಡ್ಡ ಸವಾಲು ಹಾಕಿದೆ.