»   » ಕಿಚ್ಚನ ತಂಡದ ಕೆನೆಯುವ ಕುದುರೆ 'ಜೋಷ್' ಪ್ರದೀಪ್

ಕಿಚ್ಚನ ತಂಡದ ಕೆನೆಯುವ ಕುದುರೆ 'ಜೋಷ್' ಪ್ರದೀಪ್

Posted By: ಜೀವನರಸಿಕ
Subscribe to Filmibeat Kannada

ಜೋಷ್ ಚಿತ್ರದ ಕಾಲೇಜ್ ಹುಡುಗ ಪ್ರದೀಪ್ ನಿಮ್ಗೆ ನೆನಪಿರಬೇಕು. ಪ್ರದೀಪ್ ಇತ್ತೀಚೆಗೆ ರಂಗನಾಗಿ ರಂಗನ್ ಸ್ಟೈಲ್ ಸಿನಿಮಾದಲ್ಲಿ ಕಾಣಿಸಿಕೊಂಡ್ರು ಅಷ್ಟಾಗಿ ಮಿಂಚಲಿಲ್ಲ. ಆದ್ರೆ ಈಗ ನಡೀತಾ ಇರೋ ಸಿಸಿಎಲ್ ಕ್ರಿಕೇಟ್ ಸೀಸನ್-5ರಲ್ಲಿ ಪ್ರದೀಪ್ ಮಿಂಚುಹರಿಸ್ತಿದ್ದಾರೆ.

ಮೊದಲ ಪಂದ್ಯದಲ್ಲೇ ಭೋಜಪುರಿ ದಬಾಂಗ್ಸ್ ಎದುರು 116 ರನ್ ಗಳಿಸೋ ಮೂಲಕ ಶತಕ ದಾಖಲಿಸಿದ ಪ್ರದೀಪ್ ಹೊಸ ಸಿನಿಮಾವೊಂದಕ್ಕೆ ತಯಾರಿ ನಡೆಸ್ತಿದ್ದಾರೆ. ಪ್ರದೀಪ್ ಹೊಸ ಸಿನಿಮಾವನ್ನ ಪ್ರೊಡ್ಯೂಸ್ ಮಾಡ್ತಿರೋದು ಸ್ವತಃ ಪತ್ನಿ ಇಂಚರಾ. [ಭೋಜ್ ಪುರಿ ತಂಡಕ್ಕೆ ಭಜ್ಜಿ ತಿನ್ನಿಸಿದ ಕರ್ನಾಟಕ ಬುಲ್ಡೋಜರ್ಸ್]

ನಟ ಐಎಎಸ್ ಅಧಿಕಾರಿ ಬಿ ಶಿವರಾಂ ಪುತ್ರಿಯನ್ನ ಪ್ರೀತಿಸಿ 2013ರಲ್ಲಿ ಮದುವೆಯಾಗಿದ್ದ ಪ್ರದೀಪ್ ಪತ್ನಿಯ ಕಡೆಯಿಂದ ಗಿಫ್ಟಾಗಿ ಹೊಸ ಸಿನಿಮಾ ಪಡ್ಕೊಳ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ತಯಾರಿಯನ್ನೂ ನಡೆಸಿರೋ ಈ ಹ್ಯಾಂಡಸಮ್ ಹೀರೋ ಸಿಕ್ಸ್ ಪ್ಯಾಕ್ ಬಾಡಿ ಕೂಡ ಬಿಲ್ಡ್ ಮಾಡ್ತಿದ್ದಾರೆ.

Josh Pradeep draws attention in CCL 5

ಸದ್ಯ ಸಿಸಿಎಲ್ ನಲ್ಲಿ ರನ್ ಹೊಳೆ ಹರಿಸ್ತಿರೋ ಪ್ರದೀಪ್ ಅದೇ ಜೋಷ್ ನಲ್ಲಿ ಸಿನಿಮಾ ಆರಂಭಿಸಲಿದ್ದಾರೆ. ಕಬ್ಬಿಣ ಕಾದಾಗ್ಲೇ ಹೊಡೀಬೇಕು ಅಂತ ಯೋಚಿಸ್ತಿರೋ ಪ್ರದೀಪ್ ಸಿನಿಮಾ ಹೇಗಿರುತ್ತೆ ಅನ್ನೋ ಕುತೂಹಲಕ್ಕೆ ಇದೇ 2015ರ ಫೆಬ್ರವರಿಯಲ್ಲಿ ಉತ್ತರ ಸಿಗಲಿದೆ.

ಈ ಸಲದ ಸಿಸಿಎಲ್ ಆವೃತ್ತಿಯಲ್ಲಿ ಚೊಚ್ಚಲ ಪಂದ್ಯವನ್ನು ಕೈವಶ ಮಾಡಿಕೊಂಡಿದೆ ಕರ್ನಾಟಕ ಬುಲ್ಡೋಜರ್ಸ್. ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಬುಲ್ಡೋಜರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 240 ರನ್ ಗಳ ಸವಾಲನ್ನು ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಭೋಜ್ ಪುರಿ ತಂಡ 202 ರನ್ ಗಳಿಗೆ ಉಸ್ಸಪ್ಪಾ ಎಂದು ಆಟವನ್ನು ಕೈಚೆಲ್ಲಿತು.

ಚೊಚ್ಚಲ ಗೆಲುವಿನ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ 2 ಪಾಯಿಂಟ್ ಗಳನ್ನು ಪಡೆದಿದೆ. ಪ್ರದೀಪ್ ಅವರ ಅಮೋಘ ಆಟ, 67 ಬಾಲ್ ಗಳಲ್ಲಿ 116 ರನ್ ಗಳು ಹಾಗೂ ರಾಹುಲ್ ಅವರ ಆಕರ್ಷಕ 64 ರನ್ ಗಳು (28 ಬಾಲ್ ಗಳು) ಕರ್ನಾಟಕ ಬುಲ್ಡೋಜರ್ಸ್ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿತು.

English summary
'Josh' fame Kannada actor Pradeep draws everybodies attention in recently held Celebrity Cricket League season 5. He scored 116 runs as Karnataka Bulldozers defeated Bhojpuri Dabanggs by 38 runs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada