»   » 'ಕಲಿಯುಗ'ದಲ್ಲಿ ಮತ್ತೆ ಪ್ರತ್ಯಕ್ಷರಾದ ಕಾಳಿ ಸ್ವಾಮಿ

'ಕಲಿಯುಗ'ದಲ್ಲಿ ಮತ್ತೆ ಪ್ರತ್ಯಕ್ಷರಾದ ಕಾಳಿ ಸ್ವಾಮಿ

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ತಾವು ಕಾವಿ ತೊಟ್ಟಿರುವುದನ್ನೂ ಮರೆತು ಸೂಪರೋ ರಂಗ ಎಂದು ಡಾನ್ಸ್ ಮಾಡಿ ಎಲ್ಲರನ್ನೂ ರಂಜಿಸಿದ್ದ ಕಾಳಿ ಮಠದ ಋಷಿಕುಮಾರ ಸ್ವಾಮಿ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಅಯ್ಯೋ ಎಲ್ಲಿ ಯಾವಾಗ ಮತ್ತೆ ಟಿವಿಯಲ್ಲೇ ಎಂದು ಗಾಬರಿಯಾಗಬೇಡಿ.

ಈ ಬಾರಿ ಋಷಿಕುಮಾರ ಸ್ವಾಮಿ 'ಕಲಿಯುಗ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆಯೇ ಕಾಳಿ ಸ್ವಾಮಿಗಳಿಗೆ ಬಣ್ಣ ಹಚ್ಚುವ ಚಾನ್ಸ್ ಸಿಕ್ಕಿತ್ತು. ಆದರೆ ಅಷ್ಟರಲ್ಲೇ ಖಾಸಗಿ ವಾಹಿನಿಯ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದು ಮಾನಮರ್ಯಾದೆ ಕಳೆದುಕೊಂಡಿದ್ದರು.

ಬಳಿಕ 'ದೇವ್ರಾಣೆ' ಚಿತ್ರದಿಂದ ಋಷಿಕುಮಾರ ಸ್ವಾಮಿಗಳನ್ನು ಬಿಳ್ಕೊಡಲಾಗಿತ್ತು. ಬಳಿಕ ಪ್ರತ್ಯಕ್ಷವಾಗಿದ್ದೇ 'ಬಿಗ್ ಬಾಸ್' ಶೋನಲ್ಲಿ. ಅಲ್ಲಿ ನಟಿ ನಿಖಿತಾ ಮೇಲೆ ಕೈಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಕುಂತ್ರೆ ಕಾಳಿ ನಿಂತ್ರೆ ಮಹಾಕಾಳಿ ಎಂದು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ತಾವೊಬ್ಬ ಸಕಲಕಲಾ ಪಾರಂಗತ ಎಂದು ನಿರೂಪಿಸಿಕೊಂಡಿದ್ದರು ಋಷಿಕುಮಾರ.

ಚಲಪತಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ಇನ್ನು ಕಲಿಯುಗ ಚಿತ್ರದ ವಿಚಾರಕ್ಕೆ ಬಂದರೆ ಚಲಪತಿ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರಿಗೆ ಸಹಾಯಕ ನಿರ್ದೇಶಕರಾಗಿದ್ದ ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರವಿದು.

ಋಷಿಕುಮಾರ ಸ್ವಾಮಿಗಳ ನೆಗಟೀವ್ ಶೇಡ್

ಡಿಸೆಂಬರ್ 5ರಿಂದ ಚಿತ್ರೀಕರಣ ಆರಂಭವಾಗಲಿರುವ ಈ ಚಿತ್ರದಲ್ಲಿ ಎಲ್ಲರೂ ಹೊಸಬರು. ಚಿತ್ರದಲ್ಲಿ ಋಷಿಕುಮಾರ ಸ್ವಾಮಿಗಳದ್ದು ನೆಗಟೀವ್ ಶೇಡ್ ವುಳ್ಳ ಪಾತ್ರವಂತೆ. ಬಾಲಿವುಡ್ ನ 'ಕಲಿಯುಗ್' ಚಿತ್ರಕ್ಕೂ ತಮ್ಮ ಚಿತ್ರಕ್ಕೂ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ ಎಂದು ಚಿತ್ರದ ನಿರ್ಮಾಪಕರು ಹೇಳಿಕೊಂಡಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಕಾಳಿ ಮೌನ

ಚಿತ್ರಕಥೆ ಬಗ್ಗೆ, ಋಷಿಕುಮಾರ ಸ್ವಾಮೀಜಿಗಳ ಪಾತ್ರದ ಬಗ್ಗೆ ನಿರ್ದೇಶಕರು ಗುಟ್ಟನ್ನು ಕಾಪಾಡಿಕೊಂಡಿದ್ದಾರೆ. ಇನ್ನು ಋಷಿಕುಮಾರ ಸ್ವಾಮೀಜಿಗಳೂ ಅಷ್ಟೆ ತಮ್ಮ ಪಾತ್ರದ ಬಗ್ಗೆ ಏನೊಂದೂ ಹೇಳುತ್ತಿಲ್ಲ.

ಆಕ್ಷನ್, ಸೆಂಟಿಮೆಂಟ್, ರೊಮ್ಯಾನ್ಸ್ ಸ್ವಾಮಿ

ಋಷಿಕುಮಾರ ಸ್ವಾಮೀಜಿಗಳಲ್ಲೂ ಒಬ್ಬ ಕಲಾವಿದನಿದ್ದಾನೆ ಎಂಬುದು ಗೊತ್ತಾಗಿದ್ದೇ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ. ಅಲ್ಲಿ ಅವರು ಸೂಪರೋ ರಂಗ ಎಂದು ಭರತನಾಟ್ಯ ಶೈಲಿಯಲ್ಲಿ ಕುಣಿದಿದ್ದು, ಕಪ್ಪೆಯಂತೆ ಈಜುಕೊಳಕ್ಕೆ ಡೈವ್ ಹೊಡೆದದ್ದು ನೋಡಿದರೆ ಆಕ್ಷನ್, ಸೆಂಟಿಮೆಂಟ್, ರೊಮ್ಯಾನ್ಸ್ ಎಲ್ಲದರಲ್ಲೂ ಪಳಗಿದ್ದಾರೆ ಅನ್ನಿಸಿತು.

ಕುಂತರೆ ಕಾಳಿ, ನಿಂತರೆ ಮಹಾಕಾಳಿ, ಕೆರಳಿದರೆ ಭದ್ರ ಕಾಳಿ

ಕುಂತರೆ ಕಾಳಿ, ನಿಂತರೆ ಮಹಾಕಾಳಿ, ಕೆರಳಿದರೆ ಭದ್ರ ಕಾಳಿ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿ ಆರಂಭದಲ್ಲಿ ಉಳಿದ ಸದಸ್ಯರಲ್ಲಿ ಭಯಹುಟ್ಟಿಸಿದ್ದರು ಋಷಿಕುಮಾರ ಸ್ವಾಮಿ. ಸೂರ್ಯೋದಯಕ್ಕೂ ಮುನ್ನ ಎದ್ದು ಪೂಜೆ, ಶಂಖ, ಜಾಗಟೆ ಬಾರಿಸುತ್ತಾ ಮನೆಯ ಸದಸ್ಯರಲ್ಲಿ ಭಯ ಭಕ್ತಿ ಮೂಡಿಸಿದ್ದರು.

English summary
Proclaimed godman Rishikumara Swamya aka Kaali Swamy is all set to make his comeback with Sandalwood's forthcoming movie Kaliyuga.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada