ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಜೈರಾಜ್ ಅವಿರೋಧ ಆಯ್ಕೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2019 - 2020ರ ಸಾಲಿನ ಚುನಾವಣೆ ದಿನಾಂಕ 29 ಜೂನ್ ರಂದು ನಡೆಯಲಿದೆ. ಇದಕ್ಕೆ ಮೊದಲೇ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರ ಆಯ್ಕೆ ಆಗಿದೆ. ಡಿ ಆರ್ ಜೈರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನರಸಿಂಹಲು ಹಾಗೂ ಸುಂದರ್ ರಾಜ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರೆಲ್ಲ ನಾಮಪತ್ರ ಹಿಂಪಡೆದ ಕಾರಣ ಜೈರಾಜ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜೈರಾಜ್ ಗುಬ್ಬಿಯ ಶ್ರೀ ಚನ್ನಬಸವೇಶ್ವರ ಟಾಕೀಸ್ ನ ಮಾಲೀಕರಾಗಿದ್ದಾರೆ.
ಈ ಬಾರಿ ಪ್ರದರ್ಶಕರ ವಲಯಕ್ಕೆ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವೆಂಕಟರಮಣ ಕೂಡ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎ ಗಣೇಶ ವಿತರಕ ವಲಯದಿಂದ, ಪ್ರದರ್ಶಕ ವಲಯದ ಕಾರ್ಯದರ್ಶಿಯಾಗಿ ನರಸಿಂಹಲು ಆಯ್ಕೆ ಆಗಿದ್ದಾರೆ.

ವಾಣಿಜ್ಯ ಮಂಡಳಿಯ ನಿರ್ಮಾಪಕ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ಬಣಕರ್. ದಿನೇಶ್ ಗಾಂದಿ ಹಾಗೂ ಪ್ರಮಿಳಾ ಜೋಷಾಯಿ ಸ್ಪರ್ಧೆಯಲ್ಲಿದ್ದಾರೆ. ವಾಣಿಜ್ಯ ಮಂಡಳಿಯ ನಿರ್ಮಾಪಕ ವಲಯದ ಚುನಾವಣೆ ಜೂನ್ 29 ರಂದು ನಡೆಯಲಿದೆ.
ಚಿನ್ನೆಗೌಡ ಅವರ ಬಳಿಕ ಡಿ ಆರ್ ಜೈರಾಜ್ ಚಲನಚಿತ್ರ ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ.


Click it and Unblock the Notifications











