For Quick Alerts
  ALLOW NOTIFICATIONS  
  For Daily Alerts

  ಬ್ರಾಹ್ಮಣರು ಗೋಮಾಂಸ ತಿಂದಿದ್ದಾರೆ: ಕಮಲ್ ಹಾಸನ್

  By ಉದಯರವಿ
  |

  ಸಕಲಕಲಾವಲ್ಲಭ ಕಮಲ್ ಹಾಸನ್ ಅವರು ಕೊಡುವ ಹೇಳಿಕೆಗಳು ವಿವಾದಾತ್ಮಕ ತಿರುವು ಪಡೆದುಕೊಳ್ಳುವುದು ಹೊಸದೇನು ಅಲ್ಲ. ಇತ್ತೀಚೆಗೆ ಅವರು ಗೋಹತ್ಯೆ ನಿಷೇಧದ ಬಗ್ಗೆ ಅವರು ಕೊಟ್ಟಿರುವ ತಾಜಾ ಹೇಳಿಕೆ ಇದೀಗ ಹೊಸ ಸಂಚಲನಕ್ಕೆ ಕಾರಣವಾಗಿದೆ.

  ಗೋಹತ್ಯೆಯನ್ನು ನಿಷೇಧಿಸಿರುವುದು ಸರಿಯಲ್ಲ ಎಂದಿರುವ ಅವರು, ನಿಷೇಧ ವಿಧಿಸುವುದಾದರೆ ಎಲ್ಲ ಹತ್ಯೆಗಳನ್ನೂ ನಿಷೇಧಿಸಲಿ. ಯಾವುದೇ ಪ್ರಾಣಿಯನ್ನೂ ಹತ್ಯೆ ಮಾಡಬಾರದು. ಮಹಾವಿಷ್ಣು ಮತ್ಸ್ಯಾವತಾರ ತಾಳಿದ ಕಾರಣ...ಗೋವಿನಂತೆ ಮೀನು ಸಹ ಪವಿತ್ರವಾದದ್ದು. ಅದರ ಹತ್ಯೆಯನ್ನೂ ನಿಷೇಧಿಸಿ.

  ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ ಬ್ರಾಹ್ಮಣರು ಸಹ ಮೀನನ್ನು ತಿನ್ನುತ್ತಾರೆ. ಇದಿಷ್ಟೇ ಅಲ್ಲದೆ ಕೆಲವು ಶತಮಾನಗಳ ಹಿಂದೆ ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದರು ಎಂದು ಪುರಾಣ ಗ್ರಂಥಗಳಲ್ಲಿ ಇದೆ. ಮಾಂಸಾಹಾರ, ಶಾಕಾಹಾರ ಅದು ಅವರರವರ ವೈಯಕ್ತಿಕ ಇಷ್ಟ ಎಂದು ಕಮಲ್ ತನ್ನದೇ ಆದಂತಹ ಡೈಲಾಗ್ ಹೊಡೆದಿದ್ದಾರೆ. [ರಮೇಶ್-ಕಮಲ್ ಜೋಡಿಯ 'ಉತ್ತಮ ವಿಲನ್' ಟ್ರೇಲರ್]

  ಆಹಾರದ ಮೇಲೆ ಯಾರ ನಿಷೇಧವೂ ಇರಕೂಡದು ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿ ತಂದಿರುವ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಈ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಅವರ ಹೇಳಿಕೆಗಳು ಭಾರಿ ಚರ್ಚೆಗೆ ಗ್ರಾಸವಾಗಿವೆ.

  ಇನ್ನು ಕಮಲ್ ಹಾಸನ್ ಅವರ ಚಿತ್ರಗಳ ವಿಚಾರಕ್ಕೆ ಬಂದರೆ, ರಮೇಶ್ ಅರವಿಂದ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಉತ್ತಮ ವಿಲನ್' ಚಿತ್ರ ಇದೇ ಮೇ.1ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಎನ್ ಲಿಂಗುಸ್ವಾಮಿ ಹಾಗೂ ಕಮಲ್ ಹಾಸನ್ ಜಂಟಿ ನಿರ್ಮಾಪಕರು.

  English summary
  Actor Kamal Hassan Controversial comments on Cow slaughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X