ಭಂಡಾರಿ ಸಹೋದರರ ಎಡವಟ್ಟು : ಜಗ್ಗೇಶ್ ಕಡೆಯಿಂದ ಬಂದ ಒಂದು ಟ್ವೀಟ್ | Filmibeat Kannada
ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ನಿರೂಪ್ ಭಂಡಾರಿ ಕನ್ನಡ ಸಿನಿಮಾ ಪ್ರೇಕ್ಷಕರ ಬಗ್ಗೆ ಆಡಿದ್ದ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರಿಗೆ 'ಕಚಡ ನನ್ ಮಕ್ಳು'' ಎಂದಿದ್ದ ಭಂಡಾರಿ ಸಹೋದರರ ಮಾತು ಕೇಳಿ ಸಾಕಷ್ಟು ಜನರು ಕೆಂಡಾಮಂಡಲವಾಗಿದ್ದಾರೆ. ಜೊತೆಗೆ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಸಹ ಭಂಡಾರಿ ಬ್ರದರ್ಸ್ ಗೆ ಎಚ್ಚರಿಕೆ ನೀಡಿದ್ದರು.
ಇದೀಗ ಈ ಘಟನೆ ಬಗ್ಗೆ ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದಾರೆ. ''ನಲ್ಮೆಯ ಮಿತ್ರರೆ, ಭಂಡಾರಿ ಬ್ರದರ್ಸ್ ಬಹಳ ಮುಗ್ದರು. ವೈಯಕ್ತಿಕವಾಗಿ ತಂದೆ ಮಕ್ಕಳು ಇಬ್ಬರು ಪರಿಚಯ. ಅಂದು ಅವರು ಮಾತಾಡಿದ್ದೆಲ್ಲಾ ತಮಾಷೆ ಹರಟೆಯ ನಿರೂಪಣೆ ಸಮಯದಲ್ಲಿ ಆದ ಅವಘಡ. ಉದ್ದೇಶಪೂರ್ವಕ ಅಲ್ಲಾ.. ನಮ್ಮ ಉದ್ಯಮದ ಪ್ರತಿಯೊಬ್ಬರು ಅನ್ನದಾತರನ್ನು ಗೌರವಿಸುತ್ತಾರೆ. ವಿಷಾಲ ಹೃದಯದಿಂದ ವಿಮರ್ಷಿಸಿ ಮರೆತುಬಿಡಿ. ಉದ್ಯಮದ ಹಿರಿಯನಾಗಿ ಹೃದಯದ ಪ್ರಾರ್ಥನೆ'' ಎಂದು ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮನವಿ ಮಾಡಿದ್ದಾರೆ.
ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'
ವಿವಾದದ ಬಗ್ಗೆ
ಇತ್ತೀಚಿನ ಸಂದರ್ಶನದ ನಡುವೆ ನಿರೂಪಕಿ Rapid ರಶ್ಮಿ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು______'' ಎಂದು ಬಿಟ್ಟ ಸ್ಥಳವನ್ನು ತುಂಬಿಸುವಂತೆ ಕೇಳುತ್ತಾರೆ. ಮೊದಲು ಉತ್ತರಿಸಿದ ಅನೂಪ್ ಭಂಡಾರಿ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು 'ಕಚಡ ನನ್ ಮಕ್ಳು'' ಎಂದು ಹೇಳುತ್ತಾರೆ. ನಂತರ ಆ ಪ್ರಶ್ನೆ ನಟಿ ಅವಾಂತಿಕಾ ಶೆಟ್ಟಿಗೆ ಹೋಗುತ್ತದೆ. ಅವರೂ ಸಹ ಅನೂಪ್ ಅವರ ಉತ್ತರವನ್ನೇ ಮತ್ತೆ ಹೇಳುತ್ತಾರೆ. ಕೊನೆಗೆ ನಿರೂಪ್ ಭಂಡಾರಿ ಕೂಡ ''ರಾಜರಥ' ಸಿನಿಮಾ ನೋಡದ ಪ್ರೇಕ್ಷಕರು 'ಕಚಡ ಮಾತ್ರವಲ್ಲ ಲೋಫರ್ ನನ್ ಮಕ್ಳು'' ಎಂದು ಹೇಳಿಬಿಡುತ್ತಾರೆ.
'ರಾಜರಥ ವಿವಾದ' : ಭಂಡಾರಿ ಹುಡುಗರಿಗೆ ಸಾ.ರಾ.ಗೋವಿಂದು ಎಚ್ಚರಿಕೆ
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.