For Quick Alerts
  ALLOW NOTIFICATIONS  
  For Daily Alerts

  ನಟ ಅವಿನಾಶ್ ಇನ್ನಿಲ್ಲ ಎಂದವರಿಗೆ ಎಚ್ಚರಿಗೆ ನೀಡಿದ ನಟ!

  |

  ಕನ್ನಡದ ಕಲಾವಿದ ಅವಿನಾಶ್ ಅವರಿಗೆ ಈಗ ಹೊಸದೊಂದು ತಲೆ ಬಿಸಿ ಶುರುವಾಗಿ ಬಿಟ್ಟಿದೆ. ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಇಲ್ಲ ಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕುರಿತು ನಟ ಅವಿನಾಶ್ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಅವಿನಾಶ್ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

  ಇತ್ತೀಚೆಗೆ ನಟ ಅವಿನಾಶ್ ಇನ್ನಿಲ್ಲ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸುದ್ದಿ ನೋಡಿ ಹಲವರು ಗಾಬರಿ ಗೊಂಡಿದ್ದರು. ಬೇರೆಯವರು ಯಾಕೆ ಸ್ವತಃ ಅವಿನಾಶ್‌ ಅವರೇ ಈ ಸುದ್ದಿಯನ್ನು ನೋಡಿ ದಂಗಾಗಿ ಹೋಗಿದ್ದರಂತೆ. ಆದರೆ ಈಗ ಮತ್ತೆ ಅಂತಹದ್ದೇ ಸುದ್ದಿ ಹರಿದಾಡಿದೆ.

  ಯುಟ್ಯೂಬ್‌ನಲ್ಲಿ ಕೆಲವು ಕಿಡಿಗೇಡಿಗಳು, ಹಿರಿಯ ಕಲಾವಿದ ಅವಿನಾಶ್‌ ಅವರು ಇನ್ನಿಲ್ಲ ಎನ್ನುವ ಸುದ್ದಿಯನ್ನು ಹಬ್ಬಿಸಿದ್ದಾರೆ. ಈ ಸುದ್ದಿ ಕೂಡ ವೈರಲ್ ಆಗಿದೆ. ಆದರೆ ಇದನ್ನು ಕಂಡು ಅವಿನಾಶ್ ಅವರು ಮತ್ತೆ ಶಾಕ್ ಆಗಿದ್ದಾರೆ. ಪದೇ ಪದೆ ಯಾಕೆ ಈ ರೀತಿ ಮಾಡುತ್ತಾರೆ ಎಂದು ಕೇಳುತ್ತಿದ್ದಾರೆ.

  ಅಷ್ಟೇ ಅಲ್ಲ, ಈ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿರುವ ಅವಿನಾಶ್, ಈಗ ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. ಸದ್ಯ ಕಾನೂನು ಕ್ರಮ ಕೈಗೊಳ್ಳಲು ಅವರು ಮುಂದಾಗಿದ್ದಾರೆ. ಇದೆಲ್ಲಾ ನಿಲ್ಲಬೇಕು ಅಂದರೆ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಇಂತಹ ಕೃತ್ಯಕ್ಕೆ ಮುಂದಾದವರಿಗೆ ಅವಿನಾಶ್ ಅವರು ಎಚ್ಚರಿಕೆ ನೀಡಿದ್ದಾರೆ.

  English summary
  Kannada Actor Avinash Is No More: Its A Fake News, Avinash Warn For Creators, know more,
  Thursday, January 6, 2022, 11:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X