For Quick Alerts
  ALLOW NOTIFICATIONS  
  For Daily Alerts

  'ಜಯನಗರ 4ನೇ ಬ್ಲಾಕ್' ಒಂದು ವಿಭಿನ್ನ ಕಿರುಚಿತ್ರ

  By Rajendra
  |

  ಬೆಂಗಳೂರು ಜಯನಗರ ಪ್ರದೇಶವನ್ನು ಹತ್ತು ಬ್ಲಾಕ್ ಗಳಾಗಿ ವಿಗಂಡಿಸಿದ್ದರೂ 4ನೇ ಬ್ಲಾಕ್ ಮಾತ್ರ ತನ್ನದೇ ಆದ ವಿಶಿಷ್ಟತೆಯಿಂದ ಎಲ್ಲರನ್ನೂ ಸೆಳೆಯುತ್ತದೆ. ಬಾಳಸಂಜೆಯಲ್ಲಿರುವವರು, ಯುವಕರು, ಮಕ್ಕಳು, ಪ್ರೇಮಿಗಳು ಹೀಗೆ ಎಲ್ಲರಿಗೂ ಅಚ್ಚುಮೆಚ್ಚಿನ ತಾಣ ಜಯನಗರ. ಕಮರ್ಷಿಯಲ್, ರೆಸಿಡೆನ್ಸಿಯಲ್ ಪ್ರದೇಶಗಳ ಸಂಗಮ ಸ್ಥಳವಿದು.

  ಇದೊಂದು ಕಿರು ಚಿತ್ರವಾದರೂ ಬದುಕಿಗೊಂದು ಕನ್ನಡ ಹಿಡಿಯುವ ಪ್ರಯತ್ನ. ಸ್ನೇಹಕ್ಕೆ ಯಾವ ವಯಸ್ಸಿನ ಅಂತಸ್ತಿನ ಅಂತರ ಇಲ್ಲ ಎಂದು ಸಾರುವ ಚಿತ್ರ. 'ಜಯನಗರ್ 4ನೇ ಬ್ಲಾಕ್' ಮೂರು ಜೀವಗಳ ಸುತ್ತ ನಡೆಯುವ ಘಟನೆ. ಕಳೆದ ವಾರ ರೇಣುಕಾಂಬ ಡಿಜಿಟಲ್ ಚಿತ್ರಮಂದಿರದಲ್ಲಿ ಮಾಧ್ಯಮಕ್ಕೆ ಪ್ರದರ್ಶನ ಮಾಡಲಾಗಿತ್ತು.

  ರಾಷ್ಟ್ರ ಖ್ಯಾತಿ ನಿರ್ದೇಶಕ ಟಿ ಎಸ್ ನಾಗಾಭರಣ, ಕುಂಚ ಕಲಾವಿದ ಬಿ ಕೆ ಎಸ್ ವರ್ಮಾ, ಕಿರುತೆರೆ ನಿರ್ದೇಶಕ ಕಲಾಗಂಗೋತ್ರಿ ಮಂಜು, ಅಂತರಾಷ್ಟ್ರೀಯ ಖ್ಯಾತಿಯ ಕೃಪಾಕರ್ ಹಾಗೂ ಸೇನಾನಿ ಸಹ ಈ ಕಿರುಚಿತ್ರವನ್ನು ನೋಡಿ ಮೆಚ್ಚುಗೆ ತಿಳಿಸಿದರು.

  ಬದುಕಿನ ಘಟನೆಗಳು ಈ ರೀತಿ ಕಿರು ಚಿತ್ರವಾಗುವುದು ವಿರಳ. ಇಲ್ಲಿ ಸೆರೆ ಹಿಡಿರುವ ವಿಚಾರಗಳು ಮನಸ್ಸಿಗೆ ಮುದ ನೀಡುತ್ತದೆ. ಸಿನಿಮಾವನ್ನು ಪೆನ್ನಿನ ಹಾಗೆ ಬಳಸಬೇಕು. ದೃಶ್ಯ ಮಾಧ್ಯಮ ಒಳ್ಳೆ ಸಂದೇಶವನ್ನು ಸಾರಬೇಕು ಎಂದು ಅಭಿಪ್ರಾಯ ಪಟ್ಟರು ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ.

  ಕುಂಚ ಕಲಾವಿದ ಬಿ ಕೆ ಎಸ್ ವರ್ಮಾ 26 ನಿಮಿಷದಲ್ಲಿ ಎರಡು ಘಂಟೆಯಲ್ಲಿ ಹೇಳುವ ವಿಚಾರ ಇಲ್ಲಿ ಹೇಳಲಾಗಿದೆ. ಇದು ಪ್ರಶಂಸನನೀಯ ಎಂದರು. ಇದೊಂದು ಉತ್ತಮ ಪ್ರಯತ್ನ. ಇಂತಹ ಪ್ರತಿಭೆಗಳು ಬರಬೇಕು ಎಂದು ಅಂತರಾಷ್ಟ್ರೀಯ ವನ್ಯ ಮೃಗಗಳ ಚಿತ್ರ ನಿರ್ದೇಶಕ ಸೇನಾನಿ ಅಭಿಪ್ರಾಯ ಪಟ್ಟರು.

  ಏನಿದು ಜಯನಗರ 4ನೇ ಬ್ಲಾಕ್? ನಾಯಕನಾಗಬೇಕಂಬ ಆಸೆಯೊಂದಿಗೆ ಬೆಂಗಳೂರಿಗೆ ಬಂದು ಅಲೆದು ಸಾಕಾಗಿ ಸಂಜೆಯ ಹೊತ್ತಿಗೆ ಜಯನಗರ 4ನೇ ಬ್ಲಾಕ್ ಬಂದು ಕೂರುತ್ತಾನೆ ಧನಂಜಯ್. ಅವರ ಸ್ನೇಹಿತರು ಹಿರಿಯರಾದ ವೆಂಕಿ, ಹೂ ಮಾರುವ ರಾಣಿ ನೀನು ಹೀರೋ ತರಹ ಎಂದು ಧನಂಜಯ್ ರನ್ನು ಗುರುತಿಸುವ ಸ್ನೇಹಿತರ ಸುತ್ತ ಈ ಕಿರುಚಿತ್ರ ಮಾಡಲಾಗಿದೆ. ಮನುಷ್ಯ ಸಂಬಂಧ ಜೊತೆಗೆ ಮಾನವೀಯ ಗುಣಗಳ ಮೌಲ್ಯವನ್ನು ಸಹ ಇಲ್ಲಿ ಹೇಳಲಾಗಿದೆ.

  ಸತ್ಯ ಪ್ರಕಾಷ್ ಅವರ ನಿರ್ದೇಶನ, ಬಿ ಎಸ್ ಕೆಂಪರಾಜ್ ಅವರ ಸಂಕಲನ, ಲವಿತ್ ಅವರ ಛಾಯಾಗ್ರಹಣ, ಸ್ಟೀವ್ ಕೌಶಿಕ್ ಅವರ ಸಂಗೀತ, ಕಥೆ ಹಾಗೂ ಸಂಭಾಷಣೆ ಧನಂಜಯ್, ಚಿತ್ರಕಥೆ ನಟರಾಜ್ ಎಸ್ ಭಟ್, ಧನಂಜಯ್ ಹಾಗೂ ಡಿ ಸತ್ಯಪ್ರಕಾಶ್ ಅವರದು. ತಾರಾಗಣದಲ್ಲಿ ಸುಬ್ಬರಾಯರು (ರಾಷ್ಟ್ರ ಪ್ರಶಸ್ತಿ ಪುರಸ್ಕೃತ), ಧನಂಜಯ್, ದಿವ್ಯಾ, ಧರ್ಮಣ್ಣ ಕಡೂರು, ಬಿಂಬಶ್ರೀ ಹಾಗೂ ಪ್ರಿಯಾಂಕಾ ಇದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  'Jayanagar 4th Block', a Kannada short film by A 28-year-old D Sathya Prakash, a diploma holder in computer science. The 26-minute wonder, crafted by a group of eight youths, is shot entirely in the busy area.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X