»   » ಟಿಕೆಟ್ ದರ 200 ರೂ ನಿಗದಿ: ಆದ್ರೆ, ಜಗ್ಗೇಶ್ ಆಸೆಯೇ ಬೇರೆ ಇದೆ!

ಟಿಕೆಟ್ ದರ 200 ರೂ ನಿಗದಿ: ಆದ್ರೆ, ಜಗ್ಗೇಶ್ ಆಸೆಯೇ ಬೇರೆ ಇದೆ!

Posted By:
Subscribe to Filmibeat Kannada

ಕರ್ನಾಟದಲ್ಲಿ ಏಕರೂಪ ಟಿಕೆಟ್ ದರ ನೀತಿ ಜಾರಿಯಾಗಬೇಕು ಎಂಬುದು ಹಲವು ವರ್ಷಗಳ ಪ್ರಯತ್ನ. ಕೊನೆಗೂ ಈ ನೀತಿ ಜಾರಿಯಾಗಿದೆ. ಇನ್ಮುಂದೆ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲೂ ಗರಿಷ್ಟ ಟಿಕೆಟ್ ದರ 200 ರೂಪಾಯಿ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ನೀಡಿದೆ.['ಮಲ್ಟಿಫ್ಲೆಕ್ಸ್'ಗಳಿಗೆ ಸಿದ್ದು ಸರ್ಕಾರ ಶಾಕ್: ಚಿತ್ರಪ್ರೇಮಿಗಳಿಗೆ 'ಸಿನಿಮಾ ಭಾಗ್ಯ']

ಇದರಿಂದ ಚಿತ್ರಪ್ರೇಮಿಗಳು ಸಖತ್ ಖುಷಿಯಾಗಿದ್ದಾರೆ. ಆದ್ರೆ, ಕೆಲವರು ಇನ್ನೂ ಕಡಿಮೆಯಾಗಬೇಕಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಏಕರೂಪ ಟಿಕೆಟ್ ನೀತಿಗೆ ಸಂಬಂಧಪಟ್ಟಂತೆ ಕನ್ನಡ ನಟ ನವರಸ ನಾಯಕ ಜಗ್ಗೇಶ್ ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಇದು ಸಿರಿವಂತರಿಗೆ ಅನುಕೂಲವಾಗುವ ನಿರ್ಧಾರವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಮೇ ತಿಂಗಳಿಂದ 'ಮಲ್ಟಿಪ್ಲೆಕ್ಸ್'ಗಳಲ್ಲಿ 200 ರೂ ಟಿಕೆಟ್ ಕಡ್ಡಾಯ: ಸಿದ್ದರಾಮಯ್ಯ]

Kannada Actor Jaggesh Reaction on 200 in multiplexes

''ಸಿರಿವಂತರಿಗೆ ಮಾಲ್ ದರ ಲೆಕ್ಕಕ್ಕಿಲ್ಲಾ ಭರಿಸುತ್ತಾರೆ! ನನ್ನ ಕಾಳಜಿ ಮಧ್ಯಮ ಹಾಗೂ ಕೆಳ ಮಧ್ಯಮದ ಪ್ರೇಕ್ಷಕನಿಗೆ. ತಮಿಳುನಾಡಿನಂತೆ 100 ರೂ ಮಾಲ್ ದರವಾಗಿ ಕೈಗೆಟಕಲಿ ಎಂಬ ಆಸೆ'' ಎಂದು ಜಗ್ಗೇಶ್ ತಿಳಿಸಿದ್ದಾರೆ.

Kannada Actor Jaggesh Reaction on 200 in multiplexes

ಸರ್ಕಾರದ ಆದೇಶ ಹೀಗಿದೆ:

* 200 ರೂ ಟಿಕೆಟ್ ದರ ಕರ್ನಾಟಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಭಾಷೆಗಳ ಚಲನಚಿತ್ರಗಳಿಗೆ ಅನ್ವಯಿಸುತ್ತದೆ.

* 200 ರೂ ಗಳ ಗರಿಷ್ಠ ಮಿತಿಯು ಮಲ್ಟಿಪ್ಲೆಕ್ಸ್ ಗಳಲ್ಲಿನ ಗೋಲ್ಡ್ ಕ್ಲಾಸ್ ಸ್ಕ್ರೀನ್ ಹಾಗೂ ಗೋಲ್ಡ್ ಕ್ಲಾಸ್ ಸೀಟ್ ಗಳನ್ನು (ಒಟ್ಟು ಸೀಟುಗಳ ಶೇ 10ರಷ್ಟು ಮೀರದಂತೆ) ಹೊರತುಪಡಿಸಲಾಗಿದೆ.

* ಐಮ್ಯಾಕ್ಸ್ ಹಾಗೂ 4DX ಚಿತ್ರಮಂದಿರಗಳನ್ನೂ ಸಹ 200 ರೂ ಗಳ ಗರಿಷ್ಠ ಮಿತಿಯಿಂದ ವಿನಾಯಿತಿ ಪಡೆದುಕೊಂಡಿವೆ.

ಪ್ರೈಮ್ ಟೈಮ್: ರಾಜ್ಯದಲ್ಲಿರುವ ಮಲ್ಟಿಪ್ಲೆಕ್ಸ್ ಗಳಲ್ಲಿನ ಒಂದು ಪರದೆಯಲ್ಲಿ ಮಧ್ನಾಹ್ನ 1.30 ರಂದ 7.30ರ ವರೆಗಿನ ಪ್ರೈಮ್ ಟೈಮ್(ಪ್ರಮುಖ ಅವಧಿ)ನಲ್ಲಿ ಕನ್ನಡ ಹಾಗೂ ಪ್ರಾದೇಶಿಕ ಚಲನಚತ್ರ ಪ್ರದರ್ಶನವನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.[ಎಲ್ಲಾ ಭಾಷೆಗಳ ಟಿಕೆಟ್ ದರ ಗರಿಷ್ಠ 200 ರು : ಸರ್ಕಾರದ ಆದೇಶ ಜಾರಿ]

English summary
Kannada Actor Jaggesh Gives Reaction on ticket rates Fixed 200 in multiplexes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada