For Quick Alerts
  ALLOW NOTIFICATIONS  
  For Daily Alerts

  ಬೀದಿ ನಾಯಿಗಳಿಗೆ ಗೂಡು ಒದಗಿಸಲು ಮುಂದಾದ ರಕ್ಷಿತ್ ಶೆಟ್ಟಿ

  |

  ನಟ ರಕ್ಷಿತ್ ಶೆಟ್ಟಿ ಬೀದಿ ನಾಯಿಗಳಿಗೆ ಗೂಡು ಒದಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಬೀದಿ ನಾಯಿಗಳನ್ನು ದತ್ತು ಪಡೆದ ಸಾಕಿ ಎಂಬ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.

  ಕೇರ್ ಎನ್ನುವ ಸಂಸ್ಥೆಯ ಜೊತೆಗೆ ನಟ ರಕ್ಷಿತ್ ಶೆಟ್ಟಿ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಎಲ್ಲರ ಸಹಕಾರವನ್ನು ಕೇಳಿಕೊಂಡಿದ್ದಾರೆ.

  '777 ಚಾರ್ಲಿ' ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ '777 ಚಾರ್ಲಿ' ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್

  ''ನಮ್ಮ ದೇಶದ ಪ್ರತಿಯೊಂದು ಬೀದಿಯಲ್ಲಿಯೂ ಎಷ್ಟೊಂದು ನಾಯಿಗಳನ್ನು ನೋಡುತ್ತೇವೆ. ಆದರೆ, ಮನೆಗೆ ಮಾತ್ರ ಬ್ರೀಡ್ ನಾಯಿಗಳನ್ನು ಆಯ್ಕೆ ಮಾಡುತ್ತೇನೆ. ಆದರೆ, ಬ್ರೀಡ್ ನಾಯಿಗಳಿಗಿಂತ, ಬೀದಿ ನಾಯಿಗಳು ಕಡಿಮೆ ಇಲ್ಲ. ನಮ್ಮ ವಾತಾವರಣಕ್ಕೆ ತುಂಬ ಅವು ಚೆನ್ನಾಗಿ ಹೊಂದಿಕೆ ಆಗುತ್ತವೆ. ಅವುಗಳ ಖರ್ಚು ಕೂಡ ಕಡಿಮೆ ಇರುತ್ತದೆ. ಈ ನಾಯಿಗಳಿಗೂ ಮನೆ, ಕುಟುಂಬ, ಪ್ರೀತಿ ಸಿಗುತ್ತದೆ.'' ಎಂದು ವಿಡಿಯೋ ಮೂಲಕ ರಕ್ಷಿತ್ ಮನವಿ ಮಾಡಿದ್ದಾರೆ.

  ನಾಯಿಗಳನ್ನು ಸಾಕಬೇಕು ಎಂದು ಬಯಸುವವರು, ಇದೇ ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಬೀದಿ ನಾಯಿಯನ್ನು ದತ್ತು ಪಡೆಯಬಹುದಾಗಿದೆ. ಕೇರ್ ಸಂಸ್ಥೆ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು, 12 ರಿಂದ 3 ಗಂಟೆವರೆಗೆ ನಡೆಯಲಿದೆ.

  ರಕ್ಷಿತ್ ಶೆಟ್ಟಿ ಸದ್ಯ '777 ಚಾರ್ಲಿ' ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ನಾಯಿಯ ಪಾತ್ರ ಪ್ರಮುಖವಾಗಿದೆ.

  English summary
  Kannada actor Rakshit Shetty requested to adopt a street dog.
  Wednesday, August 7, 2019, 14:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X