»   » ಕಮಲ್ ಜೊತೆ ತುಟಿಗೆ ತುಟಿ ಬೆರೆಸಲಿರುವ ಕಾಜಲ್

ಕಮಲ್ ಜೊತೆ ತುಟಿಗೆ ತುಟಿ ಬೆರೆಸಲಿರುವ ಕಾಜಲ್

By: ಉದಯರವಿ
Subscribe to Filmibeat Kannada

ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳುತ್ತಿರುವ ತಮಿಳು, ಹಿಂದಿ ದ್ವಿಭಾಷಾ ಚಿತ್ರ 'ಉತ್ತಮ ವಿಲನ್'. ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಚಿತ್ರದ ನಾಯಕ ನಟ. ಸುದೀರ್ಘ ಸಮಯದ ಬಳಿಕ ಇಬ್ಬರು ಪ್ರತಿಭಾವಂತರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ. ಇಡೀ ಭಾರತೀಯ ಚಿತ್ರರಂಗವೇ ಎದುರುನೋಡುವಂತಾಗಿದೆ.

ಈ ಚಿತ್ರದ ನಾಯಕಿ ಯಾರು ಎಂಬ ಬಗ್ಗೆ ಹಲವಾರು ತಾರೆಗಳ ಹೆಸರುಗಳು ಕೇಳಿಬರುತ್ತಿವೆ. ಕಡೆಗೆ ದಕ್ಷಿಣದ ಬೆಡಗಿ ಕಾಜಲ್ ಅಗರವಾಲ್ ಅವರಿಗೆ ಚಾನ್ಸ್ ಸಿಕ್ಕಿದೆಯಂತೆ. ಈ ಚಿತ್ರದ ಇನ್ನೊಂದು ಮಹತ್ವದ ಸಂಗತಿ ಎಂದರೆ ಕಮಲ್ ಜೊತೆಗೆ ತುಟಿಗೆ ತುಟಿ ಬೆರಸಲು ಕಾಜಲ್ ಒಪ್ಪಿಕೊಂಡಿದ್ದಾರೆ ಎಂಬುದು.

Actress Kajal lip lock

ಕಮಲ್ ಹಾಸನ್ ಚಿತ್ರ ಎಂದರೆ ತಪ್ಪದೆ ಇರುವ ಒಂದು ಸೀನ್ ಎಂದರೆ ಲಿಪ್ ಲಾಕ್. ಅವರ ವಿಶ್ವರೂಪಂ, ಹೇ ರಾಮ್, ದ್ರೋಹಿ ಚಿತ್ರಗಳಲ್ಲಿ ಲಿಪ್ ಲಾಕ್ ಸೀನ್ ಇತ್ತು. ಉತ್ತಮ ವಿಲನ್ ಚಿತ್ರಕ್ಕೆ ಕಮಲ್ ಓಕೆ ಎಂದ ಕೂಡಲೆ ಕಾಜಲ್ ಅವರನ್ನು ಸಂಪರ್ಕಿಸಲಾಗಿತ್ತು.

ಆರಂಭದಲ್ಲಿ ಕಾಜಲ್ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದು ಕಮಲ್ ಜೊತೆಗೆ ಅಭಿನಯಿಸಲು ಹಿಂದೇಟು ಹಾಕಿದ್ದರು. ಬಳಿಕ ಸಾಕಷ್ಟು ಹೀರೋಯಿನ್ ಗಳ ಹೆಸರು ಕೇಳಿಬಂದಿತ್ತು. ಆದರೆ ಯಾರೂ ಓಕೆ ಆಗಿರಲಿಲ್ಲ. ಕಡೆಗೆ ಕಾಜಲ್ ಅವರೇ ಓಕೆ ಆಗಿದ್ದಾರೆ.

ತಮಿಳಿನ ಖ್ಯಾತ ನಿರ್ಮಾಪಕರಾದ ತಿರುಪತಿ ಬ್ರದರ್ಸ್ ನಿರ್ಮಿಸುತ್ತಿರುವ ಚಿತ್ರಕ್ಕೆ ಕ್ರೇಜಿ ಮೋಹನ್ ಚಿತ್ರಕಥೆ ಇದೆ. ಸದ್ಯಕ್ಕೆ ಕಮಲ್ ಅವರು ವಿಶ್ವರೂಪಂ 2 ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರ ಬಿಡುಗಡೆಯಾದ ಬಳಿಕ ಉತ್ತಮ ವಿಲನ್ ಚಿತ್ರ ಸೆಟ್ಟೇರಲಿದೆ.

English summary
After Vishwaroopam-2, Kamal Haasan is going to act under Ramesh Arvind’s direction for a film titled Uttama Villain. The makers have considered various heroines for this flick and finally zeroed on Kajal Aggarwal.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada